ಶನಿವಾರಸಂತೆ, ನ. ೭: ಪಟ್ಟಣದ ಚಂಗಡಹಳ್ಳಿ ರಸ್ತೆಯಲ್ಲಿ ಶ್ರೀ ಏಕದಂತ ಟ್ರಾö್ಯಕ್ಟರ್ ಒಕ್ಕೂಟದ ವತಿಯಿಂದ ಪ್ರತಿಷ್ಠಾಪಿಸಿ ೬೨ ದಿನಗಳ ಕಾಲ ಪೂಜಿಸಿದ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ನಿನ್ನೆ ವಿಜೃಂಭಣೆಯಿAದ ಜರುಗಿತು.
ಬೆಳಿಗ್ಗೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಯಿತು. ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಸಂಜೆ ೫ ಗಂಟೆಯಿAದ ವಿದ್ಯುತ್ ದೀಪಗಳಿಂದ ಅಲಂಕೃತ ಭವ್ಯ ಮಂಟಪದಲ್ಲಿ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ಕುಳ್ಳಿರಿಸಿ, ಹುದ್ದೂರಿನ ಹೆಸರಾಂತ ಶ್ರೀ ವೀರಭದ್ರೇಶ್ವರ ವೀರಗಾಸೆ ಕಲಾತಂಡದಿAದ ಪ್ರದರ್ಶನ, ಕೊಡಗಿನ ಕನಸು ಡಿ.ಜೆ. ಸೌಂಡ್ಸ್ ನಿಂದ ಡಿ.ಜೆ. ಕಾರ್ಯಕ್ರಮ, ಬಾಳುಪೇಟೆಯ ಹಿಂದೂ ಟೈಗರ್ಸ್ ತಂಡದಿAದ ನಾಸಿಕ್ ಬ್ಯಾಂಡ್, ದುದ್ಲಾಪುರದ ಮಂಜುಶ್ರೀ ಜಾನಪದ ಕಲಾ ತಂಡದಿAದ ಕಾರ್ಯಕ್ರಮ, ಪುರುಷಕೋಡಿಯ ಶ್ರೀ ಕಾಳಿಕಾಂಬ ಗೊಂಬೆ ಬಳಗದ ಕಾರ್ಯಕ್ರಮಗಳ ಜತೆಗೆ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಿಡಿಮದ್ದಿನ ಪ್ರದರ್ಶನ ದೊಂದಿಗೆ ಶನಿವಾರಸಂತೆಯ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ, ಸಮೀಪದ ಕಾಜೂರು ಹೊಳೆಯಲ್ಲಿ ಶ್ರೀ ಗೌರಿ-ಗಣೇಶ ಉತ್ಸವ ಮೂರ್ತಿಗಳನ್ನು ವಿಸರ್ಜಿಸಲಾಯಿತು.
ಪೂಜಾ ಕೈಂಕರ್ಯ ಹಾಗೂ ಮೆರವಣಿಗೆಯಲ್ಲಿ ೩ ಸಾವಿರಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಪೂಜೆ ಹಾಗೂ ಮೆರವಣಿಗೆ ಸಂದರ್ಭ ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್, ಶನಿವಾರಸಂತೆ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಚಂದ್ರು, ಗೋವಿಂದ್‌ರಾಜ್ ಹಾಗೂ ಸಿಬ್ಬಂದಿ ಪೊಲೀಸ್ ಬಂದೋಬಸ್ತ್ ಕಲ್ಪಿಸಿದರು. ಏಕದಂತ ಟ್ರಾö್ಯಕ್ಟರ್ ಒಕ್ಕೂಟದ ಅಧ್ಯಕ್ಷ ಧರ್ಮರಾಜ್, ಉಪಾಧ್ಯಕ್ಷ ಗೋಪಿ ಸುರೇಶ್, ಕಾರ್ಯದರ್ಶಿ ಪ್ರವೀಣ್ ಕುಮಾರ್ ಹಾಗೂ ಸದಸ್ಯರು ಹಾಜರಿದ್ದರು.