ಕೊಡ್ಲಿಪೇಟೆ: ಕೊಡ್ಲಿಪೇಟೆ ವಿದ್ಯಾ ಸಂಸ್ಥೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಉಪಾಧ್ಯಕ್ಷರಾದ ಶಂಭುಲಿAಗಪ್ಪರವರು ಧ್ವಜಾರೋಹಣ ನೆರವೇರಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಖಜಾಂಚಿಗಳಾದ ಡಾಕ್ಟರ್ ಉದಯಕುಮಾರ್, ನಿರ್ದೇಶಕರುಗಳಾದ ಶಿವಪ್ರಸಾದ್, ಬಿ.ಕೆ.ಯತೀಶ್, ಪ್ರಾಂಶುಪಾಲರಾದ ಬಿ.ಎಸ್.ಪವಾರ್, ಮುಖ್ಯ ಶಿಕ್ಷಕರಾದ ಅಬ್ದುಲ್ ರಬ್ ಉಪಸ್ಥಿತರಿದ್ದರು. ದಿನದ ಮಹತ್ವದ ಕುರಿತು ಉಪನ್ಯಾಸಕರಾದ ಸುಧೀರ್ ಹಾಗು ಶಿಕ್ಷಕ ಕಿರಣ್ ಕುಮಾರ್ ಮಾತನಾಡಿದರು. ಚಿಂತನ್ ಸ್ವಾಗತಿಸಿದರು. ಸುಮ ವಂದಿಸಿದರು. ಸತೀಶ್ ನಿರೂಪಿಸಿದರು. ವಿದ್ಯಾರ್ಥಿಗಳು ಭಾಷಣ ಮತ್ತು ಹಾಡುಗಳ ಮೂಲಕ ರಂಜಿಸಿದರು.
ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಶಾಲಾ ಅಡಳಿತ ಮಂಡಳಿಯ ಅಧ್ಯಕ್ಷರಾದ ಪೇರಿಯನ ಜಯಾನಂದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಕನ್ನಡ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಜೊತೆಗೆ ಕನ್ನಡದಲ್ಲೇ ವ್ಯವಹರಿಸಬೇಕೆಂದರು. ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಂಗವಾಗಿ ದಿನದ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳು ಭಾಷಣ ಹಾಗೂ ದೇಶ ಭಕ್ತಿ ಗೀತೆ ಹಾಡಿದರು. ಕನ್ನಡ ರಾಜ್ಯೋತ್ಸವದ ಮಹತ್ವ, ಭಾಷಾಭಿಮಾನ, ನಾಡುನುಡಿಯ ಪ್ರಾಮುಖ್ಯತೆ ಹಾಗು ಕರ್ನಾಟಕ ಏಕೀಕರಣದ ಬಗ್ಗೆ ಕನ್ನಡ ಶಿಕ್ಷಕಿ ಯು. ಸುನಂದ ಮಾತನಾಡಿದರು. ಶೈನ ಹಾಗೂ ನೈಶೀನಾ ನಿರೂಪಿಸಿದರು. ರಕ್ಷಿತ ವಂದಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾದ್ಯಾಯರಾದ ಕೆ.ತಿಲಕ ಹಾಗು ಶಾಲಾ ಶಿಕ್ಷಕವೃಂದ ಪಾಲ್ಗೊಂಡಿದ್ದರು.
ಮಡಿಕೇರಿ: ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಬೆಳಿಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನಡೆಸಲಾಯಿತು.
