ಪೊನ್ನAಪೇಟೆ, ನ. ೫: ಪೊನ್ನಂಪೇಟೆ ತಾಲೂಕಿನ ಕಾನೂರು ಗ್ರಾಮದ ಫ್ರೆಂಡ್ಸ್ ಅಸೋಸಿಯೇಷನ್ ವತಿಯಿಂದ ಕಾನೂರು ಸರ್ಕಾರಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾನೂರು ಚಾಂಪಿಯನ್ಸ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕುಟ್ಟ ಸಿ.ವೈ.ಸಿ ತಂಡ, ಪೊನ್ನಂಪೇಟೆ ಫ್ರೆಂಡ್ಸ್ ತಂಡದ ವಿರುದ್ಧ ಜಯಭೇರಿ ಬಾರಿಸುವ ಮೂಲಕ ಚಾಂಪಿಯನ್ ಪಟ್ಟ ಅಲಂಕರಿಸಿತು. ಪೊನ್ನಂಪೇಟೆ ಫ್ರೆಂಡ್ಸ್ ತಂಡ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
ಚಾAಪಿಯನ್ ತಂಡಕ್ಕೆ ಆಕರ್ಷಕ ಟ್ರೋಫಿ ಹಾಗೂ ರೂ.೩೦ ಸಾವಿರ ನಗದು ಬಹುಮಾನ, ರನ್ನರ್ ಅಪ್ ತಂಡಕ್ಕೆ ರೂ.೨೦ ಸಾವಿರ ನಗದು ಬಹುಮಾನ ನೀಡಲಾಯಿತು.
ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಕುಟ್ಟ ಸಿ.ವೈ.ಸಿ ತಂಡ ಕ್ಷೇತ್ರ ರಕ್ಷಣೆಯನ್ನು ಆಯ್ಕೆ ಮಾಡಿಕೊಂಡು, ಪೊನ್ನಂಪೇಟೆ ಫ್ರೆಂಡ್ಸ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ನೀಡಿತು. ನಿಗದಿತ ೪ ಓವರ್‌ಗಳಲ್ಲಿ ೮ ವಿಕೆಟ್ ಕಳೆದುಕೊಂಡು ೨೧ ರನ್‌ಗಳ ಸಾಧಾರಣ ಮೊತ್ತ ಗಳಿಸಿದ ಪೊನ್ನಂಪೇಟೆ ಫ್ರೆಂಡ್ಸ್ ತಂಡ ಕುಟ್ಟ ಸಿ.ವೈ.ಸಿ ತಂಡಕ್ಕೆ ೨೨ ರನ್‌ಗಳ ಸುಲಭ ಗುರಿ ನೀಡಿತು.
೨೨ ರನ್‌ಗಳ ಗುರಿ ಬೆನ್ನಟ್ಟಿದ ಕುಟ್ಟ ತಂಡದ ಪರ ಆರಂಭಿಕ ಆಟಗಾರ ದಿನೇಶ್ ಕೇವಲ ೫ ಎಸೆತಗಳಲ್ಲಿ ೨ ಸಿಕ್ಸರ್, ೧ ಬೌಂಡರಿ ಸಮೇತ ಸಿಡಿಸಿದ ೧೭ ರನ್‌ಗಳ ನೆರವಿನಿಂದ ೧ ವಿಕೆಟ್ ಕಳೆದುಕೊಂಡು ಕೇವಲ ೯ ಎಸೆತಗಳಲ್ಲಿ ಗುರಿ ಮುಟ್ಟಿದ ಕುಟ್ಟ ಸಿ.ವೈ.ಸಿ ತಂಡ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿತು.
ಫೈನಲ್ ಪಂದ್ಯಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪೊನ್ನಂಪೇಟೆ ಫ್ರೆಂಡ್ಸ್ ತಂಡ ಗೋಣಿಕೊಪ್ಪ ಸುಲ್ತಾನ್ ಆ್ಯಶಸ್ ತಂಡದ ವಿರುದ್ಧ ಗೆಲುವು ಸಾಧಿಸಿ ಫೈನಲ್ ಪ್ರವೇಶ ಪಡೆದುಕೊಂಡರೆ, ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕುಟ್ಟ ಸಿ.ವೈ.ಸಿ ತಂಡ ನಾಣಚ್ಚಿ ರೈಸಿಂಗ್ ಸ್ಟಾರ್ ತಂಡದ ವಿರುದ್ಧ ಜಯಗಳಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು.
ಸೆಮಿಫೈನಲ್‌ನಲ್ಲಿ ಸೋತ ತಂಡಗಳಿಗೆ ಆಕರ್ಷಕ ಟ್ರೋಫಿ ಹಾಗೂ ೫ ಸಾವಿರ ರೂ. ನಗದು ಬಹುಮಾನ ನೀಡಲಾಯಿತು.
