*ಸಿದ್ದಾಪುರ, ನ. ೬: ಎಸ್.ಎನ್.ಡಿ.ಪಿ ನಂಜರಾಯಪಟ್ಟಣ ಶಾಖೆ ಮತ್ತು ಓಣಂ ಆಚರಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಗಳ ೧೭೦ನೇ ಜಯಂತಿ ಹಾಗೂ ೫ನೇ ವರ್ಷದ ಓಣಂ ಹಬ್ಬವನ್ನು ಸಂಭ್ರಮದಿAದ ಆಚರಿಸಲಾಯಿತು.

ಹೊಸಪಟ್ಟಣದ ಸಮುದಾಯ ಭವನ ಮತ್ತು ಸಾರ್ವಜನಿಕ ಆಟದ ಮೈದಾನದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಕಾಫಿ ಬೆಳೆಗಾರ ಟಿ.ಕೆ. ರಘು ಉದ್ಘಾಟಿಸಿದರು.

ಸಭಾ ಕಾರ್ಯಕ್ರಮಕ್ಕೂ ಮುನ್ನ ಶ್ರೀ ಪೊನ್ನು ಮುತ್ತಪ್ಪನ್ ಕಲಾ ಸಮಿತಿಯ ಚಂಡೆವಾದ್ಯದೊAದಿಗೆ ನಂಜರಾಯಪಟ್ಟಣದ ಎಸ್‌ಎನ್‌ಡಿಪಿ ನೂತನ ಶಾಖಾ ಸ್ಥಳದಿಂದ ಹೊರಟ ಶೋಭಾಯಾತ್ರೆ ಹೊಸಪಟ್ಟಣ ಗ್ರಾವದ ಶ್ರೀ ಮುತ್ತಪ್ಪ ದೇವಾಲಯಕ್ಕೆ ತೆರಳಿ ಪಯಂಗಿತ್ತಿ ಪೂಜೆ ನೆರವೇರಿಸಿದ ನಂತರ ಸಮುದಾಯ ಭವನದಲ್ಲಿ ಸಮಾಪ್ತಿಗೊಂಡಿತು. ನಂತರ ಓಣಂ ಸಧ್ಯ (ವಿಶೇಷ ಭೋಜನ) ಸವಿದರು.

ಎಸ್.ಎನ್.ಡಿ.ಪಿ ನಂಜರಾಯ ಪಟ್ಟಣ ಶಾಲೆಯ ಅಧ್ಯಕ್ಷ ಟಿ.ಟಿ. ನವೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಸಿದ್ದಾಪುರ ಯೂನಿಯನ್ ಎಸ್‌ಎನ್‌ಡಿಪಿ ಅಧ್ಯಕ್ಷ ವಿ.ಕೆ.ಲೋಕೇಶ್, ಹಿಂದೂ ಮಲಯಾಳಿ ಸಮಾಜಗಳ ಒಕ್ಕೂಟದ ಅಧ್ಯಕ್ಷ ವಿ.ಎಂ. ವಿಜಯನ್ ಸೇರಿದಂತೆ ಮತ್ತಿತರು ಇದ್ದರು.

ಓಣಂ ಅಂಗವಾಗಿ ಸಮುದಾಯ ಬಾಂಧವರಿಗೆ ಓಟದ ಸ್ಪರ್ಧೆ, ಭಾರದ ಗುಂಡು ಎಸೆತ, ಹಗ್ಗಜಗ್ಗಾಟ ಸೇರಿದಂತೆ ವಿವಿಧ ಕ್ರೀಡಾಕೂಟಗಳು ನಡೆಯಿತು. ಅಲ್ಲದೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಮಾಜ ಬಾಂಧವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.