ಮಡಿಕೇರಿ, ನ. ೬: ನಗರದ ಸುಬ್ರಮಣ್ಯ ಕೊಡವಕೇರಿ ಮುಂದಾಳತ್ವದಲ್ಲಿ ತಾ. ೯ರಂದು ಕೊಡವ ಸಮಾಜದಲ್ಲಿ ೭ನೇ ಕೊಡವ ಅಂತರ್ಕೇರಿ ಜನಪದ ಸಾಂಸ್ಕೃತಿಕ ಮೇಳ ಆಯೋಜಿಸಲಾಗಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೊಡವರ ವಿಶಿಷ್ಟ ಆಚಾರ, ವಿಚಾರ, ಸಂಪ್ರದಾಯ ಆಚರಣೆ, ಜಾನಪದ ಕಲೆಗಳನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಸಲುವಾಗಿ ಮಡಿಕೇರಿ ನಗರದ ಆಯಾ ವ್ಯಾಪ್ತಿಗೆ ಒಳಪಟ್ಟು ಒಂದೊAದು ಕೇರಿಯನ್ನು ಹಲವು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತಂದು ಆಯಾ ಕೇರಿಯ ಜನಾಂಗ ಬಾಂಧವರು ಒಟ್ಟಿಗೆ ಸೇರಿ ಪರಸ್ಪರ ವಿಚಾರ ವಿನಿಮಯದೊಂದಿಗೆ ತಮ್ಮ ಜಾನಪದ ಕಲೆಗಳಿಗೂ ಒತ್ತು ನೀಡುವ ಚಿಂತನೆಯೊAದಿಗೆ ಪ್ರತೀ ೩ ವರ್ಷಗಳಿಗೊಮ್ಮೆ ‘‘ಅಂತರ ಕೇರಿ ಮೇಳ’’ವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಈ ಬಾರಿ ೭ನೇ ಕೊಡವ ಅಂತರಕೇರಿ ಜಾನಪದ ಸಾಂಸ್ಕೃತಿಕ ಮೇಳ ಮಡಿಕೇರಿ ಸುಬ್ರಮಣ್ಯ ನಗರದ, ‘‘ಸುಬ್ರಮಣ್ಯ ಕೊಡವ ಕೇರಿ’’ಯ ನೇತೃತ್ವದಲ್ಲಿ ತಾ. ೯ರಂದು ಜರುಗಲಿದೆ. ಮಡಿಕೇರಿ ನಗರದ ೧೨ ಕೇರಿಯ ಕೊಡವ ಜನಾಂಗ ಬಾಂಧವರು ಈ ಮೇಳದಲ್ಲಿ ಭಾಗವಹಿಸಲಿದ್ದು, ಅಂದು ಬೆಳಿಗ್ಗೆ ೮.೪೫ಕ್ಕೆ ಕೊಡವ ಸಮಾಜದಲ್ಲಿ ಧ್ವಜಾರೋಹಣದೊಂದಿಗೆ ಸುಬ್ರಮಣ್ಯ ಕೇರಿಯ ಹಿರಿಯ ಸದಸ್ಯೆ ನಂದೇಟಿರ ಗೌರಮ್ಮ ಮುತ್ತಪ್ಪ ಅಂತರ್ ಕೇರಿ ಜಾನಪದ ಸಾಂಸ್ಕೃತಿಕ ಚಟುವಟಿಕೆ ಗಳಿಗೆ ಚಾಲನೆ ನೀಡಲಿದ್ದಾರೆ. ಮೇಳವನ್ನು ಸುಬ್ರಮಣ್ಯ ಕೊಡವ ಕೇರಿಯ ಹಿರಿಯ ಸದಸ್ಯ ಕಾಳಿಮಾಡ ನಾಚಪ್ಪ ಉದ್ಘಾಟಿಸಲಿದ್ದಾರೆ. ನಂತರ ಕೇರಿ ಕೇರಿಗಳ ನಡುವೆ ಬೊಳಕಾಟ್, ಕೋಲಾಟ್, ಮಹಿಳೆಯರ ಉಮ್ಮತಾಟ್, ಕಪ್ಪೆಯಾಟ್, ಬಾಳೋಪಾಟ್, ತಾಲಿಪಾಟ್, ಸಮ್ಮಂದ ಅಡ್ಕುವೋ, ವಾಲಗತಾಟ್, ಕೊಡವ ಹಾಡು ಹೀಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ಮಧ್ಯಾಹ್ನ ೩.