ಮಡಿಕೇರಿ, ನ. ೬: ಜಿಲ್ಲೆಯಲ್ಲಿ ವಿವಿಧೆಡೆ ನಡೆಯುತ್ತಿರುವ ಬೃಹತ್ ಪ್ರಮಾಣದ ಭೂ-ಪರಿವರ್ತನೆ ವಿರೋಧಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಬಿಟ್ಟಂಗಾಲದಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಕಾರ್ಯಕ್ರಮ ನಡೆಯಿತು. ಬರಪೊಳೆ, ಕೊಂಗಣಪೊಳೆ ಸೇರಿದಂತೆ ಕಾವೇರಿ ನದಿಯ ಹಲವಾರು ಉಪ ನದಿಗಳಿಗೆ ಜೀವಜಲ ಮತ್ತು ಜೀವ ಸೆಲೆಯಾಗಿರುವ ಕೊಡವ ಲ್ಯಾಂಡ್ನ ಆಯಕಟ್ಟಿನ ಸ್ಥಳವಾದ ಪೆರುಂಬಾಡಿ, ಬಾಳುಗೋಡು, ನಾಂಗಾಲ, ಬಿಟ್ಟಂಗಾಲಗಳಲ್ಲಿ ಕೂಡ ೨೦೨೦-೨೧ರ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯ ಹುಳುಕುಗಳ ಮೂಲಕ ನೆಲ ಕಬಳಿಸಲು ಹದ್ದಿನ ಕಣ್ಣಿಟ್ಟಿರುವ ಹೊರಗಿನ ಬಂಡವಾಳಶಾಹಿ, ರೆಸಾರ್ಟ್ ಮಾಫಿಯಾ ಹಾಗೂ ಟೌನ್ಶಿಪ್ ದಣಿಗಳು, ದಂಧೆಕೋರರು ಗುಡ್ಡ-ಬೆಟ್ಟ ಕೊರೆದು ಕಾಡು, ಪ್ರಾಕೃತಿಕ ಸಂಪನ್ಮೂಲ ಲೂಟಿ ಮಾಡಿ ಕೊಡವ ಜನಪದ ಸಂಸ್ಕೃತಿಯ ಗರ್ಭಗುಡಿಯಾದ ಮಂದ್, ಗ್ರಾಮದೇವತೆ - ನಾಡ್ ದೇವತೆಗಳ ನೆಲೆಗಳನ್ನು ಧ್ವಂಸಮಾಡುವ ಸಂಚು ರೂಪಿಸುತ್ತಿದೆ ಎಂದು ಸಿ.ಎನ್.ಸಿ ಅಧ್ಯಕ್ಷ ಎನ್.ಯು. ನಾಚಪ್ಪ ಆಕ್ರೋಶ ವ್ಯಕ್ತಪಡಿಸಿದರು.
ನಾಂಗಾಲದಲ್ಲಿ ಆಂಧ್ರದ ಉದ್ಯಮಿಯೊಬ್ಬರು ಸುಮಾರು ೫೦ ಎಕರೆ ಕೃಷಿ ಭೂಮಿಯನ್ನು ಕಬಳಿಸಿ ಜಲಸೆಲೆ ಉತ್ಪಾದಿಸುವ ಹಲವಾರು ಜೀವಜಲಗಳ ತಾಣವಾಗಿರುವ ಬೃಹತ್ ಗುಡ್ಡವೊಂದನ್ನು ಸೀಳಿ ರೆಸಾರ್ಟ್ ನಿರ್ಮಿಸಿ ಸ್ಥಳೀಯರಿಗೆ ಭಯಭೀತಿ ಉಂಟುಮಾಡುತ್ತಿದ್ದಾರೆ. ದಕ್ಷಿಣ ಭಾರತದ ದೊಡ್ಡ ರಾಜ್ಯವೊಂದರ ಪಾರ್ಲಿಮೆಂಟ್ ಸದಸ್ಯರು ತಮ್ಮ ಕಪ್ಪುಹಣವನ್ನು ತಮ್ಮ ಸಂಬAಧಿ ಉದ್ಯಮಿಯೊಬ್ಬರೊಂದಿಗೆ ವಿನಿಯೋಗಿಸಿ ಕೊಡವಲ್ಯಾಂಡ್ ನಾದ್ಯಂತ ಹಾಗೂ ಬಿಟ್ಟಂಗಾಲ ಪ್ರದೇಶದಲ್ಲಿ ಕೃಷಿ ಭೂಮಿ ಖರೀದಿಸಿ ಬೃಹತ್ ನಗರ ಹಾಗೂ ಆರ್ಥಿಕ ಕಾರಿಡಾರ್ ರೂಪಿಸುವ ಹುನ್ನಾರದಲ್ಲಿದ್ದಾರೆ. ಈ ಎಲ್ಲಾ ಅನಾಹುತಗಳಿಂದ ಮುಕ್ತಿ ಪಡೆಯಲು ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಆದಿಮಸಂಜಾತ ಕೊಡವ ಕುಲಕ್ಕೆ ರಾಜ್ಯಾಂಗದತ್ತವಾಗಿ ಎಸ್.ಟಿ ಟ್ಯಾಗ್ ಮತ್ತು ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ಮತ್ತು ಸ್ವಯಂ ನಿರ್ಣಯ ಅಧಿಕಾರ ಪಡೆಯುವುದೊಂದೇ ಸಿದ್ಧೌಷದವಾಗಿದೆ ಎಂದು ಎನ್.ಯು. ನಾಚಪ್ಪ ಪ್ರತಿಪಾದಿಸಿದರು.
