ಶನಿವಾರಸಂತೆ, ನ. ೪ : ಪಟ್ಟಣದ ತ್ಯಾಗರಾಜ ಕಾಲೋನಿಯಲ್ಲಿ ಇರುವ ಶ್ರೀ ವಿಜಯ ವಿನಾಯಕ ದೇವಸ್ಥಾನದಲ್ಲಿ ಭಾನುವಾರ ರಾತ್ರಿ ಯಾರೋ ಕಳ್ಳರು ದೇವಸ್ಥಾನದ ಬಾಗಿಲ ಬೀಗ ಒಡೆದು ಪ್ರಾಂಗಣದಲ್ಲಿದ್ದ ಹುಂಡಿ ಹೊತ್ತುಕೊಂಡು ಹೋಗಿ ಹಣ ತೆಗೆದುಕೊಂಡು ಖಾಲಿ ಹುಂಡಿಯನ್ನು ಸಮೀಪದ ದುಂಡಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಿಂಭಾಗ ಎಸೆದು ಹೋಗಿರುವ ಘಟನೆ ನಡೆದಿದೆ. ಪೊಲೀಸರು ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಕಳ್ಳರು ಸ್ಕೂಟರ್‌ನಲ್ಲಿ

(ಮೊದಲ ಪುಟದಿಂದ) ಬಂದು ಕಳ್ಳತನ ಮಾಡಿರುವ ದೃಶ್ಯ ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾಗಿದೆ.

ದೇವಸ್ಥಾನ ಸಮಿತಿ ಅಧ್ಯಕ್ಷ ಎಸ್.ಆರ್. ಮಧು ಪೊಲೀಸ್ ಠಾಣೆಗೆ ದೂರು ನೀಡಿರುತ್ತಾರೆ.

ಪಟ್ಟಣದ ಮತ್ತೊಂದು ದೇವಾಲಯ ಶ್ರೀರಾಮ ಮಂದಿರದ ಹುಂಡಿಯನ್ನೂ ಸಹ ಕಳವು ಮಾಡಲಾಗಿದೆ. ಬೀಗ ಒಡೆದು ಒಳ ನುಗ್ಗಿ ಹಣವನ್ನು ಕದ್ದು ಖಾಲಿ ಹುಂಡಿಯನ್ನು ಮಂದಿರದ ಮುಂಭಾಗ ಎಸೆದು ಹೋಗಿ ದ್ದಾರೆ. ಸೇವಾ ಸಮಿತಿಯ ಅಧ್ಯಕ್ಷ ಅರವಿಂದ ದೂರು ನೀಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ ಎರಡೂ ದೇವಸ್ಥಾನಗಳ ಕಳವು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.