ವೀರಾಜಪೇಟೆ, ನ. ೫: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಬಾಳುಗೋಡುವಿನಲ್ಲಿ ನವೆಂಬರ್ ೨೮ರಿಂದ ಡಿಸೆಂಬರ್ ೧ ರವರೆಗೆ ಹನ್ನೊಂದನೆ ಕೊಡವ ನಮ್ಮೆಯನ್ನು ಆಚರಿಸಲಾಗುವುದು. ಈ ನಮ್ಮೆಯು ಕೊಡವ ಜನಾಂಗಕ್ಕೆ ಸೀಮಿತ ವಾಗಿರುತ್ತದೆ ಎಂದು ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ಬಾಳುಗೋಡುವಿನ ಕೊಡವ ಸಮಾಜಗಳ ಒಕ್ಕೂಟದ ಕ್ರೀಡಾ ಹಾಗು ಸಾಂಸ್ಕೃತಿಕ ಸಮುಚ್ಚಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಕೊಡವ ಜನಾಂಗದ ಆಚಾರ, ವಿಚಾರ, ಪದ್ಧತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿವರ್ಷ ಈ ಕೊಡವ ನಮ್ಮೆಯನ್ನು ಆಚರಿಸಲಾಗುತ್ತಿದೆ. ಈ ನಮ್ಮೆಯಲ್ಲಿ ಕ್ರೀಡಾ ಸಮಿತಿ, ಸಾಂಸ್ಕೃತಿಕ ಸಮಿತಿ, ಊಟೋಪಚಾರ ಸಮಿತಿಗಳನ್ನು ರಚಿಸಲಾಗಿದೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಗೆ ಮಾತ್ರ ಪ್ರವೇಶ ಶುಲ್ಕವನ್ನು ನಿಗದಿ ಪಡಿಸಿದ್ದು ಉಳಿದ ಯಾವುದೇ ಪೈಪೋಟಿಗಳಿಗೆ ಪ್ರವೇಶ ಶುಲ್ಕ ಇರುವುದಿಲ್ಲ. ಒಂದು ಕೊಡವ ಸಮಾಜದಿಂದ ಒಂದು ತಂಡಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ನಾಲ್ಕು ದಿನಗಳು ನಡೆಯುವ ನಮ್ಮೆಯಲ್ಲಿ ಅಪರಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿದೆ.

ನವೆಂಬರ್ ೨೮ ರಂದು ಗುರುವಾರ ೧೦ ಗಂಟೆಗೆ ಅಂತರ ಕೊಡವ ಸಮಾಜಗಳ ನಡುವೆ ನಡೆಯುವ ನಾಕೌಟ್ ಹಾಕಿ ಪಂದ್ಯಾಟಕ್ಕೆ ಚಾಲನೆ ನೀಡಲಾಗುವುದು. ನವೆಂಬರ್ ೨೯ ರಂದು ೯.೩೦ ಗಂಟೆಗೆ ತೆಂಗಿನಕಾಯಿಗೆ ಗುಂಡು ಹೊಡೆಯುವ ಕಾರ್ಯಕ್ರಮ ನಡೆಯಲಿದೆ. ೧೦ ಗಂಟೆಯಿAದ ಹಾಕಿ ಪಂದ್ಯಾಟ ನಡೆಯಲಿದೆ. ನವೆಂಬರ್ ೩೦ ರಂದು ೯ ಗಂಟೆಗೆ ಹಾಕಿ ಪಂದ್ಯಾಟದ ಸೆಮಿಫೈನಲ್ಸ್ ನಡೆಯಲಿದೆ. ಮತ್ತೊಂದು ಮೈದಾನದಲ್ಲಿ ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ ಪಂದ್ಯಗಳು ನಡೆಯಲಿದೆ. ೧೧ ಗಂಟೆಗೆ ಯುದ್ದ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಗುವುದು. ಅಪರಾಹ್ನ ೨ ಗಂಟೆಗೆ ಹಾಕಿ ಪಂದ್ಯಾಟದ ೨ನೇ ಸೆಮಿಫೈನಲ್ಸ್ ನಡೆಯಲಿದೆ. ಮೂರು ಗಂಟೆಗೆ ಪುರುಷರ ಮತ್ತು ಮಹಿಳೆಯರ ಭಾರದ ಗುಂಡು ಎಸೆತ ಫೈನಲ್ಸ್ ನಡೆಯಲಿದೆ.

ಭಾನುವಾರ ಪೂರ್ವಾಹ್ನ ೯ ಗಂಟೆಗೆ ಮಂದ್‌ಮರಿಯುವೊ, ೯.೩೦ ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮದ ಪೈಪೋಟಿ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಹಾಕಿ ಪಂದ್ಯಾಟದ ಫೈನಲ್ಸ್÷ಹಾಗು ಸಭಾ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸ್ಫರ್ಧೆಗಳ ವಿಜೇತರಿಗೆ ರೋಲಿಂಗ್ ಟ್ರೋಫಿಯನ್ನು ವಿತರಿಸಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ, ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕಾಳಿಮಾಡ ಮೋಟಯ್ಯ, ಹಂಚೆಟ್ಟಿರ ಮನು, ಸಾಂಸ್ಕೃತಿಕ ಸಮಿತಿ ಸಂಚಾಲಕ ಬೊಳಿಯಂಗಡ ದಾದು ಪೂವಯ್ಯ ಹಗ್ಗಜಗ್ಗಾಟ ಸಮಿತಿ ಸಂಚಾಲಕ, ಉಟೋಪಚಾರ ಸಮಿತಿ ಅಧ್ಯಕ್ಷ ಕುಂಬೆರ ಮನುಕುಮಾರ್, ವಿವಿಧ ಸಮಿತಿ ಸದಸ್ಯರುಗಳಾದ ಪುಲಿಯಂಡ ಪೊನ್ನöಣ್ಣ, ಕುಪ್ಪಂಡ ರಾಜೀವ್ ಕಾರ್ಯಪ್ಪ, ಕುಂಜಿಲAಡ ದೊರೆ ಪೂಣಚ್ಚ, ಕೋಟೆರ ರಘು, ಬಾಚಿರ ಜಗದೀಶ್, ತಾತಂಡ ಕಬೀರ್ ಮತ್ತಿತರರು ಉಪಸ್ಥಿತರಿದ್ದರು.