ವೀರಾಜಪೇಟೆ, ನ. ೪: ಕಾವೇರಿ ನದಿ ಸಂರಕ್ಷಿಸಿ, ಸ್ವಚ್ಛತೆ ಕಾಪಾಡಿ ಎಂಬ ಕೂಗು ನಾನಾ ಸಂಘಟನೆಗಳು, ಪರಿಸರವಾದಿಗಳಿಂದ ಕೇಳಿ ಬರುತ್ತಿದೆ. ಆತಂಕದ ಸಂಗತಿ ಎಂದರೆ ಯಾವುದೇ ಅಡೆತಡೆ ಇಲ್ಲದೆ ಕಲುಷಿತ ನೀರು ನದಿ ಸೇರುತ್ತಲೇ ಇದೆ.
ದಕ್ಷಿಣ ಭಾರತದ ಜೀವನದಿ, ಕೋಟ್ಯಂತರ ಮಂದಿಗೆ ಜೀವಜಲವಾಗಿರುವ, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಯನ್ನು ಹಸಿರಾಗಿಸುತ್ತಿರುವ ಕಾವೇರಿ ನದಿ ದಿನೇ ದಿನೆ ಕಲುಷಿತಗೊಳ್ಳುತ್ತಿದೆ. ಉಗಮಸ್ಥಾನದಿಂದಲೇ ನದಿ ನೀರು ಮಲಿನವಾಗುತ್ತಿದ್ದು, ನದಿತೀರದ, ನಗರ, ಪಟ್ಟಣ, ಗ್ರಾಮಗಳ ತ್ಯಾಜ್ಯ ಕಾವೇರಿ ಒಡಲು ಸೇರುತ್ತಿದೆ.
ವೀರಾಜಪೇಟೆ ಸೇರಿದಂತೆ ಇತರೆಡೆಗಳಿಂದ ನದಿಗಳು, ರಾಜಕಾಲುವೆ ಮೂಲಕ ಬೃಹತ್ ಪ್ರಮಾಣದಲ್ಲಿ ದುರ್ವಾಸನೆಯಿಂದ ಕೂಡಿದ ಕಲುಷಿತ ನೀರು, ಚರಂಡಿಯಿAದ ಸೋರಿಕೆಯಾಗುವ ನೀರು ನಿತ್ಯ ಭಾರಿ ಪ್ರಮಾಣದಲ್ಲಿ ಕಾವೇರಿ ಒಡಲು ಸೇರುತ್ತಿದೆ.
ವೀರಾಜಪೇಟೆ ಪಟ್ಟಣದಲ್ಲಿ ಕೆಲವರು ತ್ಯಾಜ್ಯಗಳನ್ನು ನೇರವಾಗಿ ರಾಜಕಾಲುವೆಗೆ ಹರಿಬಿಡುತ್ತಿದ್ದು, ಇದು ನೇರವಾಗಿ ಕಾವೇರಿ ನದಿ ಸೇರುತ್ತಿದೆ. ಅಲ್ಲದೆ ರಾಜ ಕಾಲುವೆ ಪಕ್ಕದಲ್ಲೆ ಮನೆ ನಿರ್ಮಾಣ ಮಾಡಿಕೊಂಡಿರುವುದರಿAದ ಮಲಿನ ವಸ್ತುಗಳು ರಾಜಕಾಲುವೆಯಲ್ಲಿ ತುಂಬಿಕೊAಡು ಮಳೆ ಬಂದಾಗ ನೀರು ಹರಿಯಲಾರದ ಪರಿಸ್ಥಿತಿ ಎದುರಾಗಿದೆ.
ತ್ಯಾಜ್ಯ ವಸ್ತುಗಳನ್ನು ನೀರಿಗೆ ಹಾಕುವುದು, ಕಂಡಕAಡಲ್ಲಿ ಎಸೆಯುವುದು ಮಾಡಬಾರದು ಎಂಬ ಅಧಿಕಾರಿರಳ ಮಾತು ಜನರಿಗೆ ಕೇಳುವುದೇ ಇಲ್ಲ ಎಂಬAತಾಗಿದೆ.
