ಕೂಡಿಗೆ, ನ. ೫: ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಜಲಾಶಯ ಸಂಪೂರ್ಣವಾಗಿ ಭರ್ತಿ ಯಾದ ರೀತಿಯಲ್ಲಿ ಕಂಗೊಳಿಸುತ್ತಿದೆ.
ಕಳೆದ ಮೂರು ತಿಂಗಳುಗಳಿAದ ಸತತವಾಗಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದಾಗಿ ಅಣೆಕಟ್ಟೆಗೆ ಒಳ ಹರಿವಿನ ನೀರಿನ ಪ್ರಮಾಣವು ಹೆಚ್ಚಾದ ಹಿನ್ನೆಲೆಯಲ್ಲಿ ಜಲಾಶಯದಿಂದ ನೀರು ಹೊರಗೆ ಹೋದರೂ ಸಹ ಒಳಹರಿವು ಇರುವುದರಿಂದಾಗಿ ಅಣೆಕಟ್ಟೆಯು ಸಂಪೂರ್ಣವಾಗಿ ಭರ್ತಿಯಾದ ಮಾದರಿಯಲ್ಲಿ ಕಂಡುಬರುತ್ತಿದೆ.
ಅಣೆಕಟ್ಟೆಯ ನೀರಿನ ಸಾಮರ್ಥ್ಯ ೮ ಟಿ.ಎಂ.ಸಿ ಅದರೂ ಈಗಾಗಲೇ ಹೆಚ್ಚುವರಿಯಾಗಿ ಅನೇಕ ಬಾರಿ ನದಿಗೆ ನೀರನ್ನು ಹರಿಸಿದರೂ ಸಹ ಈ ಸಾಲಿ ನಲ್ಲಿ ೬.೭೫ ಟಿ.ಎಂ.ಸಿ ನೀರಿನ ಸಂಗ್ರಹ ಇದೆ. ಇದರ ಜೊತೆಯಲ್ಲಿ ದಿನಂಪ್ರತಿ ರೈತರ ಬೇಸಾಯಕ್ಕೆ ಮುಖ್ಯ ನಾಲೆಯ ಮೂಲಕ ೧.೧೦೦. ಕ್ಯೂಸೆಕ್ಸ್ ಮತ್ತು ನದಿಗೆ ೨೦೦ ಕ್ಯೂಸೆಕ್ಸ್ ನೀರನ್ನು ಹರಿಸ ಲಾಗುತ್ತಿದೆ. -ಕೆ. ಕೆ. ನಾಗರಾಜಶೆಟ್ಟಿ