ನಾಪೋಕ್ಲು, ನ. ೫: ಸಮೀಪದ ಚೇರಂಬಾಣೆಯ ಕೊಳಗದಾಳು ಗ್ರಾಮದ ಶತಾಯುಷಿ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ನಿವೃತ್ತ ಯೋಧ ಅಜ್ಜಿನಂಡ ಮೊಣ್ಣಪ್ಪ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಅದ್ದೂರಿ ಯಾಗಿ ಆಚರಿಸಲಾಯಿತು.

ದಿವಂಗತ ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ. ಮೊಣ್ಣಪ್ಪ ಅವ ರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿಕೊಟ್ಟ್ ಪಾಟ್ ಮೂಲಕ ಸ್ವಾಗತಿಸಲಾ ಯಿತು. ಆ ಬಳಿಕ ಕುಟುಂಬಸ್ಥರು ಕೇಕ್ ಅನ್ನು ಕತ್ತರಿಸಿ ಹುಟ್ಟುಹಬ್ಬ ವನ್ನು ಆಚರಿಸಲಾಯಿತು. ಈ ಸಂದರ್ಭ ಅವರ ಸಹೋದರ ಅಪ್ಪಣ್ಣ (೯೭) ಜೊತೆಯಲ್ಲಿ ಉಪ ಸ್ಥಿತರಿದ್ದರು. ಆಗಮಿಸಿದ್ದ ಎಲ್ಲರೂ ಶತಾಯುಷಿಗೆ ನೆನಪಿನ ಕಾಣಿಕೆಗ ಳನ್ನು ನೀಡಿ ಇಬ್ಬರ ಆಶೀರ್ವಾದ ಪಡೆದುಕೊಂಡು ಶುಭ ಹಾರೈಸಿದರು. ಇದೇ ವೇಳೆ ಮೊಣ್ಣಪ್ಪ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಪ್ರೊ. ಎಂ.ಡಿ. ನಂಜುAಡ, ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ. ಮಂದಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮಣವಟ್ಟಿರ ಸಿ. ಕುಶಾಲಪ್ಪ, ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಪಿ. ಗಣಪತಿ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಕೊಡಗು ಏಕೀಕರಣರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಸೇರಿದಂತೆ ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.ಗಣಪತಿ, ಒಲಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಸಿಎನ್‌ಸಿ ಅಧ್ಯಕ್ಷ ನಂದಿನೆರವAಡ ನಾಚಪ್ಪ, ಕೊಡಗು ಏಕೀಕರಣರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಸೇರಿದಂತೆ ಬಂಧುಮಿತ್ರರು, ಕುಟುಂಬಸ್ಥರು ಉಪಸ್ಥಿತರಿದ್ದರು.