ಮಡಿಕೇರಿ, ನ. ೭: ಕಳೆದ ನಾಲ್ಕು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ತರಲಾಗಿದ್ದ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅನ್ನು ಇದೀಗ ಕೇಂದ್ರ ಸಮಿತಿಯಾಗಿರುವ ಅಖಿಲ ಕೊಡವ ಸಮಾಜದಿಂದ ಅಮಾನತು ಗೊಳಿಸಲಾಗಿದೆ. ಯೂತ್ ವಿಂಗ್ನ ಕೆಲವು ಕಾರ್ಯ ಚಟುವಟಿಕೆಗಳ ಕುರಿತಾಗಿ ಸಾಮಾಜಿಕ ಜಾಲತಾಣದ ಮೂಲಕ ಆಕ್ಷೇಪ ವ್ಯಕ್ತವಾಗಿ ಇದು ಬಿಸಿ ಬಿಸಿ ಚರ್ಚೆಗೆ ಗ್ರಾಸವಾಗಿತ್ತು.
ಆಕ್ಷೇಪಗಳ ಬಗ್ಗೆ ಯೂತ್ ವಿಂಗ್ನ ಅಧ್ಯಕ್ಷರೂ ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ಇದೀಗ ಒಂದೆರಡು ದಿನದ ಹಿಂದೆ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಅವರು ಸಹಿ ಮಾಡಿ ಹೊರಡಿಸಿರುವ ಆದೇಶದಲ್ಲಿ ಯೂತ್ ವಿಂಗ್ ಅನ್ನು ಅಮಾನತ್ತುಗೊಳಿಸಿರುವ ಮಾಹಿತಿ ಬಹಿರಂಗವಾಗಿದೆ.
ಯೂತ್ ವಿಂಗ್ ಅನ್ನು ೭.೧೦.೨೦೨೦ರಲ್ಲಿ ಅಖಿಲ ಕೊಡವ ಸಮಾಜದ ಆಗಿನ ಅಧ್ಯಕ್ಷರಾಗಿದ್ದ ದಿ. ಮಾತಂಡ ಮೊಣ್ಣಪ್ಪ ಅವರ ಅವಧಿಯಲ್ಲಿ ರಚನೆ ಮಾಡಲಾಗಿತ್ತು. ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ ಅವರು ಯೂತ್ ವಿಂಗ್ ಅಧ್ಯಕ್ಷರಾಗಿ ಈ ತನಕ ಕಾರ್ಯನಿರ್ವಹಿಸುತ್ತಿದ್ದರು.
ಅಮಾನತ್ತು ವಿಚಾರಕ್ಕೆ ಸಂಬAಧಿಸಿದAತೆ ತಾ. ೮ರಂದು (ಇಂದು) ಅಖಿಲ ಕೊಡವ ಸಮಾಜದ ಸಭೆ ನಿಗದಿಯಾಗಿದ್ದು, ಈ ಸಭೆಯಲ್ಲಿ ಅಂತಿಮ ನಿರ್ಧಾರ ಹೊರಬೀಳಿದೆ ಎಂದು ತಿಳಿದುಬಂದಿದೆ.