ವಾಷಿAಗ್ಟನ್, ನ. ೬: ವಿಶ್ವದ ದೊಡ್ಡಣ್ಣ ಖ್ಯಾತಿಯ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದ ೪೭ನೆ ರಾಷ್ಟçಪತಿಯಾಗಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಚುನಾಯಿತರಾಗಿದ್ದಾರೆ. ನವೆಂಬರ್ ೫ ರಂದು ನಡೆದ ಬಹುನಿರೀಕ್ಷಿತ ಚುನಾವಣೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಬಹುಮತಕ್ಕೆ ಅಗತ್ಯವಿದ್ದ ೨೭೦ ಎಲೆಕ್ಟೋರಲ್ ವೋಟ್ ದಾಟಿದ ಟ್ರಂಪ್ ೨ನೆ ಬಾರಿಗೆ ದೇಶದ ಅಧ್ಯಕ್ಷರಾಗಿ ಆಯ್ಕೆಗೊಂಡರು.
ಟ್ರಂಪ್ಗೆ ವಿರೋಧವಾಗಿ ಸ್ಪರ್ಧಿಸಿದ್ದ ಡೆಮಾಕ್ರೆಟಿಕ್ ಪಕ್ಷದ ಕಮಲಾ ಹ್ಯಾರಿಸ್ ೨೨೪ ಎಲೆಕ್ಟೋರಲ್ ಮತಗÀಳನ್ನು ಪಡೆದುಕೊಂಡರೆ, ಟ್ರಂಪ್ ೨೭೭ ಎಲೆಕ್ಟೋರಲ್ ಮತಗಳನ್ನು ಪಡೆದುಕೊಂಡರು. ಟ್ರಂಪ್ ಪರ ಶೇ.೫೧ ಮತಗಳು ಚಲಾವಣೆಯಾಗಿದ್ದು, ಒಟ್ಟು ೭ ಕೋಟಿಗೂ ಅಧಿಕ ಮತಗಳು ಅವರ ಪರ ಬಿದ್ದಿವೆ. ಕಮಲಾ ಹ್ಯಾರಿಸ್ ಪರ ಶೇ.೪೭.೫ ವೋಟ್ಗಳು ಚಲಾವಣೆಯಾಗಿದ್ದು, ೬ ಕೋಟಿ ೬೦ ಲಕ್ಷ ಮತಗಳು ಅವರ ಪರ ಚಲಾವಣೆಯಾಗಿವೆ. ಇತರ ಸ್ವತಂತ್ರ ಅಭ್ಯರ್ಥಿಗಳು ಉಳಿದ ಮತದ ಪಾಲು ಪಡೆದುಕೊಂಡಿದ್ದಾರೆ. ಉಪರಾಷ್ಟçಪತಿಯಾಗಿ ರಿಪಬ್ಲಿಕನ್ ಪಕ್ಷದ ಜೆ.ಡಿ ವ್ಯಾನ್ಸ್ ಆಯ್ಕೆಗೊಂಡಿದ್ದಾರೆ. ಮುಂದಿನ ೪ ವರ್ಷಕ್ಕೆ ರಿಪಬ್ಲಿಕನ್ ಪಕ್ಷದ ಟ್ರಂಪ್ ಹಾಗೂ ವ್ಯಾನ್ಸ್ ದೇಶದ ಆಡಳಿತ ನಡೆಸಲಿದ್ದಾರೆ.
ಮೋದಿ ಅಭಿನಂದನೆ
೨ನೆ ಬಾರಿಗೆ ಅಮೇರಿಕಾದ ಅಧ್ಯಕ್ಷರಾಗಿ ಆಯ್ಕೆಯಾದ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಈ ಹಿಂದಿನ ತಮ್ಮ ಆಡಳಿತದಲ್ಲಿನ ಯಶಸ್ಸಿನ ಹಾದಿಯನ್ನು ಮುಂದುವರಿಸುತ್ತಾ ಭಾರತ ಹಾಗೂ ಅಮೇರಿಕಾ ನಡುವಿನ ಸಂಬAಧವನ್ನು ಗಟ್ಟಿಗೊಳಿಸಿ ಜಾಗತಿಕ ಶಾಂತಿ, ಸಮೃದ್ಧತೆಗೆ ಶ್ರಮಿಸೋಣ ಎಂದು ಟ್ವೀಟ್ ಮೂಲಕ ಸಂದೇಶ ನೀಡಿದ್ದಾರೆ.