೩೦ಕ್ಕೆ ಸಮಾರೋಪ ಸಮಾರಂಭ, ಬಹುಮಾನ ವಿತರಣೆ ನಡೆಯಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು
(ಮೊದಲ ಪುಟದಿಂದ) ಅಂತರಕೇರಿ ಮೇಳದ ಅಧ್ಯಕ್ಷ ನಾಳಿಯಂಡ ಎಂ. ನಾಣಯ್ಯ ವಹಿಸಿಕೊಳ್ಳಲಿದ್ದಾರೆ. ಸಭೆಯ ಗೌರವಾಧ್ಯಕ್ಷತೆಯನ್ನು ಮಡಿಕೇರಿ ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವೀರಾಜಪೇಟೆ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಮಡಿಕೇರಿ ಕೊಡವ ಸಮಾಜದ ಮಾಜಿ ಅಧ್ಯಕ್ಷ ಕೊಂಗಾAಡ ಎಸ್. ದೇವಯ್ಯ ಮತ್ತು ಮಾಜಿ ವಿಧಾನಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಪಾಲ್ಗೊಳ್ಳಿದ್ದಾರೆ. ಕಾರ್ಯಕ್ರಮದಲ್ಲಿ ಹಿರಿಯರಾದ ಪುಲಿಯಂಡ ಕೆ. ಮಾದಪ್ಪ ಮತ್ತು ಬಾಚಂಗಡ ಕೆ. ಸೀತಮ್ಮ ಹಾಗೂ ಕ್ರೀಡೆಯಲ್ಲಿ ಸಾಧನೆಗೈದಿರುವ ತಾತಪಂಡ ಜ್ಯೋತಿ ಸೋಮಯ್ಯ ಮತ್ತು ಬೊಳ್ಳಂಡ ಉನ್ನತಿ ಅಯ್ಯಪ್ಪ ಇವರುಗಳನ್ನು ಗಣ್ಯರು ಸನ್ಮಾನಿಸಲಿದ್ದಾರೆ.
ಸಮಾರೋಪ ಸಮಾರಂಭದ ನಂತರ ಸಂಜೆ ಮನೋರಂಜನಾ ಕಾರ್ಯಕ್ರಮಗಳು ಜರುಗಲಿದ್ದು, ಗಾಯಕ ಮಾಳೇಟಿರ ಅಜಿತ್ ತಂಡದವರಿAದ ಕೊಡವ ಸಂಗೀತ ರಸಮಂಜರಿ ಆಯೋಜಿಸಲಾಗಿದೆ ಎಂದು ಮುತ್ತಪ್ಪ ವಿವರಿಸಿದರು. ಗೋಷ್ಠಿಯಲ್ಲಿ ಮೇಳದ ಅಧ್ಯಕ್ಷ ನಾಳಿಯಂಡ ಎಂ. ನಾಣಯ್ಯ, ಸುಬ್ರಮಣ್ಯ ಕೇರಿ ಅಧ್ಯಕ್ಷ ಅರೆಯಡ ಪಿ. ರಮೇಶ್, ಉಪಾಧ್ಯಕ್ಷ ಕೇಕಡ ಕಿರಣ್, ಖಜಾಂಚಿ ನಾಟೋಳಂಡ ಪ್ರಕಾಶ್, ನಿರ್ದೇಶಕಿ ಮೇಳದ ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕಿ ಬೊಪ್ಪಂಡ ಸರಳ ಕರುಂಬಯ್ಯ ಉಪಸ್ಥಿತರಿದ್ದರು.