ಮಡಿಕೇರಿ, ನ. ೬: ಕನ್ನಡ ಪುಸ್ತಕ ಸಂಸ್ಕೃತಿ ಇಮ್ಮಡಿ ಗೊಳಿಸುವ ಉದ್ದೇಶದಿಂದ ರಾಜಧಾನಿ ಬೆಂಗಳೂರಿನಲ್ಲಿ ಎರಡನೇ ವರ್ಷದ “ವೀರಲೋಕ ಪುಸ್ತಕ ಸಂತೆ”ಗೆ ತಯಾರಿ ನಡೆದಿದೆ ಎಂದು ವೀರಲೋಕ ಪ್ರಕಾಶನದ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಒಂದೇ ಸೂರಿನಡಿ ನೂರಕ್ಕೂ ಅಧಿಕ ಲೇಖಕರು, ಪ್ರಕಾಶಕರು, ನವೆಂಬರ್ ೧೫, ೧೬, ೧೭ ರಂದು ಜಯನಗರದ ಅಲಂಕೃತ ಶಾಲಿನಿ ಮೈದಾನದಲ್ಲಿ ಭೇಟಿಗೆ ಲಭ್ಯವಾಗಲಿದ್ದಾರೆ.
ರಾಜ್ಯದ ಮೂಲೆಮೂಲೆಗಳಿಂದ ಲೇಖಕರು, ಪ್ರಕಾಶಕರನ್ನು ಗುರುತಿಸಿ, ಆಹ್ವಾನಿಸಲಾಗಿದ್ದು, ಪ್ರತಿಯೊಬ್ಬರೂ ಪ್ರತ್ಯೇಕ ಮಳಿಗೆಗಳಲ್ಲಿ ಪುಸ್ತಕಗಳೊಂದಿಗೆ ಓದುಗರನ್ನು ಭೇಟಿ ಮಾಡಲಿದ್ದಾರೆ. ಲಕ್ಷ ಸಂಖ್ಯೆಯಲ್ಲಿ ಕನ್ನಡ ಪುಸ್ತಕಗಳು ಮಾರಾಟಕ್ಕೆ ಲಭ್ಯವಿದೆ. ಲೇಖಕರು ಮಾರಾಟವಾಗುವ ತಮ್ಮ ಪುಸ್ತಕಗಳಿಗೆ ಖುದ್ದಾಗಿ ಸಹಿ ಮಾಡಲಿದ್ದಾರೆ.
ಪುಸ್ತಕ ಮಳಿಗೆಗಳನ್ನು ಹೊರತುಪಡಿಸಿ ಇತರ ಆಕರ್ಷಣೆಗಳೂ ಇದ್ದು, ಮಕ್ಕಳಿಗಾಗಿಯೇ ವಿಶೇಷ ಆಟ ಮತ್ತು ಮನೋರಂಜನಾ ವಿಭಾಗಗಳಿವೆ. ನೂರಕ್ಕೂ ಅಧಿಕ, ಆಹಾರ, ಆರೋಗ್ಯ, ವಸ್ತç, ಚಿತ್ರಕಲೆ, ಸಣ್ಣ ಕೈಗಾರಿಕಾ ಮಳೆಗೆಗಳು ಕನ್ನಡಿಗರನ್ನು ಆಕರ್ಷಿಸಲಿವೆ.
ಅಥsÀðಪೂರ್ಣ ಉದ್ಘಾಟನೆಯ ಬಳಿಕ ನಿತ್ಯ ಜಾನಪದ ಸಂಜೆ, ಭಾವಗೀತೆ ಸಂಜೆ, ಚಲನಚಿತ್ರ ಗೀತೆಗಳ ಸಂಜೆ ಕಾರ್ಯಕ್ರಮಗಳು ನಡೆಯಲಿವೆ ಎಂದು ವೀರಕಪುತ್ರ ಶ್ರೀನಿವಾಸ್ ತಿಳಿಸಿದ್ದಾರೆ.
ಈ ಸಂದರ್ಭ ವೀರಲೋಕ ಪ್ರಕಟಣೆಯ ಇಪ್ಪತ್ತು ಪುಸ್ತಕಗಳು ಲೋಕಾರ್ಪಣೆ ಆಗಲಿವೆ. ಕಳೆದ ಸಾಲಿನಲ್ಲಿ ಏರ್ಪಡಿಸಿದ್ದ ಪುಸ್ತಕ ಸಂತೆಗೆ ಜಾತ್ರೆಗೆ ಬಂದAತೆ ಕನ್ನಡಾಭಿಮಾನಿಗಳು ಭೇಟಿ ನೀಡಿದ್ದು, ಈ ಬಾರಿಯೂ ಅತ್ಯಧಿಕ ಸಂಖ್ಯೆಯಲ್ಲಿ ಓದುಗರು ಬರಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.