ದೀಪಾಂಜಲಿ ತಂಡದವರು ಪ್ರಾರ್ಥಿಸಿದರೆ, ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಸಂಘದ ಸದಸ್ಯೆಯರಿಂದ ಗೀತಗಾಯನ ಕಾರ್ಯಕ್ರಮ ನಡೆಯಿತು. ಕುಂತಿ ಬೋಪಯ್ಯ ಅವರು ಕನ್ನಡದ ಇತಿಹಾಸ ,ಕನ್ನಡ ನಡೆದು ಬಂದ ದಾರಿಯ ಬಗ್ಗೆ ಭಾಷಣವನ್ನು ಮಾಡಿದರು.ನಂತರ ವೈದ್ಯರೂ ಮತ್ತು ಬರಹಗಾರರೂ ಆಗಿರುವ ಡಾ.ಕೆ.ಬಿ. ಸೂರ್ಯಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನವನ್ನು ಸ್ವೀಕರಿಸಿದ ಡಾಕ್ಟರ್ ಸೂರ್ಯಕುಮಾರ್ ಅವರು ತಮ್ಮ ಭಾಷಣದಲ್ಲಿ ತಾವು ಬರವಣಿಗೆಯನ್ನು ಆರಂಭಿಸಿದ ದಿನಗಳನ್ನು ನೆನಪಿಸಿಕೊಂಡರು . ಪ್ರತಿ ವಾರ ‘ಶಕ್ತಿ’ಯಲ್ಲಿ ಆರೋಗ್ಯ ಅಂಕಣದಲ್ಲಿ ಬರೆಯುವ ಬಗ್ಗೆ ಹಾಗೂ ನಂತರ ಅದನ್ನೇ ಪುಸ್ತಕ ರೂಪದಲ್ಲಿ ತಂದಿರುವುದಾಗಿ ತಿಳಿಸಿದರು. ಕನ್ನಡಿಗರಲ್ಲಿ ಕನ್ನಡ ಪುಸ್ತಕಗಳನ್ನು ಓದುವ ಅಭ್ಯಾಸ ಬೆಳೆಯಬೇಕು ಎಂದು ಆಶಿಸಿದರು.ನಂತರ ಸದಸ್ಯೆಯರಿಂದ ಸ್ವರಚಿತ ಕವನ ವಾಚನ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಗಳನ್ನು ಭಾರತಿ ರಮೇಶ್ ನಿರೂಪಿಸಿದರೆ ಜಯಶೀಲಾ ಪ್ರಕಾಶ್ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್, ಆಡಳಿತ ಮಂಡಳಿಯ ಸದಸ್ಯೆಯರಾದ ಶೈಲಾ ಮಂಜುನಾಥ್, ಆಯಿಷಾ ಹಮೀದ್, ಕಮಲಾ ಸುಬ್ಬಯ್ಯ, ಪ್ರೇಮಾ ರಾಘವಯ್ಯ, ವಸಂತಿ ಪೂಣಚ್ಚ ಮತ್ತು ಸಂಘದ ಇತರ ಸದಸ್ಯೆಯರು ಉಪಸ್ಥಿತರಿದ್ದರು.
ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ .ಎಂ.ಬಿ ಕಾವೇರಿಯಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಾವೆಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೈಗೂಡಿಸಿಕೊಂಡು.ಭಾಷಾ ಬೆಳವಣಿಗೆಗೆ ಕೈಜೋಡಿಸಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ ಕನ್ನಡವನ್ನು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭ ಉಪಪ್ರಾಂಶುಪಾಲರಾದ ಪ್ರೊ. ಪೊನ್ನಂಪೇಟೆ: ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ೬೯ನೇ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಪ್ರಾಂಶುಪಾಲರಾದ ಡಾ .ಎಂ.ಬಿ ಕಾವೇರಿಯಪ್ಪ ಅವರು ಧ್ವಜಾರೋಹಣ ನೆರವೇರಿಸಿ, ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ನಾವೆಲ್ಲರೂ ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವನ್ನು ಮೈಗೂಡಿಸಿಕೊಂಡು.ಭಾಷಾ ಬೆಳವಣಿಗೆಗೆ ಕೈಜೋಡಿಸಬೇಕು. ಕರ್ನಾಟಕದಲ್ಲಿ ಕನ್ನಡವನ್ನು ಬಳಸಿ ಕನ್ನಡವನ್ನು ಬೆಳೆಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭ ಉಪಪ್ರಾಂಶುಪಾಲರಾದ ಪ್ರೊ. ಎಂ.ಎಸ್. ಭಾರತಿ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕರಾದ ಎಂ.ಡಿ. ರೇಷ್ಮ, ಕಚೇರಿ ಅಧೀಕ್ಷಕರಾದ ಟಿ.ಕೆ. ಲತಾ, ಎನ್‌ಸಿಸಿ ಅಧಿಕಾರಿಗಳಾದ ಲೆಫ್ಟಿನೆಂಟ್ ಎಂ.ಆರ್. ಅಕ್ರಂ, ಲೆಫ್ಟಿನೆಂಟ್ ಐ. ಡಿ. ಲೇಪಾಕ್ಷಿ, ಎನ್‌ಎಸ್‌ಎಸ್ ಅಧಿಕಾರಿ, ಎನ್. ಪಿ. ರೀತಾ, ರೋವರ್ಸ್ ರೆಂಜರ್ಸ್ ಅಧಿಕಾರಿ ಸೀಮಾ, ಇಸಿಎ ಸಂಚಾಲಕರಾದ ಕೆ.ಟಿ. ಸೀತಮ್ಮ, ಯುವ ರೆಡ್‌ಕ್ರಾಸ್ ಅಧಿಕಾರಿ ಎಂ.ಎ. ಕುಶಾಲಪ್ಪ ಸೇರಿದಂತೆ ಉಪನ್ಯಾಸಕರು, ಆಡಳಿತಾತ್ಮಕ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.
