ಮಡಿಕೇರಿ, ನ. ೭: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿನೂತನ ಕಾರ್ಯಕ್ರಮ ‘ನಾಡೋರ್ಮೆ’ಯು ಅರೆಕಾಡು-ಹೊಸ್ಕೇರಿಯಲ್ಲಿ ತಾ. ೧೪ ರಂದು ಬೆಳಿಗ್ಗೆ ೯ ಗಂಟೆಗೆ ಆರಂಭವಾಗಲಿದೆ. ನಾಡೊರ್ಮೆಗೆ ಅರೆಕಾಡಿನ ರಿಯಾವರ್ ರೆಸಾರ್ಟ್ ಸಿದ್ಧಗೊಳ್ಳುತ್ತಿದೆ.

ಅಂದು ಬೆಳಿಗ್ಗೆ ವೀರಾಜಪೇಟೆ ಶಾಸಕ ಹಾಗೂ ಮುಖ್ಯ ಮಂತ್ರಿಗಳ ಕಾನೂನು ಸಲಹೆಗಾರರಾಗಿರುವ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅವರಿಂದ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಕಟ್ಟಡಕ್ಕೆ ಅರೆಕಾಡುವಿನಲ್ಲಿ ಶಂಕು ಸ್ಥಾಪನೆ ನೆರವೇರುವುದು. ಈ ವೇಳೆ ಮಡಿಕೇರಿ ಶಾಸಕ ಡಾ. ಮಂತರ್ ಗೌಡ, ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಸರ್ಕಾರಿ ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿಯ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಹಾಗೂ ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಅಧ್ಯಕ್ಷ ಕುಕ್ಕೆರ ಜಯಾ ಚಿಣ್ಣಪ್ಪ ಹಾಗೂ ಆಡಳಿತ ಮಂಡಳಿ ಸದಸ್ಯರು ಹಾಜರಿರುವರು. ಅಕಾಡೆಮಿಯ ತಕ್ಕರು ತಪ್ಪಡಕ ಕಟ್ಟುವದರೊಂದಿಗೆ ಮುಖ್ಯ ಅತಿಥಿಗಳನ್ನು ಒಡ್ಡೋಲಗ, ತಳಿಯತಕ್ಕಿ ಬೊಳ್‌ಚ, ದುಡಿಕೊಟ್ಟ್ ಪಾಟ್‌ನ ಜೊತೆ ಮೆರವಣಿಗೆಯೊಂದಿಗೆ ಸಭಾ ಸ್ಥಳಕ್ಕೆ ಕರೆತರಲಾಗುವುದು. ಈ ಕೊಡವ ಸಾಂಸ್ಕೃತಿಕ ಮೆರವಣಿಗೆಯನ್ನು ಗುಂಡು ಹಾರಿಸುವುದರ ಮೂಲಕ ಪ್ರಾರಂಭಿಸ ಲಾಗುವುದು. ಸಭಾ ಕಾರ್ಯಕ್ರಮವನ್ನು ಶಾಸಕ ಡಾ. ಮಂತರ್ ಗೌಡ ಅವರು ಉದ್ಘಾಟಿಸಲಿರುವರು. ಮೈಸೂರಿನ ‘ಪಡಿಪು ಕಯ್ಯಾಲೆ’ ತಂಡದವರಿAದ ಸ್ವಾಗತ ನೃತ್ಯ, ಉಮ್ಮತ್ತಾಟ್, ಕೊಡವ ನೃತ್ಯ ಉರ್‌ಟಿಕೊಟ್ಟ್ ಆಟ್, ಬಾಳೋಪಾಟ್, ಬೊಳಕಾಟ್, ಕತ್ತಿಯಾಟ್, ಚೋದ್ಯ-ಚೋದ್ ಇರುವುದು. ಅಕಾಡೆಮಿಯ ತ್ರೆöÊಮಾಸಿಕ ಸಂಚಿಕೆ ‘ಕೊಡವೋಲೆ’ಯನ್ನು ಬಿಡುಗಡೆ ಮಾಡಲಾಗುವುದು. ಕೊಡವ ಸಂಸ್ಕೃತಿ, ಸಾಹಿತ್ಯ ಹಾಗೂ ಸಮಾಜಕ್ಕೆ ಕಾಣಿಕೆ ನೀಡಿರುವ ಸ್ಥಳೀಯ ಗಣ್ಯರಿಗೆ ಸನ್ಮಾನ ಮಾಡಲಾಗುವುದು. ಅರೆಕಾಡ್-ಹೊಸ್ಕೇರಿ ಗ್ರಾಮದ “ಪೊಮ್ಮಕ್ಕಡ ಒಕ್ಕೂಟ”ದವರ ಕೊಡವ ಕಾರ್ಯಕ್ರಮಗಳಿಗೆ ಜರುಗಲಿದೆ.

ಈ ವೇಳೆ “ಕೊಡವಡ ಮಾಲ್-ಮಟ ಚಿಂಗಾರ” ವಿಷಯವಾಗಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯರಿಂದ ವಿಚಾರ ಮಂಡನೆ ನಡೆಯಲಿದೆ. ‘ಕೊಡವ ವೆಲ್ಫೇರ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್” ಉಪಾಧ್ಯಕ್ಷರಾದ ಬಲ್ಲಚಂಡ ವಿಠಲ್ ಕಾವೇರಪ್ಪನವರು “ಅರೆಕಾಡು-ಹೊಸ್ಕೇರಿ ಕೋವುಲ್ ಕೊಡವಡ ನೇರ್ ನೆಲೆ’ ವಿಷಯವಾಗಿ ವಿಚಾರ ಮಂಡಿಸಲಿರುವರು.

‘ನಾಡೊರ್ಮೆ’ಯ ವೈಭವಕ್ಕೆ ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು, ಅತಿಥಿಗಣ್ಯರು ಸಾಕ್ಷಿಯಾಗಲಿರುವುದು ಸಂತಸ ತಂದಿದೆ ಎಂದು ಅಸೋಸಿಯೇಷನ್ ಅಧ್ಯಕ್ಷರಾದ ಕುಕ್ಕೆರ ಜಯ ಚಿಣ್ಣಪ್ಪ, ರಿಯಾವರ್ ರೆಸಾರ್ಟ್ ಮಾಲಿಕ ಮುಕ್ಕಾಟಿರ ವಿನಯ್, ಶಿಲ್ಪ ತಿಳಿಸಿರುತ್ತಾರೆ.