ಕಣಿವೆ, ನ. ೭ : ಕುಶಾಲನಗರ ತಾಲೂಕು ಕೇಂದ್ರವಾಗಿ ಮಾರ್ಪಾಡು ಹೊಂದಿ ಸರಿ ಸುಮಾರು ನಾಲ್ಕು ವರ್ಷಗಳು ಕಳೆಯುತ್ತಾ ಬಂದರೂ ಕೂಡ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳ ಆಡಳಿತ ಸೌಧಕ್ಕೆ ಇದುವರೆಗೂ ಸ್ವಂತದ್ದಾದ ಸೂಕ್ತ ಜಾಗವೇ ದೊರಕಿಲ್ಲ. ಹಾಗಾಗಿ ಹಿಂದಿನ ಕಾಲದಿಂದಲೂ ಇದ್ದಂತಹ ನಾಡ ಕಚೇರಿಯೇ ಪ್ರಸಕ್ತ ಕುಶಾಲನಗರ ತಾಲೂಕು ತಹಶೀಲ್ದಾರ್ ಕಛೇರಿಯಾಗಿದ್ದು ಕಿಷ್ಕಿಂದೆಯಾಗಿದೆ.

ದೊರಕದ ಸೂಕ್ತ ಜಾಗ

ಕುಶಾಲನಗರ ತಾಲೂಕು ವ್ಯಾಪ್ತಿಯ ಸುತ್ತಲಿನ ಹತ್ತಾರು ಗ್ರಾಮಗಳ ಜನರು ಬಂದು ಹೋಗಲು ಅನುಕೂಲ ವಾಗುವಂತಹ ಸೂಕ್ತ ಸ್ಥಳದಲ್ಲಿ ತಹಶೀಲ್ದಾರ್ ಕಚೇರಿ ಇದ್ದರೆ ಸೂಕ್ತ.

ಹಾಗಾಗಿ ಪ್ರಸಕ್ತ ಕುಶಾಲನಗರ ಪ್ರವಾಸಿ ಮಂದಿರಕ್ಕೆ ಸೇರಿದ ಒಂದು ಎಕರೆ ಜಾಗದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗುತ್ತಿರುವ ಪ್ರವಾಸಿ ಮಂದಿರದ ಆಸುಪಾಸಿ ನಲ್ಲಿಯೇ ತಹಶೀಲ್ದಾರ್ ಕಚೇರಿಯೂ ಇದ್ದರೆ ಜನರಿಗೆ ಸೂಕ್ತ ಎಂಬ ಕಾರಣಕ್ಕಾಗಿ ಪ್ರವಾಸಿ ಮಂದಿರದ ಬಲಬದಿಯ ಸರ್ವೆ ನಂಬರ್ ೫೨/೦೨ ರಲ್ಲಿ ಈಗಾಗಲೇ ನಿಗದಿಪಡಿಸ ಲಾಗಿದ್ದ ತಾಲೂಕು ತಹಶೀಲ್ದಾರ್ ಹಾಗೂ ದಂಡಾಧಿಕಾರಿಗಳ ಸರ್ಕಾರಿ ವಸತಿ ನಿವಾಸ ಹಾಗೂ ಸಿಬ್ಬಂದಿಗಳ ವಸತಿ ನಿವಾಸದ ಖಾಲಿ ಭೂಮಿಯನ್ನು ತಹಶೀಲ್ದಾರ್ ಆಡಳಿತ ಸೌಧ ನಿರ್ಮಾಣಕ್ಕೆ ಬಳಸಿಕೊಂಡು ತಹಶೀಲ್ದಾರ್ ನಿವಾಸಕ್ಕೆ ಬೇರೊಂದು ಕಡೆ ಬದಲೀ ಜಾಗದ ಶೋಧದಲ್ಲಿ ಸ್ಥಳೀಯ ರಾಜಕಾರಣಿಗಳು ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ನಿರತರಾಗಿದ್ದಾರೆ. ಆದರೆ ತಹಶೀಲ್ದಾರರ ನಿವಾಸಕ್ಕೆಂದು ಗುರುತಿಸಿರುವ ಜಾಗದ ದಾಖಲೆಗಳಲ್ಲಿ ತಹಶೀಲ್ದಾರ್ ಕಾರ್ಯಾಲಯವಾಗಿ ಮಾರ್ಪಡಿಸಲು ಇರುವ ತೊಡಕು ಗಳನ್ನು ಸರಿಪಡಿಸಿಯೇ ಆಡಳಿತ ಸೌಧ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕಿದೆ.