ರಾಜಕಾರಣಿಗಳು ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅಕ್ರಮ ಬಾಂಗ್ಲಾ ವಲಸಿಗರಿಗೆ ಆಶ್ರಯ ನೀಡುತ್ತಿದ್ದಾರೆ. ನಕಲಿ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ಗಳನ್ನು ಮಾಡಿಕೊಡುತ್ತಿದ್ದಾರೆ ಎಂದು ಅವರು ಆರೋಪಿಸಿದರು. ಕೊಡವರೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಇದೆಲ್ಲವನ್ನು ತಡೆಯಲು ಸಾಧ್ಯ. ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮ ಬಂಡವಾಳಶಾಹಿಗಳು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಸಮಾಜಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಕಪ್ಪುಹಣವನ್ನು ಬಿಳಿ ಮಾಡುವುದಕ್ಕಾಗಿ ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದರು. ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ಅನ್ನು ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ನಾಚಪ್ಪ ಆತಂಕ ವ್ಯಕ್ತಪಡಿಸಿದರು.
ಆದಿಮಸಂಜಾತ ಕೊಡವರ ಹಕ್ಕುಗಳನ್ನು ರಕ್ಷಿಸಲು ``ಕೊಡವ ಲ್ಯಾಂಡ್'' ಸ್ವಯಂ ನಿರ್ಣಯದ ಭೂರಾಜಕೀಯ ಸ್ವಾಯತ್ತತೆ ಘೋಷಣೆ ಮತ್ತು ಕೊಡವರಿಗೆ ಎಸ್ ಟಿ ಟ್ಯಾಗ್ ನೀಡುವುದು ಅಗತ್ಯವಾಗಿದೆ. ಇದಕ್ಕಾಗಿ ವ್ಯಾಪಕ ಜನಜಾಗೃತಿ ಮತ್ತು ಜಿಲ್ಲೆಯಾದ್ಯಂತ ಶಾಂತಿಯುತ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು. ಜನಜಾಗೃತಿ ಮಾನವ ಸರಪಳಿಯಲ್ಲಿ ಸುತ್ತಮುತ್ತಲಿನ ಜನರು ಹಾಗೂ ಪ್ರಮುಖರು ಪಾಲ್ಗೊಂಡಿದ್ದರು. ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಪ್ರತಿಜ್ಞಾವಿಧಿ ಸ್ವೀಕರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಮುದ್ದಿಯಡ ಲೀಲಾವತಿ, ಮಾಳೇಟಿರ ವಿಮಲ, ನೆಲ್ಲಮಕ್ಕಡ ಯಶೋಧ, ಪೊನ್ನಕಚ್ಚಿರ ಶೈಲಾ, ಮಳವಂಡ ಕವಿತಾ, ಪೊರ್ಕೊಂಡ ದಕ್ಷ, ಪೊರ್ಕೊಂಡ ನಿಶಾ, ಅಪ್ಪಂಡೇರAಡ ಭವ್ಯ, ಮಾಚೆಟ್ಟಿರ ಚೋಟು ಕಾವೇರಪ್ಪ, ಕಾಳೇಂಗಡ ರಮೇಶ್, ಬುಟ್ಟಿಯಂಡ ಸೋಮಣ್ಣ, ಗುಡ್ಡಂಡ ದೀಪಕ್, ಮಾಚೆಟ್ಟಿರ ಸಚಿನ್, ಬೊಪ್ಪಂಡ ಸತೀಶ್, ಪೊನ್ನಕಚ್ಚಿರ ಎಸ್. ಪೂಣಚ್ಚ, ಕೇಳಪಂಡ ಗಣಪತಿ, ಕೊಟ್ಟಿಯಂಡ ಮಂಜು, ಪೊನ್ನಕಚ್ಚಿರ ಭೀಮಯ್ಯ, ಕುಪ್ಪಂಡ ಮನು, ಕುಪ್ಪಂಡ ಜಯ ಕರುಂಬಯ್ಯ, ಪೊನ್ನಕಚ್ಚಿರ ಬಿದ್ದಪ್ಪ, ಚೇಂದ್ರಿಮಾಡ ಚಂಗಪ್ಪ, ಪೊನ್ನಕಚ್ಚಿರ ಸಿ.ಪೂಣಚ್ಚ, ಮುದ್ದಿಯಡ ಮಾದಪ್ಪ, ಕೇಕಡ ನಾಣಯ್ಯ, ಚಂಗೆಟ್ಟಿರ ಸೋಮಯ್ಯ, ಗುಡ್ಡಂಡ ಎಸ್.ಪೂಣಚ್ಚ, ಕುಂಬೆರ ಬಿದ್ದಪ್ಪ, ಚೇಂದAಡ ಗೌತಮ್, ಚೇಂದAಡ ಭೀಮಯ್ಯ, ಮೂಕಚಂಡ ಪ್ರಸನ್ನ ಸುಬ್ಬಯ್ಯ, ಬಲ್ಲಡಿಚಂಡ ಲೋಕನಾಥ್, ಕಂಜಿತAಡ ಈರಪ್ಪ, ಕಂಜಿತAಡ ಚಿಣ್ಣಪ್ಪ, ಕಂಬೀರAಡ ಮದನ್, ಕೇಳಪಂಡ ಸುಬ್ರಮಣಿ, ಚೇಂದAಡ ಸೋಮಯ್ಯ, ನಂಬುಡುಮಾಡ ನಾಚಪ್ಪ, ಮೂಕಂಡ ಪಟ್ಟು ಪೂಣಚ್ಚ, ಪೊನ್ನಕಚ್ಚಿರ ಚರ್ಮಣ, ಪೊನ್ನಕಚ್ಚಿರ ಸುನೀಲ್ ಮಂದಣ್ಣ, ಕಂಜಿತAಡ ಶರತ್, ಪೊರ್ಕೊಂಡ ಕುಂಞಪ್ಪ, ಮುಕ್ಕಾಟಿರ ಸುನಿಲ್, ಅರೆಯಂಡ ಅಯ್ಯಣ್ಣ, ಕುಪ್ಪಂಡ ಗೋಪಾಲ್, ಚಂಬಾAಡ ಜನತ್, ಅಪ್ಪೆಯಂಗಡ ಮಾಲೆ, ಕಿರಿಯಮಾಡ ಶೆರಿನ್, ಅಜ್ಜಿಕುಟ್ಟಿರ ಲೋಕೇಶ್, ಕೊಂಗAಡ ಮಾದಪ್ಪ, ಕೊಂಗAಡ ಅರುಣ್, ಅಣ್ಣಳಮಾಡ ಹರೀಶ್, ಕುಪ್ಪಣಮಾಡ ಪ್ರೀತಂ, ಕುಪ್ಪಂಡ ಸುರೇಶ್, ಕಳ್ಳಿಚಂಡ ರವಿ, ಪಟ್ಟಡ ರಂಜನ್ ತಿಮ್ಮಯ್ಯ, ನಂಬುಡುಮಾಡ ಅಪ್ಪಯ್ಯ, ಪೊನ್ನಕಚ್ಚಿರ ಪವಿತ್ರ, ಕುಲ್ಲಚಂಡ ಬೋಪಣ್ಣ, ಚೊಟ್ಟೆಮಂಡ ಪ್ರವೀಣ್ ಭಾಗವಹಿಸಿದ್ದರು.