ಮಡಿಕೇರಿ, ನ. ೬: ವಕ್ಫ್ ಆಸ್ತಿ ವಿಚಾರವನ್ನು ಮುಂದಿಟ್ಟುಕೊAಡು ಭಾರತೀಯ ಜನತಾ ಪಾರ್ಟಿ ರಾಜ್ಯದಲ್ಲಿ ಕೋಮು ದ್ವೇಷ ಸೃಷ್ಟಿಸುತ್ತಿದೆ. ಬಿಜೆಪಿಯ ಕೆಲ ನಾಯಕರುಗಳು ಮುಸಲ್ಮಾನರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದರೂ ಅವರುಗಳ ವಿರುದ್ಧ ಯಾವುದೇ ಕ್ರಮಕೈಗೊಳ್ಳದೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿಷ್ಕಿçಯವಾಗಿದೆ ಎಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮೈಸೂರು ಆರೋಪಿಸಿದ್ದಾರೆ.
ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದ ಕೆಲವೆಡೆ ಉಪ ಚುನಾವಣೆ ಘೋಷಣೆಯಾಗಿದೆ. ಈ ಚುನಾವಣೆಯನ್ನು ಗೆಲ್ಲುವ ಉದ್ದೇಶದಿಂದ ಬಿಜೆಪಿ ವಕ್ಫ್ ಆಸ್ತಿ ವಿಚಾರವನ್ನು ತನ್ನ ಅಜೆಂಡವಾಗಿ ಬಳಸಿಕೊಳ್ಳುತ್ತಿದೆ. ವಕ್ಫ್ ಆಸ್ತಿ ಸರ್ಕಾರದ ಸ್ವತ್ತಲ್ಲ; ಮುಸಲ್ಮಾನ ದಾನಿಗಳು, ಶ್ರೀಮಂತರು ದೇವರ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ನೀಡಿರುವ ಆಸ್ತಿ ಇದಾಗಿದೆ. ಮುಸಲ್ಮಾನರಲ್ಲದ ವ್ಯಕ್ತಿಗಳು ಕೂಡ ವಕ್ಫ್ಗೆ ಜಾಗವನ್ನು ದಾನವಾಗಿ ನೀಡಿದ್ದಾರೆ. ರಾಜ್ಯದಲ್ಲಿ ೧ ಲಕ್ಷದ ೨೫ ಸಾವಿರ ಎಕರೆ ಆಸ್ತಿ ವಕ್ಫ್ ಬೋರ್ಡ್ ಹೆಸರಿನಲ್ಲಿರುವ ಬಗ್ಗೆ ದಾಖಲಾಗಿದೆ. ಆದರೆ ಈ ಪೈಕಿ ೧ ಲಕ್ಷದ ೨ ಸಾವಿರ ಎಕರೆ ಆಸ್ತಿ ಕಬಳಿಸಲ್ಪಟ್ಟಿದ್ದು, ೨೩ ಸಾವಿರ ಎಕರೆ ಆಸ್ತಿ ಮಾತ್ರ ವಕ್ಫ್ ಹಿಡಿತದಲ್ಲಿದೆ. ವಕ್ಫ್ ಆಸ್ತಿಯನ್ನು ಮುಸಲ್ಮಾನರೇ ಹೆಚ್ಚು ಒತ್ತುವರಿ ಮಾಡಿಕೊಂಡಿದ್ದಾರೆ. ವಕ್ಫ್ ಆಸ್ತಿ ಕಬಳಿಕೆ ಸಂಬAಧ ಹಲವಾರು ಕೇಸುಗಳು ನಡೆಯುತ್ತಲೇ ಇವೆ.
