ಶ್ರೀಮಂಗಲ, ನ. ೭: ಶ್ರೀಮಂಗಲ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹುಲಿ ದಾಳಿಯಿಂದ ಏಳು ಜಾನುವಾರು ಸಾವು ಪ್ರಕರಣಕ್ಕೆ ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಮೇರಿಯಂಡ ಸಂಕೇತ್ ಪೂವಯ್ಯ ಅವರು ಪರಿಹಾರ ವಿತರಿಸಿದರು.

ಇಲ್ಲಿನ ನೀರಿಕ್ಷಣಾ ಮಂದಿರದಲ್ಲಿ ಜಾನುವರುಗಳ ಮಾಲೀಕರಿಗೆ ತಲಾ. ರೂ. ೩೦ ಸಾವಿರದಂತೆ ಒಟ್ಟು ೨.೧೦ ಲಕ್ಷದ ಪರಿಹಾರ ವಿತರಿಸಿದರು.

ಈ ಸಂದರ್ಭ ಮಾತನಾಡಿದ ಅವರು ಶ್ರೀಮಂಗಲ ಭಾಗದಲ್ಲಿ ಹುಲಿಯಿಂದ ಏಳು ಕಡೆ ದಾಳಿಯಾಗಿ ಜಾನುವಾರುಗಳನ್ನು ರೈತರು ಕಳೆದುಕೊಂಡಿದ್ದರು. ಇದರಲ್ಲಿ ನಾಲ್ಕು ಪ್ರಕರಣದಲ್ಲಿ ನೇರವಾಗಿ ಅವರ ಖಾತೆಗೆ ಪರಿಹಾರ ವರ್ಗಾವಣೆ ಮಾಡಲಾಗಿದೆ. ಉಳಿದಂತೆ ಮೂರು ಪ್ರಕರಣದ ಪರಿಹಾರವನ್ನು ಅರಣ್ಯ ಇಲಾಖೆ ಕೂರ್ಗ್ ಫೌಂಡೇಶನ್ ಅನುದಾನದಲ್ಲಿ ಚೆಕ್ ಮೂಲಕ ನೀಡಲಾಗಿದೆ.

ವೀರಾಜಪೇಟೆ ಕ್ಷೇತ್ರ ಶಾಸಕರಾದ ಎ.ಎಸ್. ಪೊನ್ನಣ್ಣ ಅವರು ವನ್ಯಪ್ರಾಣಿ- ಮಾನವ ಸಂಘರ್ಷದಿAದ ಬೆಳೆ ಹಾನಿ, ಜಾನುವಾರುಗಳ ಸಾವು, ಮಾನವ ಪ್ರಾಣ ಹಾನಿಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

ಈಗಾಗಲೇ ಶ್ರೀಮಂಗಲ ಮತ್ತು ಬಾಳೆಲೆ ವ್ಯಾಪ್ತಿಯಲ್ಲಿ ಕಳೆದ ಒಂದುವರೆ ತಿಂಗಳುಗಳಿAದ ಪ್ರತ್ಯೇಕವಾದ ಪ್ರಕರಣದಲ್ಲಿ ಹುಲಿಯಿಂದ ಜಾನುವರುಗಳ ಮೇಲೆ ದಾಳಿ ಮತ್ತು ಹುಲಿ ಸಂಚಾರದ ಹಿನೆÀ್ನಲೆಯಲ್ಲಿ ನಡೆಸಿದ ಒಂದು ವಾರದ ಕಾರ್ಯಾಚರಣೆಯಲ್ಲಿ ಶ್ರೀಮಂಗಲ ವಿಭಾಗದಲ್ಲಿ ಹುಲಿಯು ಅರಣ್ಯಕ್ಕೆ ಹಿಂತಿರುಗಿರುವುದು ಖಚಿತಗೊಂಡಿದೆ. ಹಾಗೆಯೇ ಬಾಳೆಲೆ ವ್ಯಾಪ್ತಿಯ ಸುಳುಗೋಡು- ರಾಜಪುರ ಗ್ರಾಮಗಳಲ್ಲಿ ಹುಲಿ ಸಂಚಾರ ಕಂಡುಬAದ ಹಿನ್ನೆಲೆ ಹಾಗೂ ಜಾನುವಾರುಗಳ ಮೇಲೆ ದಾಳಿ ಹಿನ್ನೆಲೆ ಅಲ್ಲಿಯೂ ಸಹ ಹುಲಿಯನ್ನು ಕಾಡಿಗೆ ಆಟ್ಟುವ ಮೂಲಕ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಸಂಕೇತ್ ಪೂವಯ್ಯ ವಿವರಿಸಿದರು.

