ಸೋಮವಾರಪೇಟೆ, ನ. ೭: ಸಮೀಪದ ಗೌಡಳ್ಳಿ ಗ್ರಾಮದಲ್ಲಿ ೫೧೨ನೇ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ರೂ. ೮೫ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ.
ಕೃಷಿ ಪ್ರಧಾನ ಪ್ರದೇಶವನ್ನು ಹೊಂದಿರುವ ಗೌಡಳ್ಳಿ ಭಾಗದಲ್ಲಿ ಸಹಕಾರ ಸಂಘವು ರೂಪುಗೊಂಡು ಸಾವಿರಾರು ರೈತರಿಗೆ ಸೇವೆ ಒದಗಿಸುತ್ತಿದ್ದು, ಇದೀಗ ರೂ. ೮೫ ಲಕ್ಷ ವೆಚ್ಚದಲ್ಲಿ ನೂತನವಾಗಿ ಕಚೇರಿ ಕಟ್ಟಡ ನಿರ್ಮಿಸಲಾಗಿದೆ.
ಡಿಸಿಸಿ ಬ್ಯಾಂಕಿನಿAದ ಎಂಎಸ್ಸಿ ಸಾಲದ ಮೂಲಕ ಪಡೆದಿರುವ ಹಣದಲ್ಲಿ ರೈತರ ಉಪಯೋಗಕ್ಕಾಗಿ ಬೃಹತ್ ಕಟ್ಟಡ ನಿರ್ಮಿಸಲಾಗಿದೆ. ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸಂಪೂರ್ಣ ಗಣಕೀಕೃತಗೊಂಡಿದ್ದು, ಈವರೆಗೆ ಹಳೆಯ ಕಟ್ಟಡದಲ್ಲಿಯೇ ಕಾರ್ಯಚಟುವಟಿಕೆ ನಡೆಸಿಕೊಂಡು ಬಂದಿದೆ.
ಸAಘದ ಸದಸ್ಯರು ಹೆಚ್ಚಾದಂತೆ ಹೆಚ್ಚಿನ ಸೇವೆಗಳನ್ನು ಒದಗಿಸಲಾಗುತ್ತಿದೆ. ಇದರೊಂದಿಗೆ ವಿನೂತನ ಯೋಜನೆಗಳನ್ನು ಅಳವಡಿಸಲಾಗಿದ್ದು, ಗ್ರಾಹಕರ ಅನುಕೂಲಕ್ಕಾಗಿ ವಿಶಾಲವಾದ ಕಚೇರಿಯನ್ನು ನಿರ್ಮಿಸಲಾಗಿದೆ. ಮುಂದುವರೆದ ಕಾಮಗಾರಿಗಳಿಗೆ ಇನ್ನೂ ೪೦ ಲಕ್ಷ ಅನುದಾನದ ಅವಶ್ಯಕತೆಯಿದ್ದು, ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ನಿರ್ಮಾಣಕಾರ್ಯ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಎಲ್ಲಾ ಸದಸ್ಯರು ತಮ್ಮ ಲಾಭಾಂಶದ ಒಂದಷ್ಟು ಭಾಗವನ್ನು ಸಂಘದ ಕಟ್ಟಡ ನಿರ್ಮಾಣಕ್ಕೆ ನೀಡಿದ್ದರು. ರೈತರ ಶ್ರೇಯೊಭಿವೃದ್ಧಿಗೆ ಸಂಘ ಕೆಲಸ ಮಾಡುತ್ತಿದೆ. ಸದಸ್ಯರಿಗೆ ಸಂಘದಿAದ ಸಾಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಸದಸ್ಯರು ಕೂಡ ನಿಗದಿತ ಸಮಯದಲ್ಲಿ ಸಾಲವನ್ನು ಮರುಪಾವತಿ ಮಾಡುತ್ತಿರುವುದರಿಂದ ಉತ್ತಮ ಲಾಭಾಂಶವೂ ಸಿಗುತ್ತಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ನೂತನ ಕಟ್ಟಡದಲ್ಲಿ ಹೋಮ ಸೇರಿದಂತೆ ವಿವಿಧ ಪೂಜೆಗಳನ್ನು ನಡೆಸುವ ಮೂಲಕ ಶಾಸ್ತೊçÃಕ್ತವಾಗಿ ಚಾಲನೆ ನೀಡಲಾಗಿದ್ದು, ಶೀಘ್ರದಲ್ಲೇ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಒಳಗೊಂಡAತೆ ಕಟ್ಟಡದ ಅಧಿಕೃತ ಉದ್ಘಾಟನಾ ಸಮಾರಂಭ ಆಯೋಜಿಸಲಾಗುವುದು ಎಂದು ಹೆಚ್.ಆರ್. ಸುರೇಶ್ ತಿಳಿಸಿದ್ದಾರೆ.
ಕಚೇರಿಯಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಉಪಾಧ್ಯಕ್ಷರಾದ ಮಮತ ಅಶೋಕ್, ಆಡಳಿತ ಮಂಡಳಿ ಸದಸ್ಯರಾದ ಎಸ್.ಬಿ.ಭರತ್ ಕುಮಾರ್, ಎನ್.ಎಸ್.ಪರಮೇಶ್, ಜಿ.ಪಿ.ಸುನೀಲ್, ವಿ.ಎನ್.ನಾಗರಾಜು, ಪುಷ್ಪ ಸುರೇಶ್, ಸುಮಿತ್ರ ಮಹೇಶ್, ವಾಣಿ ಶಿವಕುಮಾರ್, ಕೆ.ಜಿ.ದಿನೇಶ್, ಸಿ.ಇ.ವೆಂಕಟೇಶ್, ಜಿ.ಈ.ಸುರೇಶ್, ಸಿಇಒ ಎಂ.ಎಚ್.ಕಿರಣ್ ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.