ನಾಪೋಕ್ಲು, ನ. ೭: ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಒತ್ತಾಯಿಸಿ ನಿವೇಶನ ರಹಿತ ಕುಟುಂಬಸ್ಥರು ಕುಯ್ಯಂಗೇರಿಯಲ್ಲಿ ಆರು ದಿನಗಳಿಂದ ಟೆಂಟ್ನಲ್ಲಿ ವಾಸ ಮಾಡುತ್ತಾ, ಹಕ್ಕುಪತ್ರ ದೊರಕದೆ ಕದಲುವುದಿಲ್ಲ; ಶಾಸಕರು ಸಮಸ್ಯೆಯನ್ನು ಪರಿಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹೊದ್ದೂರು ಪಂಚಾಯಿತಿ ಹಾಗೂ ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕುಯ್ಯಂಗೇರಿಯ ಸರ್ಕಾರಿ ಜಾಗದಲ್ಲಿನ ಅಕ್ರಮ ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತರಿಗೆ ನಿವೇಶನ ಕೊಡಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಜಿಲ್ಲಾ ಕಾರ್ಯದರ್ಶಿ, ಹೊದ್ದೂರು ಪಂಚಾಯಿತಿ ಸದಸ್ಯ ಮೊಣ್ಣಪ್ಪ ಗುರುವಾರ ನಿವೇಶನ ರಹಿತರನ್ನು ಉದ್ದೇಶಿಸಿ ಮಾತನಾಡಿ ಒತ್ತಾಯಿಸಿದರು. ಈ ವಿಷಯಕ್ಕೆ ಸಂಬAಧಪಟ್ಟAತೆ ಕಂದಾಯ ಪರಿವೀಕ್ಷಕ ಪ್ರಸಾದ್, ಗ್ರಾಮ ಲೆಕ್ಕಿಗ ಸಂತೋಷ್ ಪಾಟೀಲ ಸಿಬ್ಬಂದಿಗಳು ಗುರುವಾರ ಸ್ಥಳಕ್ಕೆ ತೆರಳಿ ಸರ್ವೆ ಕಾರ್ಯ ನಡೆಸಿದರು. ಈ ಸಂದರ್ಭ ಹೊದ್ದೂರು ಪಂಚಾಯಿತಿ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಕುಸುಮಾವತಿ, ಹೊದ್ದೂರು ಪಂಚಾಯಿತಿ ಮತ್ತು ಕಾಂತೂರು ಮೂರ್ನಾಡು ಗ್ರಾಮ ಪಂಚಾಯಿತಿ ಗಳಿಗೆ ಒಳಪಟ್ಟ ನಿವೇಶನ ರಹಿತ ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.
-ದುಗ್ಗಳ ಸದಾನಂದ