ಕಣಿವೆ, ನ. ೫: ಇತ್ತೀಚಿನ ದಿನಗಳಲ್ಲಿ ಕಾಡಾನೆಗಳ ಉಪಟಳ ರಾತ್ರಿಗಿಂತ ಹಗಲು ವೇಳೆಯೇ ಹೆಚ್ಚಳವಾದಂತೆ ಕಂಡು ಬರುತ್ತಿದೆ.

ಯಡವನಾಡು ಮೀಸಲು ಅರಣ್ಯದ ಒಳಗಿರುವ ಸೂಳೆಬಾವಿ ಜೇನು ಕುರುಬರ ಹಾಡಿಯಲ್ಲಿ ಮನೆಯಂಗಳದಲ್ಲಿ ಕಟಾವು ಮಾಡಿ ಇಟ್ಟಂತಹ ಜೋಳದ ಫಸಲು ತಿನ್ನಲು ಧಾವಿಸಿ ಬಂದ ಒಂಟಿ ಸಲಗವೊಂದು ಜೋಳದ ಫಸಲು ತಿನ್ನಲು ಕಾರು ಅಡ್ಡಿಯಾಗುತ್ತದೆ ಎಂದು ಮಾರುತಿ ಒಮಿನಿ ಕಾರನ್ನು ಮನಬಂದAತೆ ಉರುಳಿಸಿ ಹಾನಿ ಪಡಿಸಿರುವ ಘಟನೆ ಮಂಗಳವಾರ ಬೆಳಿಗ್ಗೆ ೬-೩೦ ರ ಸಮಯದಲ್ಲಿ ಘಟಿಸಿದೆ.

ಹಾಡಿಯ ನಿವಾಸಿ ಜೆ.ಕೆ.ಹರೀಶ್ ಎಂಬವರು ಜೋಳದ ಫಸಲಿಗೆ ಕಾಡಾನೆಗಳು ಬಾರದಂತೆ ಕಾವಲು ಕಾಯುತ್ತಾ ಕಾರಿನಲ್ಲೇ ನಿದ್ರೆಗೆ ಜಾರಿದ್ದರು. ಈ ವೇಳೆ ಕಾಡಾನೆ ಲಗ್ಗೆಯಿಟ್ಟಿದ್ದು, ಕಾಡಾನೆಯ ಸುಳಿವು ತಿಳಿದ ಹರೀಶ್ ದಂಪತಿ ಭಯಭೀತರಾಗಿ ಕಾರಿನಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದಾರೆ.

ಆದರೆ ಕೋಪದಿಂದ ಉಗ್ರನಾದ ಸಲಗ ಕಾರನ್ನು ಹಾನಿ ಮಾಡಿದ್ದು ಜೋಳದ ಫಸಲನ್ನು ತಿಂದು ಹಾನಿ ಪಡಿಸಿರುವ ಬಗ್ಗೆ ಸೋಮವಾರಪೇಟೆ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಈ ಸಂಬAಧ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. -ವರದಿ : ಕೆ.ಎಸ್.ಮೂರ್ತಿ