ಕಳೆದ ಮೂರ್ನಾಲ್ಕು ವರ್ಷ ಗಳಿಂದಲೂ ಸೂಕ್ತ ಜಾಗದ ಹುಡು ಕಾಟದಲ್ಲಿಯೇ ಇರುವ ಕಂದಾಯ ಇಲಾಖೆ ಅದು ಯಾವಾಗ ಸೂಕ್ತ ಜಾಗವನ್ನು ಗುರುತಿಸುವುದೋ? ಅದು ಯಾವಾಗ ಸರ್ಕಾರದಿಂದ ಅನುದಾನ ತಂದು ಆಡಳಿತ ಭವನ ಕಟ್ಟಡ ನಿರ್ಮಾಣಕ್ಕೆ ಮುಂದಾಗು ವುದೋ ಕಾದು ನೋಡಬೇಕಿದೆ.

ಕಿಷ್ಕಿಂದೆಯAತಿರುವ

ತಹಶೀಲ್ದಾರ್ ಕಚೇರಿ

ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ ತಹಶೀಲ್ದಾರ್ ಕಚೇರಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿರುವ ಹಳೆಯ ಕಟ್ಟಡವಾಗಿದ್ದು ಸಂಪೂರ್ಣ ಶಿಥಿಲಾವಸ್ಥೆ ತಲುಪಿದೆ.

ಹಾಗಾಗಿ ಕಿಷ್ಕಿಂದೆಯAತಿರುವ ಈ ಕಚೇರಿಯಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕುಳಿತು ಕಾರ್ಯ ನಿರ್ವಹಿಸಲು ಸೂಕ್ತ ಸ್ಥಳಾವಕಾಶದ ಕೊರತೆ ಇದೆ.

ಜೊತೆಗೆ ಕೆಲಸ ಕಾರ್ಯಗಳಿಗೆ ದೂರದಿಂದ ಆಗಮಿಸುವ ಸಾರ್ವಜ ನಿಕರಿಗೂ ಕುಳಿತು ವಿರಮಿಸಲು ಆಗದಷ್ಟು ಜಾಗ ಕಿಷ್ಕಿಂದೆಯಾಗಿದೆ.

ವಾಹನಗಳ ನಿಲುಗಡೆಗೂ ಅನಾನುಕೂಲವಾಗಿದೆ. ಹಾಲೀ ಇರುವ ತಹಶೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ಆರಕ್ಷಕ ಉಪ ಅಧೀಕ್ಷಕರ ಕಚೇರಿ, ವೃತ್ತ ನಿರೀಕ್ಷಕರ ಕಚೇರಿ, ಟ್ರೆಜರಿ, ಟೌನ್ ಪೊಲೀಸ್ ಠಾಣೆ ಹೀಗೆ ಹಲವು ಇಲಾಖೆಗಳು ಒಂದೇ ಕಡೆ ಇರುವುದರಿಂದ ಸಿಬ್ಬಂದಿಗಳು ಹಾಗೂ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ತೀವ್ರ ಅನಾನುಕೂಲವಾಗುತ್ತಿದೆ.

ಆದ್ದರಿಂದ ಆದಷ್ಟು ಬೇಗನೆ ತಾಲೂಕು ಆಡಳಿತ ಸೌಧ ನಿರ್ಮಾಣಕ್ಕೆ ಮುನ್ನುಡಿ ಬರೆಯಲು ಶಾಸಕರಾದ ಡಾ. ಮಂತರ್‌ಗೌಡರು ಮುಂದಾಗಬೇಕಿದೆ ಎಂಬುದು ತಾಲೂಕಿನ ಮಹಾಜನತೆಯ ಆಗ್ರಹವಾಗಿದೆ.

-ಕೆ.ಎಸ್. ಮೂರ್ತಿ