ಮಡಿಕೇರಿ: ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ನಗರದ ಇಂದಿರಾ ಕ್ಯಾಂಟಿನ್ ಬಳಿ ಹ್ಯೂಮನ್ ರೈಟ್ಸ್ ಇಂಟರ್ ನ್ಯಾಷನಲ್ ಫೆಡರೇಶನ್‌ನ ರಾಜ್ಯಾಧ್ಯಕ್ಷ ಹರೀಶ್ ಜಿ.ಆಚಾರ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕರ್ನಾಟಕದಲ್ಲಿ ಇರುವವರೆಗೆ ಮಾನವೀಯ ದೃಷ್ಟಿಯಿಂದ ಎಲ್ಲರೂ ಸಮಾನರು. ಯಾರು ಮೇಲು ಕೀಳು ಎಂಬ ಬೇಧ-ಭಾವವಿಲ್ಲ. ಎಲ್ಲರೂ ಕನ್ನಡದ ಮಕ್ಕಳೇ ಎಂದರು. ವಿವಿಧ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರೊಂದಿಗೆ ನಾವು ಕನ್ನಡದಲ್ಲಿ ವ್ಯವಹರಿಸಿದಾಗ ಮಾತ್ರ ಕನ್ನಡ ಉಳಿಯಲು ಸಾಧ್ಯ ಎಂದರು.
ಕೇವಲ ಕನ್ನಡ ರಾಜ್ಯೋತ್ಸವದ ದಿನದಂದು ಮಾತ್ರ ಕನ್ನಡಾಭಿಮಾನವನ್ನು ತೋರದೆ ಪ್ರತಿದಿನ ಕನ್ನಡದ ಬಳಕೆಯಾಗಬೇಕು ಎಂದರು. ಈ ಸಂದರ್ಭ ಜಿಲ್ಲಾಧ್ಯಕ್ಷ ಭರತ್ ಕುಮಾರ್, ಪ್ರಮುಖರಾದ ವಾಸು, ಸತೀಶ್, ಆರ್.ಲಕ್ಷö್ಮಣ್, ಸಲಹೆಗಾರರಾದ ಚೌರಿರ ರಮೇಶ್, ಬ್ಲಡ್‌ಬಯ್ಯ ಸೇರಿದಂತೆ ವಾಹನ ಚಾಲಕರು ಹಾಜರಿದ್ದರು. ಕೀರ್ತನ್ ರೈ ಪ್ರಾರ್ಥಿಸಿದರು.
ನಾಪೋಕ್ಲು : ಇಲ್ಲಿನ ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಟ್ರಸ್ಟ್ ನಿರ್ದೇಶಕರಾದ ಮಕ್ಕಿ ಸುಬ್ರಮಣ್ಯ ಮಾತನಾಡಿ ವಿದ್ಯಾರ್ಥಿಗಳು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಪ್ರಾAಶುಪಾಲರಾದ ಬಿ.ಎಂ ಶಾರದ ಮಾತನಾಡಿ ಕನ್ನಡ ನಾಡಿನ ಏಕೀಕರಣಕ್ಕೆ ಹಲವು ಮಂದಿ ಕಾರಣಕರ್ತರಾಗಿದ್ದಾರೆ. ಅವರೆಲ್ಲರನ್ನು ಸೋಮವಾರಪೇಟೆ: ಕನ್ನಡನಾಡು, ನುಡಿಯ ಸೇವೆಯಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಕೊಡುಗೆ ಅಪಾರವಾಗಿದೆ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಅಭಿಪ್ರಾಯಪಟ್ಟರು.
ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದಿAದ ಆಯೋಜಿಸಿದ್ದ ೧೭ನೇ ವರ್ಷದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹರಿದು ಹಂಚಿಹೋಗಿದ್ದ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ೧೯೫೬ರ ನವೆಂಬರ್ ೧ ರಂದು ಮೈಸೂರು ರಾಜ್ಯವಾಗಿ ನಂತರ ಕರ್ನಾಟಕವಾಗಿ ಮಾಡಲು ಹಲವು ಹಿರಿಯರು, ಕವಿಗಳು, ಸಾಹಿತಿಗಳು ಶ್ರಮಪಟ್ಟಿದ್ದಾರೆ. ಅವರೆಲ್ಲರ ಶ್ರಮದ ಫಲವಾಗಿ ಇಂದು ಸುಂದರವಾದ ಕನ್ನಡ ನಾಡು ರೂಪಿತವಾಗಿದೆ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡನಾಡಿಗೆ ವಿಶ್ವದಲ್ಲೇ ಅತ್ಯುತ್ತಮವಾದ ಹೆಸರಿದೆ ಎಂದು ಅವರು ಹೇಳಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಜಿಪಂ ಮಾಜಿ ಸದಸ್ಯರಾದ ಬಿ.ಜೆ.ದೀಪಕ್, ಹಿಂದೆ ದಕ್ಷಿಣ ಭಾರತದಲ್ಲಿ ಮದರಾಸು, ಹೈದರಾಬಾದ್, ಮುಂಬೈ, ಮೈಸೂರು, ಕೊಡಗು ಸೇರಿದಂತೆ ಐದು ಸ್ವತಂತ್ರ ಸಂಸ್ಥಾನಗಳಿದ್ದವು. ಅಂದು ಆಲೂರು ವೆಂಕಟರಾಯರ ನೇತೃತ್ವದಲ್ಲಿ ಮೈಸೂರು ರಾಜರ ಒತ್ತಾಸೆಯಿಂದ ಇಡೀ ದೇಶದಲ್ಲಿ ಭಾರತ ಒಕ್ಕೂಟಕ್ಕೆ ಸೇರ್ಪಡೆಗೊಂಡ ಸಂಸ್ಥಾನವಾಗಿ ಮೈಸೂರು ಸೇರ್ಪಡೆಗೊಳ್ಳುವ ಮೂಲಕ ದೇಶಭಕ್ತಿಯನ್ನು ಮೆರೆದಿದ್ದು ಇತಿಹಾಸ ಎಂದು ಬಣ್ಣಿಸಿದರು.
ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ.ಮುರಳೀಧರ್ ಮಾತನಾಡಿ, ೧೯೫೬ರವರೆಗೆ ಸ್ವತಂತ್ರ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು ಬೇಷರತ್ತಾಗಿ ಭಾಷಾವಾರು ಪ್ರಾಂತ್ಯಗಳ ರಚನೆ ಸಂದರ್ಭ ಮೈಸೂರು ರಾಜ್ಯಕ್ಕೆ ಸೇರ್ಪಡೆಗೊಳಿಸಲಾಯಿತು. ಹೀಗಾಗಿ ಕೊಡಗಿನ ಸಮಗ್ರ ಅಭಿವೃದ್ದಿಗೆ ಕರ್ನಾಟಕ ಸರ್ಕಾರ ಮುಂದಾಗಬೇಕು. ಅಲ್ಲದೇ ಈ ಹಿಂದೆ ಕೊಡಗು ಜಿಲ್ಲೆಯಲ್ಲಿ ಅಸ್ತಿತ್ವದಲ್ಲಿದ್ದ ಮೂರು ವಿಧಾನ ಸಭಾಕ್ಷೇತ್ರಗಳು ಹಾಗೂ ಒಂದು ಲೋಕಸಭಾ ಸ್ಥಾನವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊಡಗಿಗೆ ನೀಡುವ ಮೂಲಕ ಈ ಹಿಂದೆ ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಉಮೇಶ್ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯೆ ಶೀಲಾ ಡಿಸೋಜ, ಲೇಖಕಿ ಎಂ.ಎ. ರುಬೀನಾ, ಕರವೇ ಶಿವರಾಮೇಗೌಡ ಬಣದ ತಾಲೂಕು ಘಟಕದ ಅಧ್ಯಕ್ಷ ದಿವಾಕರ, ಕಿಬ್ಬೆಟ್ಟ ಮಂದಣ್ಣ ಮತ್ತಿತರರು ಇದ್ದರು. ವೇದಿಕೆಯಲ್ಲಿ ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಗಮಿಸಿದ್ದ ಏಂಜೆಲ್ ರಶ್ಮಿ ಡಿಸೋಜಾ, ಮಾಸ್ಟರ್ ಅನೂಪ್ ಅರ್ಪಿತ್ ಉಪಸ್ಥಿತರಿದ್ದರು.
