ಮಡಿಕೇರಿ, ನ. ೫: ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ನಿವೃತ್ತ ಪೌರಸೇವಾ ನೌಕರರು, ಕುಟುಂಬ ಪಿಂಚಣಿದಾರರು ಅವರ ಜೀವಿತ ಪ್ರಮಾಣಪತ್ರವನ್ನು ತಾ. ೨೫ ರೊಳಗಾಗಿ ಜಿಲ್ಲಾ ಖಜಾನೆ, ತಾಲೂಕು ಖಜಾನೆಗಳಿಗೆ ಸಲ್ಲಿಸಬೇಕಿದೆ. ಕೊಡಗು ಜಿಲ್ಲೆಯ ಸ್ಥಳೀಯ ಸಂಸ್ಥೆಗಳಾದ ಮಡಿಕೇರಿ ನಗರಸಭೆ, ವೀರಾಜಪೇಟೆ, ಸೋಮವಾರಪೇಟೆ, ಕುಶಾಲನಗರ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ ನಿವೃತ್ತ ನೌಕರರು ಮತ್ತು ಕುಟುಂಬದ ಪಿಂಚಣಿದಾರರು ಅವರ ಜೀವಿತ ಪ್ರಮಾಣ ಪತ್ರಗಳ್ನು ನಿಗದಿತ ನಮೂನೆಯಲ್ಲಿ ಅವರು ಪಿಂಚಣಿ ಪಡೆಯುವ ಬ್ಯಾಂಕಿನ ವ್ಯವಸ್ಥಾಪಕರ ದೃಢೀಕರಣದೊಂದಿಗೆ ಜಿಲ್ಲಾ ಖಜಾನೆಗೆ ತಾ. ೨೫ರ ಒಳಗಾಗಿ ತಪ್ಪದೆ ಸಲ್ಲಿಸುವಂತೆ ಕೊಡಗು ಜಿಲ್ಲಾ ನಿವೃತ್ತ ಪೌರಸೇವಾ ನೌಕರರ ಸಂಘದ ಅಧ್ಯಕ್ಷ ಎಂ. ಉಮ್ಮರ್ ತಿಳಿಸಿದ್ದಾರೆ.