ಮಡಿಕೇರಿ, ನ. ೬: ನೆಲ್ಲಿಹುದಿಕೇರಿ ಗ್ರಾಮ ನಿವಾಸಿ ನೆಲ್ಸನ್ ಪಿ. ಮ್ಯಾಥ್ಯು (೨೮) ನಾಪತ್ತೆಯಾಗಿರುವುದಾಗಿ ಅವರ ತಂದೆ ಮ್ಯಾಥ್ಯೂ ಪಿ.ವಿ ಅವರು ಮಡಿಕೇರಿ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ. ಮಡಿಕೇರಿ ಸಮೀಪ ನೀರುಕೊಲ್ಲಿಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಮಾನಸಿಕ ಅಸ್ವಸ್ಥನಾಗಿರುವ ನೆಲ್ಸನ್ ಮ್ಯಾಥ್ಯು ತಪ್ಪಿಸಿಕೊಂಡು ಹೋಗಿರುವುದಾಗಿ ದೂರಿನಲ್ಲಿ ಉಲ್ಲೇಖವಾಗಿದೆ.