ಪ್ರಾಥಮಿಕ, ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮಕ್ಕೂ ಮೊದಲು ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ಕಕ್ಕೆಹೊಳೆಯ ಬಸವೇಶ್ವರ ದೇವಾಲಯದಿಂದ ಪಟ್ಟಣದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಿ, ಡೊಳ್ಳು ಕುಣಿತ, ಕಂಸಾಳೆಯೊAದಿಗೆ ಆಟೋಗಳು ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಖಾಸಗಿ ಬಸ್‌ನಿಲ್ದಾಣಕ್ಕೆ ಬಂದವು. ಮಧ್ಯಾಹ್ನ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರುಗಳ ಸಹಕಾರದೊಂದಿಗೆ ಅನ್ನ ಸಂತರ್ಪಣಾ ಕಾರ್ಯಕ್ರಮ ನೆರವೇರಿತು.
ಶನಿವಾರಸಂತೆ: ಪಟ್ಟಣದ ಕೊಡಗು ಜಿಲ್ಲಾ ಕಟ್ಟಡ ನಿರ್ಮಾಣ ಹಾಗೂ ಇತರೆ ಕೂಲಿ ಕಾರ್ಮಿಕ ಸಂಘದ ವತಿಯಿಂದ ೬೯ ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಸಂಘದ ಮುಖಂಡ ಎಂ.ಕೃಷ್ಣ ಧ್ವಜಾರೋಹಣ ನೆರವೇರಿಸಿ, ಕರುನಾಡಿನ ನೆಲಜಲ, ಭಾಷೆ, ಸಾಹಿತ್ಯ ಸಂಸ್ಕೃತಿಯ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷ ಎಂ.ಜೆ.ವಿಠಲ್ ನಾಗರಾಜ್ ಮಾತನಾಡಿ, ವರುಷಕ್ಕೊಮ್ಮೆ ಆಚರಿಸುವ ಕನ್ನಡ ರಾಜ್ಯೋತ್ಸವ ಆಚರಣೆ ಪ್ರತಿ ಕನ್ನಡಿಗನಲ್ಲಿ ಜಾಗೃತಿ ಮೂಡಿಸಿ, ಕನ್ನಡಾಭಿಮಾನ ಬೆಳೆಸಲಿ ಎಂದು ಆಶಿಸಿದರು. ಕಾರ್ಯದರ್ಶಿ ಬಿ.ಎಂ.ಲೋಕೇಶ್, ಕಾರ್ಮಿಕ ಸದಸ್ಯರು ಹಾಗೂ ಸಿಬ್ಬಂದಿ ಪಿ.ಜಿ.ಗೀತಾ ಹಾಜರಿದ್ದರು.ಸುಂಟಿಕೊಪ್ಪ: ಕನ್ನಡ ನಾಡು ನುಡಿ ನೆಲ ಜಲ ಸಂಸ್ಕೃತಿ ಪರಂಪರೆ ಒಂದು ಧೀಮಂತ ಶಕ್ತಿ. ಸಾಂಸ್ಕೃತಿ ಶ್ರೀಮಂತಿಕೆಯಿAದ ಇಡೀ ವಿಶ್ವದ ಗಮನಸೆಳೆದ ನಾಡು ಕರ್ನಾಟಕ ಎಂದು ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಆಂಗ್ಲ ಭಾಷಾ ಉಪನ್ಯಾಸಕಿ ಸುನಿತಾ ಗಿರೀಶ್ ಬಣ್ಣಿಸಿದರು.
