ಸುನಾಮಿ ಎಂಬ ಪದವು ಜಪಾನೀ ಪದಗಳಾದ ‘‘ತ್ಸು’’ ಅಂದರೆ ಬಂದರು. ಮತ್ತು ‘‘ನಾಮಿ’’ ಎಂದರೆ ಅಲೆಗಳು ಎಂಬ ಅರ್ಥವನ್ನು ಒಳಗೊಂಡಿದೆ. ಸುನಾಮಿಯು ಸಾಮಾನ್ಯವಾಗಿ ಸಮುದ್ರದ ತಳಭಾಗದಲ್ಲಿ ಅಥವಾ ಸಮೀಪದಲ್ಲಿ ಉಂಟಾಗುವ ಭೂಕಂಪನದಿAದ ಆಗುತ್ತದೆ. ಜ್ವಾಲಾಮುಖಿ ಸ್ಪೋಟಗಳು, ಜಲಾಂತರ್ಗಾಮಿ ಭೂಕುಸಿತಗಳು ಮತ್ತು ಕರಾವಳಿ ಬಂಡೆಗಳ ಕುಸಿತಗಳು ಸಹ ಸುನಾಮಿಯನ್ನು ಉಂಟುಮಾಡುತ್ತವೆ. ಕೆಲವು ಆಕಾಶಕಾಯಗಳು ಸಮುದ್ರಕ್ಕೆ ಅಪ್ಪಳಿಸಿದಾಗ ಕೂಡ ಸುನಾಮಿಯು ಉಂಟಾಗಬಹುದೆAದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಡಿಸೆಂಬರ್ ೨೦೧೫ರಲ್ಲಿ ಯುಎನ್ ಜನರಲ್ ಅಸೆಂಬ್ಲಿಯು ನವೆಂಬರ್ ೫ನ್ನು ವಿಶ್ವ ಸುನಾಮಿ ಜಾಗೃತಿ ದಿನವೆಂದು ಗೊತ್ತುಪಡಿಸಿದೆ. ದೇಶಗಳು, ಅಂರ‍್ರಾಷ್ಟಿçÃಯ ಸಂಸ್ಥೆಗಳು ಮತ್ತು ನಾಗರಿಕ ಸಮಾಜವು ಸುನಾಮಿ ಜಾಗೃತಿಯನ್ನು ಹೆಚ್ಚಿಸಲು ಮತ್ತು ಅಪಾಯವನ್ನು ಕಡಿಮೆ ಮಾಡಲು ನವೀನ ವಿಧಾನಗಳನ್ನು ಹಂಚಿಕೊಳ್ಳಲು ಕರೆ ನೀಡಿತು. ಸುನಾಮಿಗಳು ಅಪರೂಪದ ಘಟನೆಗಳಾದರೂ ಕೂಡ ಅಪಾರ ಪ್ರಮಾಣದ ಆಸ್ತಿ ಹಾಳಾಗುತ್ತದೆ. ಅಲ್ಲದೆ, ಪ್ರಾಣಹಾನಿ ಕೂಡ ಸಂಭವಿಸುತ್ತದೆ.
೨೦೨೨ರಲ್ಲಿ ವಿಶ್ವಸಂಸ್ಥೆಯ ವಿಪತ್ತು ಅಪಾಯ ಕಡಿತದ ಕಚೇರಿ (Uಓಆಖಖ) ಸುನಾಮಿಯ ಅಪಾಯವನ್ನು ಕಡಿಮೆ ಮಾಡುವ ಬಗ್ಗೆ ಜಾಗೃತಿ ಉಂಟುಮಾಡಲು ಅಭಿಯಾನವನ್ನು ಪ್ರಾರಂಭಿಸಿತು. ಇದು ಸಮುದಾಯಗಳು ನೈಸರ್ಗಿಕ ವಿಪತ್ತುಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ. ಸುನಾಮಿ ಮುಂಚಿನ ಎಚ್ಚರಿಕೆಗಳು ಜನರನ್ನು ರಕ್ಷಿಸಲು, ಜೀವಗಳನ್ನು ಉಳಿಸಲು ಮತ್ತು ಅಪಾಯವನ್ನು ದುರಂತವಾಗದAತೆ ತಡೆಯಲು ಸಾಧ್ಯವಾಗುತ್ತದೆ.
ಡಿಸೆಂಬರ್ ೨೬, ೨೦೦೪ರಂದು ಹಿಂದೂಮಹಾಸಾಗರದಲ್ಲಿ ಉಂಟಾದ ಭೂಕಂಪನವು ವಿನಾಶಕಾರಿ ಸುನಾಮಿಗೆ ಕಾರಣವಾಯಿತು. ಈ ದುರಂತದಿAದ ಲಕ್ಷಾಂತರ ಜನರು ಪ್ರಾಣ ತೆತ್ತಿದ್ದಾರೆ ಮತ್ತು ಹಲವಾರು ದೇಶಗಳ ಮೇಲೆ ಪರಿಣಾಮ ಬೀರಿದೆ. ಈ ಘಟನೆಯು ೨೧ನೇ ಶತಮಾನದ ಪ್ರಮುಖ ಜಾಗತಿಕ ವಿಪತ್ತನ್ನು ಉಂಟುಮಾಡಿದೆ ಮತ್ತು ಇತಿಹಾಸದಲ್ಲಿ ಮಾರಣಾಂತಿಕವಾಗಿ ಉಳಿಸಿದೆ. ಈ ಸುನಾಮಿಯಿಂದ ಬದುಕುಳಿದವರು ಹೊಸಪಾಠಗಳನ್ನು ಕಲಿತಿದ್ದಾರೆ. ಸುನಾಮಿಯ ಎಚ್ಚರಿಕೆಯ ಚಿಹ್ನೆಗಳನ್ನು ಗುರುತಿಸುವುದು, ಎತ್ತರ ಪ್ರದೇಶಗಳಿಗೆ ತೆರಳುವುದು ಮತ್ತು ಮಾಧ್ಯಮಗಳ ಮೂಲಕ ಎಲ್ಲರಿಗೂ ತಿಳಿಯಪಡಿಸುವುದು, ಸುನಾಮಿಯ ಅಪಾಯದಿಂದ ತಪ್ಪಿಸಿಕೊಳ್ಳುವ ಮಾರ್ಗಗಳಾಗಿವೆ. ಸುನಾಮಿಯ ಅಪಾಯದ ಬಗ್ಗೆ ಜನರು ಚೆನ್ನಾಗಿ ತಿಳಿದಿದ್ದರೆ ಮತ್ತು ತುರ್ತು ಸಂದರ್ಭದಲ್ಲಿ ಏನು ಮಾಡಬೇಕೆಂದು ತಿಳಿದಿದ್ದರೆ ಮುಂದಿನ ಎಚ್ಚರಿಕೆಯ ವ್ಯವಸ್ಥೆಯು ಪರಿಣಾ ಮಕಾರಿಯಾಗುತ್ತದೆ.
-ಸಿ. ದುರ್ಗೇಶ್, ಕುಶಾಲನಗರ, ಮೊ. ೯೯೦೧೨೬೭೦೦೧