ಶನಿವಾರಸಂತೆ, ನ. ೬: ಪಟ್ಟಣದ ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿ ಪರಿವಾರ ದೇವರ ಸೇವಾ ಸಮಿತಿ ವತಿಯಿಂದ ತಾ.೧೮ ರಂದು ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿ ಪರಿವಾರ ದೇವರ ದೇವಸ್ಥಾನದ ೬ ನೇ ವರ್ಷದ ವಾರ್ಷಿಕೋತ್ಸವ ನಡೆಯಲಿದೆ. ಅಂದು ಬೆಳಿಗ್ಗೆ ವಿಶೇಷ ಪೂಜೆ ಹಾಗೂ ಲೋಕ ಕಲ್ಯಾಣಾರ್ಥವಾಗಿ ಹೋಮ ಮತ್ತು ಮಹಾ ಪೂಜೆ ಏರ್ಪಡಿಸಲಾಗಿದೆ. ಬೆಳಿಗ್ಗೆ ೫-೩೦ ರಿಂದ ಗಂಗೆಪೂಜೆ, ಗೋಪೂಜೆ, ಮಂಗಳಾರತಿಯಾಗಿ ಸಹಕಾರ ಬ್ಯಾಂಕ್ ಹತ್ತಿರದಿಂದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಕಳಶ, ಕುಂಭ ಮೆರವಣಿಗೆ ನಡೆಯಲಿದೆ.

(ಮೊದಲ ಪುಟದಿಂದ) ಬೆಳಿಗ್ಗೆ ೭-೩೦ ರಿಂದ ಶ್ರೀ ಗಣಪತಿ ಪಾರ್ವತಿ ಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಮಹಾಸಂಕಲ್ಪ, ಮಹಾಮಂಗಳಾರತಿ ಮತ್ತು ಪ್ರಸಾದ ವಿನಿಯೋಗ, ೯ ಗಂಟೆಗೆ ಬ್ರಹ್ಮದೇವರ ಮಹಾಪೂಜೆ, ೯-೩೦ಕ್ಕೆ ಬಿದರೂರು ಶ್ರೀ ಬಸವೇಶ್ವರ ದೇವರ ಮಹಾಪೂಜೆ, ೧೦ ಕ್ಕೆ ಹೆಮ್ಮನೆ ಗ್ರಾಮದ ಮಾರಮ್ಮ ಮತ್ತು ಶ್ರೀ ಬಸವೇಶ್ವರ ದೇವರ ಮಹಾಪೂಜೆ, ೧೧ ಕ್ಕೆ ತ್ಯಾಗರಾಜ ಕಾಲೋನಿಯ ಶ್ರೀ ಚಾಮುಂಡೇಶ್ವರಿ ದೇವಿ- ಗುಳಿಗ ದೈವದ ಮಹಾಪೂಜೆ, ೧೧-೩೦ ಕ್ಕೆ ವಿಜಯ ವಿನಾಯಕ ದೇವರ ಮಹಾಪೂಜೆ, ಮಧ್ಯಾಹ್ನ ೧೨ ಗಂಟೆಗೆ ಬನ್ನಿಮಂಟಪದಲ್ಲಿ ಮಹಾಪೂಜೆ, ೧೨-೩೦ ಕ್ಕೆ ಶ್ರೀರಾಮ ಮಂದಿರದಲ್ಲಿ ಮಹಾಪೂಜೆ, ೧ ಗಂಟೆಗೆ ಮುಖ್ಯ ರಸ್ತೆಯಲ್ಲಿರುವ ಜಾಮೀಯಾ ಮಸೀದಿಯಲ್ಲಿ ಪ್ರಾರ್ಥನೆ, ೧-೩೦ ಕ್ಕೆ ಶ್ರೀ ಬೀರಲಿಂಗೇಶ್ವರ ಪ್ರಬಲ ಭೈರವಿ ದೇವರ ಮಹಾಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗವಿದೆ. ಪೂಜೆಗಳ ನಂತರ ಭಕ್ತಾದಿಗಳಿಗೆ ಅನ್ನದಾಸೋಹ ಏರ್ಪಡಿಸಲಾಗಿದೆ. ಸಂಜೆ ೫ ಗಂಟೆಯಿAದ ದೀಪಾರಾಧನೆ, ಗಣಪತಿ ಪೂಜೆ ಪಂಚಗವ್ಯ, ಪುಣ್ಯಾಹ, ದೇವನಾಂದಿ, ನವಗ್ರಹ ಹಾಗೂ ಮೃತ್ಯುಂಜಯ ಪೂಜೆ, ನವಗ್ರಹ, ಮೃತ್ಯುಂಜಯ ಹೋಮ, ಗಣಪತಿ ಹೋಮ, ಧನ್ವಂತರಿ ಹೋಮ, ಮೂಲದೇವರಿಗೆ ಫಲ-ಪಂಚಾಮೃತ ಅಭಿಷೇಕ, ಏಕವಾರು ರುದ್ರಾಭಿಷೇಕ, ಮಹಾಬಲಿ, ಮಹಾಪೂಜೆ, ಮಹಾಮಂಗಳಾರತಿ ನಂತರ ತೀರ್ಥ ಪ್ರೋಕ್ಷಣೆ, ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ ಎಂದು ಶ್ರೀ ಬೀರಲಿಂಗೇಶ್ವರ, ಪ್ರಬಲ ಭೈರವಿ, ಪರಿವಾರ ದೇವರಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.