ಇಲ್ಲಿನ ಕನ್ನಡ ವೃತ್ತದಲ್ಲಿ ೬೯ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೇರವೇರಿಸಿ ಮುಖ್ಯ ಭಾಷಣ ಮಾಡಿದ ಅವರು ಕರ್ನಾಟಕದಂತಹ ಪುಣ್ಯಭೂಮಿಯಲ್ಲಿ ಜನಿಸಿ ಬಾಳುತ್ತಿರುವುದು ನಮ್ಮ ಪೂರ್ವ ಜನ್ಮದ ಪುಣ್ಯಫಲವೆಂದು ವರ್ಣಿಸಿದರು. ಇಂತಹ ನಾಡು, ನುಡಿ, ಸಂಸ್ಕೃತಿಗಾಗಿ ಕನ್ನಡ ನಾಡಿನ ಏಕೀಕರಣಕ್ಕಾಗಿ ಹೋರಾಡಿದಂತಹ ಮಹಾನು ಚೇತನಗಳನ್ನು ಸ್ಮರಿಸಿಕೊಳ್ಳುತ್ತಾ ಅವರಿಗೆ ನುಡಿ ನಮನ ಸಲ್ಲಿಸಿ ಶಿರಬಾಗಿ ನಮಿಸುವುದು ನಮ್ಮ ಆದ್ಯ ಕರ್ತವ್ಯ ಎಂದರು.ಗೋಣಿಕೊಪ್ಪ : ಗೋಣಿಕೊಪ್ಪ ಸಂತ ಥೋಮಸ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬಂತು. ಪ್ರಾಂಶುಪಾಲ ಆಂಥೋನಿ ಕನ್ನಡದ ಮಹತ್ವದ ಬಗ್ಗೆ ತಿಳಿಸಿದರು.
ಗಾಯಕಿ ಪುತ್ತಾಮನೆ ವಿದ್ಯಾ ಜಗದೀಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕನ್ನಡ ಹಾಡುಗಳ ಮೂಲಕ ಮಕ್ಕಳಲ್ಲಿ ಕನ್ನಡ ಪ್ರೇಮ ಮೂಡಿಸಿದರು. ಕನ್ನಡದ ಇತಿಹಾಸ, ಶಿಲ್ಪಕಲೆ, ಪ್ರಕೃತಿ ಸೌಂದರ್ಯ, ಸಂಸ್ಕೃತಿಯ ಮೂಲ ಕನ್ನಡ ಎಂಬುವರ ಬಗ್ಗೆ ಅರಿವು ಮೂಡಿಸಿದರು. ಸ್ವರಚಿತ ಹಾಡುಗಳ ಮೂಲಕ ಕನ್ನಡ ಅಭಿಮಾನ ಮೂಡಿಸಿದರು. ಶಾಲೆ ಕಾರ್ಯನಿವಾಹಕ ಬಿಬಿನ್, ಧರ್ಮಗುರು ವರ್ಗಿಸ್ ಪೌಲ್ ಇದ್ದರು. ಗುಡ್ಡೆಹೊಸೂರು: ಇಲ್ಲಿನ ಗ್ರಾ.ಪಂ. ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು. ಧ್ವಜಾರೋಹಣವನ್ನು ಪಂಚಾಯಿತಿ ಅಧ್ಯಕ್ಷರಾದ ರುಕ್ಮೀಣಿ ಅವರು ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಕೆ.ಚಿದಾನಂದ, ಉಷಾ ನಾರಾಯಣ ಹಾಜರಿದ್ದರು.
ಕೊಡಗು ಜಿಲ್ಲಾ ಪಂಚಾಯಿತಿ ವತಿಯಿಂದ
ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್.ಸಬಾಸ್ಟೀನ್ ವಹಿಸಿದ್ದರು. ಸಮಾರಂಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಿಲ್‌ಕುಮಾರ್, ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ ಕನ್ನಡ ರಾಜ್ಯೋತ್ಸವದ ಶುಭಾಶಯ ನುಡಿಗಳನ್ನಾಡಿದರು.
