ಪೊನ್ನಂಪೇಟೆ, ನ. ೭: ಗೋಣಿಕೊಪ್ಪಲು ಕಾವೇರಿ ಕಾಲೇಜು ಐ ಕ್ಯೂ ಎ ಸಿ, ಬಿಸಿಎ ಹಾಗೂ ಬಿ.ಎಸ್ಸಿ ಐ ಟಿ ವಿಭಾಗದ ವತಿಯಿಂದ ತಾ.೧೫ ರಂದು ೧೦ ನೇ ವರ್ಷದ ರಾಜ್ಯಮಟ್ಟದ ಅಚಿಂತ್ಯ ಟೆಕ್ ಫೆಸ್ಟ್ ಆಯೋಜಿಸಲಾಗಿದೆ ಎಂದು ಗೋಣಿಕೊಪ್ಪಲು ಕಾವೇರಿ ಕಾಲೇಜು ಪ್ರಾಂಶುಪಾಲ ಡಾ. ಎಂ. ಬಿ. ಕಾವೇರಿಯಪ್ಪ ಹೇಳಿದರು.
ಕಾವೇರಿ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿ ಅಡಗಿರುವ ಪ್ರತಿಭೆ ಹಾಗೂ ಕ್ರಿಯಾಶೀಲತೆಗೆ ವೇದಿಕೆಯನ್ನು ಒದಗಿಸುವ ಉದ್ದೇಶದಿಂದ ಕಳೆದ ೯ ವರ್ಷಗಳಿಂದ ವಿಭಿನ್ನ ರೀತಿಯಲ್ಲಿ ಅಚಿಂತ್ಯ ಟೆಕ್ ಫೆಸ್ಟ್ ಆಯೋಜಿಸಲಾಗುತ್ತಿದೆ ಎಂದರು.
ಬಿ ಸಿ ಎ ವಿಭಾಗ ಮುಖ್ಯಸ್ಥ ಯು. ಟಿ. ಪೆಮ್ಮಯ್ಯ ಮಾತನಾಡಿ ಈ ರಾಜ್ಯಮಟ್ಟದ ಟೆಕ್ಫೆಸ್ಟ್ನಲ್ಲಿ ರಾಜ್ಯದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಈ ಕಾರ್ಯಕ್ರಮದಲ್ಲಿ ನೃತ್ಯ ಸ್ಪರ್ಧೆ, ಗಾಯನ ಸ್ಪರ್ಧೆ, ರಸಪ್ರಶ್ನೆ, ಫೇಸ್ ಪೇಂಟಿAಗ್, ಪೇಪರ್ ಪ್ರೆಸೆಂಟೇಶನ್, ಬಾಕ್ಸ್ ಕ್ರಿಕೆಟ್, ಶಾರ್ಟ್ ಮೂವಿ ಹಾಗೂ ಗೇಮಿಂಗ್ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಚಿಂತ್ಯ ಟೆಕ್ ಪೆಸ್ಟ್ ನ ೧೦ ನೇ ವರ್ಷದ ಸಂಭ್ರಮವನ್ನು ವಿಭಿನ್ನವಾಗಿ ಆಚರಿಸುವ ನಿಟ್ಟಿನಲ್ಲಿ ಈ ಬಾರಿ ಕೊಡಗಿನಲ್ಲಿ ಇದೇ ಪ್ರಥಮ ಬಾರಿಗೆ ಪದವಿ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಮುಕ್ತ ರಿಮೋಟ್ ಕಂಟ್ರೋಲ್ ಕಾರ್ ರೇಸ್ ಆಯೋಜಿಸಲಾಗಿದೆ. ಆಸಕ್ತ ಕಾಲೇಜು ವಿದ್ಯಾರ್ಥಿಗಳು ತಾ. ೧೨ ರ ಸಂಜೆ ೫ ಗಂಟೆ ಒಳಗೆ ಹೆಸರು ನೋಂದಣಿ ಮಾಡಿಕೊಳ್ಳಬೇಕಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. ಸಂ. ೯೦೦೮೭೩೮೫೪೭, ೭೮೯೯೧೪೭೬೨೭ ಕ್ಕೆ ಸಂಪರ್ಕಿಸುವAತೆ ತಿಳಿಸಿದರು. ಈ ಸಂದರ್ಭ ಉಪಪ್ರಾಂಶುಪಾಲೆ ಪ್ರೊ. ಎಂ. ಎಸ್. ಭಾರತಿ, ಕಚೇರಿ ಅಧೀಕ್ಷಕಿ ಟಿ. ಕೆ. ಲತಾ ಹಾಗೂ ಐ ಟಿ ಕ್ಲಬ್ ಸಂಚಾಲಕ ಅದಿತ್ ಕುಶಾಲ್ ಇದ್ದರು.