ಕಲುಷಿತ ನೀರನ್ನು ನದಿಗೆ ಬಿಡದಂತೆ ಜನಜಾಗೃತಿ ಮೂಡಿಸುವುದು, ಸಂಬAಧಪಟ್ಟ ಇಲಾಖೆಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಕುಡಿಯುವ ನೀರಿನ ಪ್ರಮುಖ ಮೂಲಗಳಾಗಿರುವ ನದಿಗಳು ಈಗ ಪರಿಶುದ್ಧ ನದಿಗಳಾಗಿ ಉಳಿದಿಲ್ಲ. ಎಲ್ಲ ನದಿಗಳು ಕಲ್ಮಷದ ಬಲೆಯೊಳಗೆ ಸಿಲುಕಿಕೊಂಡಿವೆ. ಕುಡಿಯುವುದು ಮಾತ್ರವಲ್ಲ ಈ ನದಿಗಳಲ್ಲಿ ಸ್ನಾನ ಮಾಡಿದರೂ ಆರೋಗ್ಯಕ್ಕೆ ಹಾನಿಯಾಗಲಿದೆ ಎಂದು ವರದಿಗಳು ಎಚ್ಚರಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕಾವೇರಿ ನದಿಯ ನೀರು ಕಲುಷಿತಗೊಳ್ಳುüತ್ತಿರುವುದು, ನೀರಿನ ಗುಣಮಟ್ಟ, ಒತ್ತುವರಿ, ಕಣಿವೆ, ನಾಲೆಗಳ ಸಂಖ್ಯೆ ಸೇರಿದಂತೆ ಹಲವು ಅಂಶಗಳನ್ನು ಅಧ್ಯಯನ ಮಾಡುವ ಕಾರ್ಯವನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪರಿಸರ ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆ ಕೈಗೆತ್ತಿಕೊಂಡಿದ್ದರೂ ಪ್ರಯೊಜನ ಶೂನ್ಯ.
ದಕ್ಷಿಣ ಭಾರತದ ಪ್ರಮುಖ ನದಿಯಾಗಿರುವ ಕಾವೇರಿ ನದಿ ಮೇಲೆ ಬಹು ಅಧ್ಯಯನ ಕೈಗೊಳ್ಳಲಾಗಿದೆ. ಈ ಎಲ್ಲ ಅಧ್ಯಯನಕ್ಕೆ ಬಳಸಿಕೊಳ್ಳಲಾದ ಸ್ಯಾಂಪಲ್ಗಳೆಲ್ಲವೂ ಕಾವೇರಿ ನದಿ ಕಲುಷಿತಗೊಂಡಿರುವ ಎಚ್ಚರಿಕೆಯನ್ನು ರವಾನಿಸಿವೆ.
ಇಂದು ಜನಸಂಖ್ಯೆಯ ಹೆಚ್ಚಳ ಹಾಗೂ ತ್ಯಾಜ್ಯಗಳ ಸುರಿಯುವಿಕೆಯಿಂದ ಕಲುಷಿತಗೊಳ್ಳುತ್ತಿರುವುದಲ್ಲದೆ ಪಟ್ಟಣದ ತ್ಯಾಜ್ಯಗಳನ್ನು ಕಾಲುವೆ ಪಕ್ಕದಲ್ಲೇ ರಾಶಿ ಹಾಕುವ ಕಾರಣ ತ್ಯಾಜ್ಯ ರಾಶಿಯಿಂದ ಹರಿಯುವ ಕೊಳಚೆಗಳು ನೇರ ನದಿಯನ್ನೇ ಸೇರುತ್ತದೆ.
ಕೋಳಿಗಳನ್ನು ಒಂದೆಡೆಯಿAದ ಇನ್ನೊಂದೆಡೆ ಸಾಗಿಸುವಾಗ ಉಸಿರುಗಟ್ಟಿ ಸತ್ತರೆ ಏನು ಮಾಡುವುದು? ದಾರಿಯಲ್ಲಿ ಸಿಗುವ ನದಿಗೆ ಎಸೆಯುವುದು. ಜನರ ಇಂಥ ಮನಸ್ಥಿತಿಯಿಂದಲೇ ಕೊಡಗಿನ ಜೀವನದಿ ಕಾವೇರಿ ಮಲಿನವಾಗುತ್ತಿದೆ.