ಇದೇ ಸಂದರ್ಭ ಕಳೆದ ೨೮ ವರ್ಷಗಳ ಹಿಂದೆ ಸುಂಟಿಕೊಪ್ಪದಲ್ಲಿ ಕನ್ನಡ ವೃತ್ತವನ್ನು ಸ್ಥಾಪಿಸಲು ಶ್ರಮಿಸಿದ ಸುಂಟಿಕೊಪ್ಪ ಗ್ರಾಮ ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಾರಂಭದಲ್ಲಿ ಕನ್ನಡ ಕ್ರಿಯಾ ಸಮಿತಿ ಅಧ್ಯಕ್ಷ ಯಶೋಧರ ಪೂಜಾರಿ, ಕೆ.ಪಿ.ಜಗನ್ನಾಥ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾಗೇಶ ಪೂಜಾರಿ, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್, ಗ್ರಾ.ಪಂ. ಸದಸ್ಯರುಗಳಾದ ಸೋಮನಾಥ್, ರಫಿಕ್ ಖಾನ್, ವಸಂತಿ, ಗ್ರಾ.ಪಂ.ಲೆಕ್ಕಪರಿಶೋಧಕಿ ಚಂದ್ರಕಲಾ, ಸುಂಟಿಕೊಪ್ಪ ನಾಡು ಗೌಡ ಸಮಾಜದ ಕಾರ್ಯದರ್ಶಿ ಕೌಶಿಕ್, ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಸರಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಲಕೃಷ್ಣ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಗೀತಾ, ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾ ಯನಿ ಜೋವಿಟಾ ವಾಜ್, ತಲೆಹೊರೆ ಕನ್ನಡಾಭಿಮಾನಿ ಸಂಘದ ಅಧ್ಯಕ್ಷ ಸಂತೋಷ್, ಲಯನ್ಸ್ ಸಂಸ್ಥೆಯ ಅಧ್ಯಕ್ಷ ಶಶಾಂಕ್,ಅAಗನವಾಡಿ ಕಾರ್ಯಕರ್ತೆಯರು ಹಾಗೂ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಸಂತ ಅಂತೋಣಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ಪ್ರಾರ್ಥಿಸಿ, ಸರಕಾರಿ ಪ್ರೌಢಶಾಲಾ ಮಕ್ಕಳು, ನಾಡಗೀತೆಯನ್ನು ಹಾಡಿದರು ಕಾರ್ಯದರ್ಶಿ ಕೆ.ಎಸ್.ಅನಿಲ್ ಸ್ವಾಗತಿಸಿ ಎಂ.ಎಸ್.ಸುನಿಲ್ ನಿರೂಪಿಸಿ, ಕೆ.ಎಸ್.ಅನಿಲ್ ವಂದಿಸಿದರು. ಹೆಬ್ಬಾಲೆ: ಕುಶಾಲನಗರ ತಾಲೂಕು ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ೬೯ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲೆಯ ಎಸ್. ಡಿ. ಎಂ ಸಿ. ಅಧ್ಯಕ್ಷರಾದ ಪ್ರದೀಪ್, ಮುಖ್ಯ ಶಿಕ್ಷಕರಾದ ವೆಂಕಟೇಶ್. ಶಿಕ್ಷಕಿಯರಾದ ಜಾನಕಿ, ಬಬಿತ, ದೈಹಿಕ ಶಿಕ್ಷಣ ಶಿಕ್ಷಕಿ ವಂಜಮ್ಮ ಮತ್ತು ಶಿಕ್ಷಕಿ ರಮ್ಯಾ, ಹೆಬ್ಬಾಲೆ ಅಂಬೇಡ್ಕರ್ ವಸತಿ ನಿಲಯದ ಆನಂದ್ ಮತ್ತು ಶಾಲಾ ಮಕ್ಕಳು ಹಾಜರಿದ್ದರು.
ಸ್ವಚ್ಚತಾ ಇ ಸೇವಾ ಕಾರ್ಯಕ್ರಮದಲ್ಲಿ ಇಲ್ಲಿನ ಪಂಚಾಯ್ತಿ ಇತ್ತೀಚೆಗೆ ಪ್ರಶಸ್ತಿ ಪಡೆದಿತ್ತು. ಇದನ್ನು ಪರಿಗಣಿಸಿ ಇಲ್ಲಿನ ಪೌರಕಾರ್ಮಿಕರಾದ ನಂಜುAಡ,ಪ್ರತಾಪ್,ಮತ್ತು ಟ್ರಾಕ್ಟರ್ ಚಾಲಕರಾದ ವಿಜಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭ ಇಲ್ಲಿನ ಪಿ.ಡಿ.ಓ ಸುಮೇಶ್, ಕಾರ್ಯದರ್ಶಿ ಕುಮಾರಸ್ವಾಮಿ ಮತ್ತು ಪಂಚಾಯ್ತಿ ಸಿಬ್ಬಂದಿಗಳು ಹಾಜರಿದ್ದರು.