ಮಡಿಕೇರಿ, ನ. ೭: ಕುಶಾಲನಗರದಲ್ಲಿನ ಕೊಡವ ಮಹಿಳೆಯೊಬ್ಬರಿಗೆ, ಅವರ ಜಾಗಕ್ಕೆ ತೆರಳಿದ ಕೆಲವರು ಇದು ವಕ್ಫ್ ಆಸ್ತಿ ಎಂದು ಹೇಳಿ ಬೆದರಿಕೆಯೊಡ್ಡಿರುವ ಪ್ರಕರಣ ಜಿಲ್ಲೆಯಲ್ಲಿ ಸೂಕ್ಷö್ಮ ವಿಚಾರವಾಗಿದೆ ಎಂದು ಕೊಡವ ಸಮಾಜಗಳ ಒಕ್ಕೂಟ ಹೇಳಿದ್ದು, ಘಟನೆಯನ್ನು ಖಂಡಿಸಿದೆ. ಬೆದರಿಕೆಯೊಡ್ಡಿರುವ ಈ ಆರೋಪಿಗಳನ್ನು ಪೊಲೀಸ್ ಇಲಾಖೆ ತಕ್ಷಣ ಬಂಧಿಸುವAತೆ ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದ್ದಾರೆ. ಈ ಬಗ್ಗೆ ಹೇಳಿಕೆ ನೀಡಿರುವ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹಾಗೂ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ ಅವರುಗಳು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಕೊಡಗು ಸಾಮರಸ್ಯದಿಂದ ಕೂಡಿದ್ದು, ಇದು ಶಾಂತಿ ಕದಡುವಂತಹ ಸೂಕ್ಷö್ಮ ವಿಚಾರವಾಗಿದೆ. ಇಂತಹ ದಬ್ಬಾಳಿಕೆಯನ್ನು ಒಕ್ಕೂಟ ವಿರೋಧಿಸಲಿದ್ದು, ಜಿಲ್ಲೆಯ ಮೂಲ ನಿವಾಸಿಗಳ ಪರ ನಿಲ್ಲಲಿದೆ ಎಂದು ತಿಳಿಸಿದ್ದಾರೆ. ತ್ವರಿತವಾಗಿ ಆರೋಪಿಗಳನ್ನು ಬಂಧಿಸದಿದ್ದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದೂ ಅವರು ಎಚ್ಚರಿಸಿದ್ದಾರೆ. ಕುಶಾಲನಗರ ಸನಿಹದ ಮುಳ್ಳುಸೋಗೆಯ ನಿವಾಸಿ ಪುಚ್ಚಿಮಾಡ ರೇಣುಕಾ ಉತ್ತಪ್ಪ ಅವರ ಜಾಗಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ಕೆಲವರು ಆಸ್ತಿ ವಕ್ಫ್ಗೆ ಸೇರಿದ್ದು ತೆರವು ಮಾಡುವಂತೆ ಬೆದರಿಸಿದ್ದಾಗಿ ರೇಣುಕಾ ಕೊಡವ ಸಮಾಜ ಒಕ್ಕೂಟಕ್ಕೆ ರಕ್ಷಣೆಕೋರಿ ಮನವಿ ಮಾಡಿದ್ದು, ರಾಜ್ಯದ ಮುಖ್ಯಮಂತ್ರಿ ಹಾಗೂ ಪೊಲೀಸ್ ಇಲಾಖೆಗೂ ದೂರು ನೀಡಿದ್ದರು. ಪ್ರಕರಣದ ಬಗ್ಗೆ ಜಿಲ್ಲೆಯ ವಿವಿಧ ಸಮಾಜಗಳು ಹಾಗೂ ಮೂಲನಿವಾಸಿಗಳ ಜೊತೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿಷ್ಣು ಕಾರ್ಯಪ್ಪ ಅವರು ತಿಳಿಸಿದ್ದಾರೆ.