ತಲಾ ರೂ. ೩೦ ಸಾವಿರದಂತೆ ಶ್ರೀಮಂಗಲ ಗ್ರಾಮದ ಬಿ.ಎಂ. ಗಣಪತಿ, ನೆಮ್ಮಲೆ ಗ್ರಾಮದ ಎಂ.ಜಿ. ಕಿಶೋರ್, ತೆರಾಲು ಗ್ರಾಮದ ಬಿ.ಸಿ. ಬೋಪಯ್ಯ ಅವರಿಗೆ ಚೆಕ್ ಮೂಲಕ ಪರಿಹಾರವನ್ನು ಸಂಕೇತ್ ಪೂವಯ್ಯ ನೀಡಿದರು.

ಬೀರುಗ ಗ್ರಾಮದ ರುಕ್ಮಿಣಿ, ಬಿ. ಟಿ. ಮೋಹನ್, ಕುಟ್ಟ ಗ್ರಾಮದ ಪ್ರವರ್ಧನ್, ತೆರಾಲು ಗ್ರಾಮದ ಬಿ. ಎಸ್. ಉತ್ತಪ್ಪ ಅವರ ಖಾತೆಗೆ ಪರಿಹಾರ ವರ್ಗಾವಣೆಯಾಗಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್, ತಾ. ಪಂ. ಮಾಜಿ ಸದಸ್ಯ ಪಲ್ವಿನ್ ಪೂಣಚ್ಚ, ಶ್ರೀಮಂಗಲ ಗ್ರಾ. ಪಂ. ಸದಸ್ಯ ಅಜ್ಜಮಾಡ ಜಯ, ಕೊಡಗು ಬೆಳೆಗಾರರ ಒಕ್ಕೂಟದ ಮಾಣೀರ ವಿಜಯ್ ನಂಜಪ್ಪ, ಪ್ರಮುಖರಾದ ತೀತಿರ ಪ್ರಭು ಸುಬ್ಬಯ್ಯ, ಅಪ್ಪಚ್ಚಂಗಡ ಮೋಟಯ್ಯ, ಕಾಳಿಮಾಡ ಪ್ರಶಾಂತ್, ಚೊಟ್ಟೆಯಾಂಡಮಾಡ ವಿಶು, ಮಾಜಿ ವನ್ಯಜೀವಿ ವಾರ್ಡನ್ ಕುಂಞAಗಡ ಬೋಸ್ ಮಾದಪ್ಪ, ಪರಮಲೆ ಗಣೇಶ್, ಅಜ್ಜಮಾಡ ಪ್ರಮೋದ್, ಶ್ರೀಮಂಗಲ ವನ್ಯ ಜೀವಿ ವಿಭಾಗದ ಆರ್. ಎಫ್. ಓ. ಅರವಿಂದ್, ಡಿ. ಆರ್. ಎಫ್. ಓ. ಗಳಾದ ನವೀನ್, ಶ್ರೀಶೈಲಾ ಮಾಲಿಗೌಡ್ರು, ಮತ್ತಿತರರು ಹಾಜರಿದ್ದರು.