ಮಡಿಕೇರಿ, ನ. ೭: ಪೊನ್ನಂಪೇಟೆ ಸಂತ ಅಂತೋಣಿ ಪ್ರೌಢಶಾಲೆಯ ಹಾಕಿ ತಂಡವು ರಾಜ್ಯಮಟ್ಟದ ಪಂದ್ಯಾಟದಲ್ಲಿ ವಿಜೇತರಾಗಿ ರಾಷ್ಟçಮಟ್ಟಕ್ಕೆ ಆಯ್ಕೆಯಾದ ಹಿನ್ನೆಲೆ ವಿಜಯೋತ್ಸವ ಮೆರವಣಿಗೆ ನಡೆಯಿತು.

ಶಾಲೆಯಿಂದ ಹೊರಟ ಮೆರವಣಿಗೆ ಪೊನ್ನಂಪೇಟೆ ಮುಖ್ಯ ರಸ್ತೆಯ ಮೂಲಕ ತೆರಳಿ ಪೊನ್ನಂಪೇಟೆ ಬಸವೇಶ್ವರ ವೃತ್ತದವರೆಗೆ ನಡೆಯಿತು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ರಜನಿ, ಪ್ರಾಂಶುಪಾಲರಾದ ಶಂಭು ಕಾರ್ಯಪ್ಪ, ಶಿಕ್ಷಕರಾದ ಪವನ್ ಕುಮಾರ್, ರಶ್ಮಿ ದೇವಯ್ಯ, ಹರ್ಷಿತಾ, ಪವನ್ ಅಯ್ಯಪ್ಪ ದೈಹಿಕ ಶಿಕ್ಷಣ ಶಿಕ್ಷಕರಾದ ವಿನೋದ್ ಭಾಗವಹಿಸಿದ್ದರು.