ನದಿಗೆ ಅಡ್ಡಲಾಗಿ ಕಟ್ಟಲಾದ ಸೇತುವೆ ವಾಹನ ಸಂಚರಿಸಲು ಉಪಯೋಗವಾಗುವುದಷ್ಟೇ ಅಲ್ಲ, ಕಸ ಎಸೆಯಲೂ ಬಳಕೆಯಾಗುತ್ತದೆ. ಕಾವೇರಿ ನದಿಗೆ ಊರಿನ ಕೊಳಕೆಲ್ಲಾ ಚರಂಡಿ ಮೂಲಕ ಬಂದು ಸೇರುತ್ತದೆ. ಎಲ್ಲೆಲ್ಲಿ ನದಿಗೂ ತೋಡಿಗೂ ಸಂಪರ್ಕ ಇದೆಯೋ, ಅಲ್ಲೆಲ್ಲ ಕೊಳಕು ಬಂದು ನದಿಯನ್ನು ಅಪವಿತ್ರಗೊಳಿಸುತ್ತವೆ. ದೊಡ್ಡ ಪ್ಲಾಸ್ಟಿಕ್ ಲಕೋಟೆಗಳಲ್ಲಿ ಕಸವನ್ನು ತುಂಬಿ ನದಿಗೆ ಎಸೆಯುವ ಪ್ರವೃತ್ತಿ ಇದಕ್ಕಿಂತಲೂ ಘೋರ. ರಾತ್ರಿ ವೇಳೆ ಇಂಥ ಕೆಲಸ ನಡೆಯುತ್ತವೆ.
ಕೇಂದ್ರ ಸರಕಾರ ಸ್ವಚ್ಛ ಭಾರತ್ ಆಂದೋಲನ ದೇಶ ವ್ಯಾಪಿ ವಿಸ್ತರಿಸಿ ಸ್ವಚ್ಛತೆ ಬಗ್ಗೆ ಜನತೆಯನ್ನು ಜಾಗೃತಗೊಳಿಸಲು ಅವಿರತವಾಗಿ ಶ್ರಮಿಸುತ್ತಿದೆ. ಇದಲ್ಲದೆ ನದಿಗಳ ಸ್ವಚ್ಛತೆಗೂ ಪ್ರಾಮುಖ್ಯತೆ ನೀಡಿದ್ದರೂ ಇದರ ಅರಿವಿಲ್ಲದ ಕೆಲ ಅಧಿಕಾರಿಗಳು, ಇಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿ, ಸಿಕ್ಕ ಸಿಕ್ಕ ಕಡೆ ರಾಜಕಾಲುವೆಗಳ ಮೂಲಕ ನದಿಗೆ ನೇರವಾಗಿ ತ್ಯಾಜ್ಯದ ನೀರು ಸೇರ್ಪಡೆಗೊಳ್ಳುವಂತೆ ಮಾಡಿದ್ದಾರೆ. ನದಿ ಮಲಿನವಾಗದಂತೆ ನೋಡಿಕೊಳ್ಳುವುದು ಸರಕಾರದ ಹೊಣೆಗಾರಿಕೆಯಾಗಿದೆ. ಕೋಟ್ಯಂತರ ಜನರ ಹಸಿವು, ಬಾಯಾರಿಕೆ ನೀಗಿಸುತ್ತಿರುವ ಕಾವೇರಿ ನದಿ ತನ್ನ ತವರಲ್ಲೇ ಕಲುಷಿತವಾಗುತ್ತಿದೆ. ಹೀಗೆಯೇ ಮುಂದುವರಿದರೆ ಮುಂದೆ ಕುಡಿಯುವ ನೀರಿಗೂ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆಯಿದೆ. ಸಂಬAಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಕಲುಷಿತ ನೀರು ನದಿಗೆ ಹರಿಯದಂತೆ ತಡೆಗಟ್ಟಬೇಕು ಎಂಬುದು ಸಾರ್ವಜನಿಕರ ಒತ್ತಾಸೆಯಾಗಿದೆ.