ವೈಯಕ್ತಿಕ ಪ್ರಶಸ್ತಿ :
ಬೆಸ್ಟ್ ಬ್ಯಾಟ್ಸ್ ಮನ್ ಆಗಿ ಸೂಪರ್ ಕಿಂಗ್ಸ್ ತಂಡದ ಮಣಿಯ, ಬೆಸ್ಟ್ ಬೌಲರ್ ಆಗಿ ಪೊನ್ನಂಪೇಟೆ ಫ್ರೆಂಡ್ಸ್ ತಂಡದ ಜೋಜೋ, ಬೆಸ್ಟ್ ಫೀಲ್ಡರ್ ಆಗಿ ಕುಟ್ಟ ಸಿ.ವೈ.ಸಿ ತಂಡದ ಮನು, ಬೆಸ್ಟ್ ಕೀಪರ್ ಆಗಿ ಕುಟ್ಟ ಸಿ.ವೈ.ಸಿ ತಂಡದ ಅಭಿಜಿತ್, ಹೈಯೆಸ್ಟ್ ಸಿಕ್ಸರ್ ಬಾರಿಸಿದ ಆಟಗಾರನಾಗಿ ಬಾಳೆಲೆ ಬ್ಲಾಸ್ಟರ್ ತಂಡದ ಸಿದ್ದಿಕ್, ಬೆಸ್ಟ್ ಕ್ಯಾಪ್ಟನ್ ಆಗಿ ಪೂಜಕಲ್ ತಂಡದ ಮಣಿ, ಎಮರ್ಜಿಂಗ್ ಪ್ಲೇಯರ್ ಆಗಿ ಫಾರೆಸ್ಟ್ ರೈಡರ್ಸ್ ತಂಡದ ಡ್ಯಾನಿಯಲ್, ಫೈನಲ್ ಪಂದ್ಯದ ಮ್ಯಾನ್ ಆಫ್ ದಿ ಮ್ಯಾಚ್ ಆಗಿ ಕುಟ್ಟ ಸಿ.ವೈ.ಸಿ ತಂಡದ ದಿನೇಶ್, ಮ್ಯಾನ್ ಆಫ್ ದಿ ಸೀರೀಸ್ ಆಗಿ ನಾಣಚ್ಚಿ ರೈಸಿಂಗ್ ಸ್ಟಾರ್ ತಂಡದ ಚೋಮುಣಿ ಪ್ರಶಸ್ತಿ ಪಡೆದುಕೊಂಡರು. ಬೆಸ್ಟ್ ಟೀಮ್ ಪ್ರಶಸ್ತಿಯನ್ನು ಕೋತೂರು ಟೀಮ್ ವಾರಿಯರ್ಸ್ ತಂಡ ಪಡೆದು ಕೊಂಡಿತು.
ಕಾನೂರು ಫ್ರೆಂಡ್ಸ್ ಅಸೋಸಿಯೇಷನ್ ಅಧ್ಯಕ್ಷ ಚಿರಿಯಪಂಡ ನಾಣಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ, ಉಪಾಧ್ಯಕ್ಷ ಕಾಡ್ಯಮಾಡ ಭರತ್, ಗೌ. ಕಾರ್ಯದರ್ಶಿ ಚಿರಿಯಪ್ಪಂಡ ಶ್ಯಾಮ್ ಮುತ್ತಪ್ಪ, ನಿರ್ದೇಶಕರುಗಳಾದ ಕುಂಞಮಾಡ ರಮೇಶ್, ಮಚ್ಚಮಾಡ ಗಣಪತಿ, ಕುಂಞಮಾಡ ಹರೀಶ್, ಚಿರಿಯಪಂಡ ಪವನ್ ಬಿದ್ದಪ್ಪ, ಚಿರಿಯಪಂಡ ಪೊನ್ನಪ್ಪ, ಬಹುಮಾನ ದಾನಿಗಳಾದ ಮಚ್ಚಮಾಡ ಕಂದ ಭೀಮಯ್ಯ, ಚೊಟ್ಟೆಕ್‌ಮಾಡ ಪೊನ್ನಪ್ಪ, ಸುಳ್ಳಿಮಾಡ ವಿಠಲ ಮೊಣ್ಣಪ್ಪ, ಚೆಪ್ಪುಡಿರ ಪೃಥ್ವಿ ಪೂಣಚ್ಚ, ಹಿರಿಯರಾದ ಸದಾಶಿವ, ಚೊಟ್ಟೆಕ್‌ಮಾಡ ಬಿದ್ದಪ್ಪ, ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಕ್ರೀಡಾ ಸಂಚಾಲಕರುಗಳಾದ ನಿಖಿಲ್, ಜೀವನ್, ಜಿತನ್, ಮಣಿಯ, ಜೋಯಪ್ಪ, ಅಭಿ, ಇನ್ನಿತರರು ಇದ್ದರು. ತಾಂತ್ರಿಕ ವಿಭಾಗದಲ್ಲಿ ಸಂಜಿತ್ ಮತ್ತು ಸಿದ್ದಾರ್ಥ್ ಕಾರ್ಯನಿರ್ವಹಿಸಿದರು. ಎಂ.ಎA. ಚನ್ನನಾಯಕ ಮತ್ತು ಪವನ್ ಕುಮಾರ್ ವೀಕ್ಷಕ ವಿವರಣೆ ನೀಡಿದರು.
-ಚನ್ನನಾಯಕ