ಸೋಮವಾರಪೇಟೆ, ನ. ೫: ಪಟ್ಟಣದ ಹೊಸ ಬಡಾವಣೆಯಲ್ಲಿ ಚಿರತೆ ಹೆಜ್ಜೆ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ನಿನ್ನೆ ರಾತ್ರಿ ಅಥವಾ ಇಂದು ಮುಂಜಾನೆಯ ವೇಳೆಯಲ್ಲಿ ಚಿರತೆ ಬಂದಿರಬಹುದು ಎಂಬ ಸಂಶಯ ವ್ಯಕ್ತವಾಗಿದ್ದು, ಅರಣ್ಯ ಇಲಾಖೆಗೆ ವಿಷಯ ತಿಳಿಸಿದ್ದರೂ ಸಹ ಇತ್ತ ತಲೆ ಹಾಕಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕಳೆದ ಮೂರು ದಿನಗಳಿಂದಲೂ ಈ ಭಾಗದಲ್ಲಿ ಚಿರತೆ ಸಂಚರಿಸುತ್ತಿರುವ ಅನುಮಾನವಿದೆ. ರಾತ್ರಿ ಹಾಗೂ ಬೆಳಗ್ಗಿನ ಜಾವ ಸಾಕು ನಾಯಿಗಳು ಬೊಗಳುತ್ತಿರುತ್ತವೆ. ಹೊಸ ಬಡಾವಣೆಯ ಕೆಳಭಾಗದಲ್ಲಿ ಸೂಕ್ತ ಬೀದಿ ದೀಪಗಳ ವ್ಯವಸ್ಥೆಯನ್ನೂ ಪಂಚಾಯಿತಿ ಮಾಡಿಲ್ಲ. ಕತ್ತಲ ಸಮಯದಲ್ಲಿ ಮನೆಯಿಂದ ಹೊರಬರಲೂ ಸಹ ಭಯಪಡುವ ಸನ್ನಿವೇಶ ನಿರ್ಮಾಣವಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಚಿರತೆ ಹೆಜ್ಜೆ ಪತ್ತೆಯಾಗಿರುವ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೆ ಕನಿಷ್ಟ ಸ್ಥಳಕ್ಕೆ ಬಂದು ಪರಿಶೀಲನೆಯನ್ನೂ ನಡೆಸಿಲ್ಲ. ‘ಹೆಜ್ಜೆ ಗುರುತಿನ ಫೋಟೋ ಕಳುಹಿಸಿ, ಹೆಜ್ಜೆ ಗುರುತಿನ ಮೇಲೆ ಪೆನ್ ಇಟ್ಟು ಅಳತೆ ಮಾಡಿಕೊಳ್ಳಿ’ ಎಂದು ನಮಗೆ ಮರು ಕೆಲಸ ನೀಡುತ್ತಿದ್ದಾರೆ. ಅರಣ್ಯ ಇಲಾಖೆಯ ಇಂತಹ ನಿರ್ಲಕ್ಷö್ಯ ಧೋರಣೆ ಸರಿಯಲ್ಲ. ಮುಂದಿನ ದಿನಗಳಲ್ಲಿ ಏನಾದರೂ ಅನಾಹುತವಾದರೆ ಅರಣ್ಯ ಇಲಾಖೆಯೇ ನೇರ ಹೊಣೆಯಾಗುತ್ತದೆ ಎಂದು ಸ್ಥಳೀಯ ನಿವಾಸಿಗಳು ಎಚ್ಚರಿಸಿದ್ದಾರೆ.

ಈ ಬಡಾವಣೆಗೆ ಒತ್ತಿಕೊಂಡAತೆ ತೋಟ, ಕಾಡು, ಹೊಳೆಯಿದ್ದು, ಈ ಹಿಂದೆ ಮೊಸಳೆಯೊಂದು ಜನವಸತಿ ಪ್ರದೇಶದಲ್ಲಿ ಬೀಡುಬಿಟ್ಟಿತ್ತು. ಕಾಡಾನೆಯೊಂದು ಇದೇ ವ್ಯಾಪ್ತಿಯಲ್ಲಿ ಸಾವನ್ನಪ್ಪಿದ್ದು, ಇದೀಗ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.

ಪಟ್ಟಣ ಪಂಚಾಯಿತಿಯಿAದ ಹೊಸ ಬಡಾವಣೆಯ ಕೆಳಭಾಗದಲ್ಲಿ ಸೂಕ್ತ ಬೀದಿ ದೀಪಗಳನ್ನು ಅಳವಡಿಸಿಲ್ಲ. ಕತ್ತಲೆಯಲ್ಲಿ ಮನೆಯಿಂದ ಹೊರ ಬರಲೂ ಹೆದರುವಂತಾಗಿದೆ. ಮಕ್ಕಳು, ವೃದ್ಧರು ಭಯದಿಂದ ಓಡಾಡುವ ಸನ್ನಿವೇಶ ನಿರ್ಮಾಣವಾಗಿದೆ. ಅರಣ್ಯ ಇಲಾಖೆಯವರು ಹೆಜ್ಜೆ ಗುರುತನ್ನು ಮೊಬೈಲ್‌ನಲ್ಲಿ ನೋಡಿ ಕಾಡು ನಾಯಿಯ ಹೆಜ್ಜೆ ಎಂದು ಹೇಳುತ್ತಿದ್ದಾರೆ. ಆದರೆ ಸ್ಥಳಕ್ಕೆ ಬಂದು ಪರಿಶೀಲನೆಯನ್ನೇ ನಡೆಸಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.