ಸೋಮವಾರಪೇಟೆ, ನ. ೭: ಇಲ್ಲಿನ ಕೊಡವ ಸಮಾಜಕ್ಕೆ ೫೦ ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಸುವರ್ಣ ಮಹೋತ್ಸವ ಆಚರಿಸಲು ತೀರ್ಮಾನಿಸಲಾಗಿದ್ದು, ಇದರ ಅಂಗವಾಗಿ ಸ್ಮರಣ ಸಂಚಿಕೆಯನ್ನು ಹೊರತರಲು ನಿರ್ಧರಿಸಲಾಗಿದೆ ಎಂದು ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷರಾದ ತೇಲಪಂಡ ಕವನ್ ಕಾರ್ಯಪ್ಪ ತಿಳಿಸಿದ್ದಾರೆ.

ಸ್ಮರಣ ಸಂಚಿಕೆಗೆ ಕಥೆ, ಕವನ, ಲೇಖನ, ಚುಟುಕು ಹಾಗೂ ವಿದ್ಯಾರ್ಥಿಗಳಿಂದ ಚಿತ್ರಕಲೆಯನ್ನು ಆಹ್ವಾನಿಸಲಾಗಿದೆ. ಆಸಕ್ತರು ತಮ್ಮ ಬರಹಗಳನ್ನು ಕೊಡವ ಭಾಷೆಯಲ್ಲಿ ಅಂದವಾದ ಕೈ ಬರಹದಲ್ಲಿ ಅಥವಾ ಟೈಪ್ ಮಾಡಿ ತಾ. ೨೦ ರೊಳಗಾಗಿ ಅಧ್ಯಕ್ಷರು, ಸ್ಮರಣ ಸಂಚಿಕೆ ಸಮಿತಿ, ಕೊಡವ ಸಮಾಜ,ಸೋಮವಾರಪೇಟೆ ಕೊಡಗು -೫೭೧೨೩೬ ಈ ವಿಳಾಸಕ್ಕೆ ಕಳುಹಿಸಬೇಕು.

ಕಥೆ ೩ ಪುಟ ಮೀರಬಾರದು. ಕವನ ೨೫೦ ಪದಗಳು ಮೀರಬಾರದು. ಚಿತ್ರಕಲೆಯಲ್ಲಿ ಭಾಗವಹಿಸುವವರು ೧೫ ವರ್ಷದ ವಯೋಮಾನದ ಒಳಗಿರಬೇಕು. ಕೊಡಗು ಮತ್ತು ಕೊಡವ ಸಂಸ್ಕೃತಿಗೆ ಸಂಬAಧಿಸಿದ ಚಿತ್ರವನ್ನು ಮಾತ್ರ ಬಿಡಿಸಬೇಕು. ಆಯ್ಕೆಯಾದ ಅತ್ಯುತ್ತಮ ಬರಹ ಮತ್ತು ಚಿತ್ರಕಲೆಗೆ ಬಹುಮಾನ ಮತ್ತು ಮಾನ್ಯತಾ ಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ ೯೪೪೮೩೨೫೯೪೫ ರಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಕವನ್ ಕಾರ್ಯಪ್ಪ ತಿಳಿಸಿದ್ದಾರೆ.