(ಮೊದಲ ಪುಟದಿಂದ) ನಿಯಮಾನುಸಾರ ಒತ್ತುವರಿಗೆ ಸಂಬAಧಿಸಿದAತೆ ನೋಟಿಸ್ ಜಾರಿ ಮಾಡಿ ದಾಖಲೆಗಳನ್ನು ನೀಡಿ ಎಂದು ಕೇಳುವುದರಲ್ಲಿ ತಪ್ಪೇನಿದೆ ಎಂದು ಅಬ್ದುಲ್ ಮಜೀದ್ ಪ್ರಶ್ನಿಸಿದರು. ೨೦೧೪ರ ಬಿಜೆಪಿ ಪ್ರಣಾಳಿಕೆಯಲ್ಲಿ ಕಬಳಿಸಲ್ಪಟ್ಟ ವಕ್ಫ್ ಜಮೀನನ್ನು ಬಿಡಿಸಿಕೊಡುವುದಾಗಿ ಬಿಜೆಪಿ ತಿಳಿಸಿತ್ತು. ಇದನ್ನು ಬಿಜೆಪಿ ಪ್ರಮುಖರಾದ ಸಿ.ಟಿ. ರವಿ, ಯತ್ನಾಳ್, ಪ್ರತಾಪ್ ಸಿಂಹ, ಸೂಲಿಬೆಲೆ ಇವರುಗಳು ಓದಿಲ್ಲವೆ ಎಂದು ಪ್ರಶ್ನಿಸಿದ ಅವರು, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಸಭೆಯೊಂದರಲ್ಲಿ ವಕ್ಫ್ ಆಸ್ತಿಗಳು ಒತ್ತುವರಿಯಾಗಿರುವುದನ್ನು ತೆರವುಗೊಳಿಸಲಿವೆಂದರೆ ಒತ್ತುವರಿದಾರರಿಗಿಂತ ದೊಡ್ಡ ಅಪರಾಧಿಗಳು ನೀವು ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು. ಅವನ್ನೆಲ್ಲ ಮರೆತು ಇದೀಗ ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಅಬ್ದುಲ್ ಮಜೀದ್ ದೂರಿದರು.
ಸರ್ಕಾರ ರೈತರಿಗೆ ಸಹಾಯ ಮಾಡವುದಾದರೆ ವಕ್ಫ್ ಭೂಮಿಯಲ್ಲಿ ಉಳುಮೆ ಮಾಡಿದ ರೈತರಿಗೆ ಪರ್ಯಾಯ ಜಾಗವನ್ನು ಒದಗಿಸಲಿ ಅಥವಾ ವಕ್ಫ್ ಮಂಡಳಿಗೆ ಪರ್ಯಾಯ ಜಾಗವನ್ನು ನೀಡಲಿ ಎಂದು ಸಲಹೆಯಿತ್ತರು.
ನಿಷ್ಕಿçಯ ಸರ್ಕಾರ
ವಕ್ಫ್ ವಿಚಾರದಲ್ಲಿ ಮುಖ್ಯಮಂತ್ರಿಗಳು ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ನೋಟೀಸ್ ನೀಡುವಂತೆ ತಾವೇ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಬಳಿಕ ನೋಟೀಸ್ ಹಿಂಪಡೆಯುವುದಾಗಿ ಹೇಳಿದ್ದಾರೆ. ಬಿಜೆಪಿಗೆ ಹೆದರಿ ಸಿದ್ದರಾಮಯ್ಯ ಅವರು ತಮ್ಮ ಹೇಳಿಕೆಯನ್ನು ಬದಲಿಸಿದ್ದಾರೆ. ಹಲವು ವಿಚಾರಗಳಲ್ಲಿ ಸಿಎಂ ಈ ರೀತಿ ‘ಯೂಟರ್ನ್’ ಹೊಡೆದಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರು ಕೂಡ ದ್ವೇಷ ಭಾಷಣ, ಹಲ್ಲೆ ಪ್ರಕರಣಗಳ ಬಗ್ಗೆ ಚಕಾರವೆತ್ತುತ್ತಿಲ್ಲ. ಆದ್ದರಿಂದ ಪರಮೇಶ್ವರ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕೆಂದು ಅಬ್ದುಲ್ ಮಜೀದ್ ಆಗ್ರಹಿಸಿದರು.
ಗೋಷ್ಠಿಯಲ್ಲಿ ಎಸ್ಡಿಪಿಐನ ಜಿಲ್ಲಾಧ್ಯಕ್ಷ ಅಬ್ದುಲ್ ಅಡ್ಕಾರ್, ವೀರಾಜಪೇಟೆ ಕ್ಷೇತ್ರದ ಅಧ್ಯಕ್ಷ ಷರೀಫ್, ವೀರಾಜಪೇಟೆ, ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಭಾಷಾ ಕುಶಾಲನಗರ, ಜಿಲ್ಲಾ ಸಮಿತಿ ಸದಸ್ಯರಾದ ಅಮಿನ್ ಮೊಯ್ಸಿನ್, ಮನ್ಸೂರ್ ಉಪಸ್ಥಿತರಿದ್ದರು.