ಶನಿವಾರಸಂತೆ, ನ. ೬: ಮೈಸೂರು ಜಿಲ್ಲಾಡಳಿತ ವತಿಯಿಂದ ನೀಡಿದ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ೪೦ ವರ್ಷ ಯೋಗ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಲ್ಲಿಸಿದ ಗಣನೀಯ ಸೇವೆಗಾಗಿ ಯೋಗಾಚಾರ್ಯ ಡಾ. ಬಿ.ಪಿ. ಮೂರ್ತಿ ಭಾಜನ ರಾಗಿದ್ದಾರೆ. ಮೂಲತಃ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬೆಂಬಳೂರು ಗ್ರಾಮದವರಾದ ಡಾ. ಬಿ.ಪಿ. ಮೂರ್ತಿ ಅವರನ್ನು ತಾ. ೧ ರಂದು ಮೈಸೂರಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಸಮಾಜ ಕಲ್ಯಾಣ ಸಚಿವ ಹಾಗೂ ಮೈಸೂರು ಉಸ್ತುವಾರಿ ಸಚಿವ ಹೆಚ್.ಸಿ. ಮಹದೇವಪ್ಪ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

ಬೆಂಬಳೂರು ಗ್ರಾಮದ ಬಿ.ಕೆ. ಪುಟ್ಟಪ್ಪ - ಹೂವಮ್ಮ ದಂಪತಿಯ ಪುತ್ರರಾದ ಡಾ. ಬಿ.ಪಿ. ಮೂರ್ತಿ ಮೈಸೂರಿನ ಚೈತನ್ಯ ಯೋಗ ಎಜುಕೇಶನ್ ಆ್ಯಂಡ್ ರಿಸರ್ಚ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.