ಶನಿವಾರಸಂತೆ, ನ.೮: ಗಡಿಭಾಗ ಕೆಂಚಮ್ಮನ ಹೊಸಕೋಟೆ ಹೋಬಳಿ ವ್ಯಾಪ್ತಿಯ ಹರಿಹಳ್ಳಿ ಗ್ರಾಮದಲ್ಲಿ ಹಾಸನಾಂಬ ದೇವಿ ಸಹೋದರಿ ರಕ್ತ ಬೀಜಾಸುರನನ್ನು ಸಂಹರಿಸಿದ ಶ್ರೀ ಕೆಂಚಾAಬ ದೇವಿಯ ಚಿಕ್ಕಜಾತ್ರಾ ಮಹೋತ್ಸವ ಶ್ರೀ ಕೆಂಚಾAಬ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ವತಿಯಿಂದ ವಿಜೃಂಭಣೆಯಿAದ ಜರುಗಿತು.
ಮಂಗಳವಾರ ಸಂಜೆ ಹರಿಹಳ್ಳಿ ಗ್ರಾಮದಲ್ಲಿರುವ ಮೂಲ ದೇವಿಗೆ ಸಪ್ತ ಮಾತೃಕಾ ಅಲಂಕಾರ ಮಾಡಿ ಮಹಾ ಮಂಗಳಾರತಿ ನೆರವೇರಿಸಿದ ನಂತರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಬಳಿಕ ದೇವಾಲಯ ಆವರಣದಲ್ಲಿ ಉಧ್ವಾರ್ಚನೆ ಸುಗ್ಗಿ ಕುಣಿತ ನಡೆಯಿತು.
ಬುಧವಾರ ಬೆಳಿಗ್ಗೆ ಜಾತ್ರಾ ಉತ್ಸವಾದಿಗಳು ಆರಂಭವಾಗಿ ಮೂಲ ದೇವಸ್ಥಾನದಿಂದ ಉತ್ಸವ ಮೂರ್ತಿಯೊಂದಿಗೆ ಬೆಳ್ಳಿ ಒಡೆವೆಗಳನ್ನು ವಾದ್ಯಗೋಷ್ಠಿಯೊಂದಿಗೆ ಜಾತ್ರಾ ಮೈದಾನದಲ್ಲಿರುವ ಶ್ರೀ ಕೆಂಚಾAಬ ದೇವಾಲಯಕ್ಕೆ ಮೆರವಣಿಗೆಯಲ್ಲಿ ತರಲಾಯಿತು. ಸುಮಾರು ೨ ಗಂಟೆ ನಡೆದ ಮೆರವಣಿಗೆಯಲ್ಲಿ ಪ್ರತಿ ಕುಟುಂಬದವರು ಉತ್ಸವ ಮೂರ್ತಿಗೆ ಆರತಿ ಎತ್ತಿ, ತೆಂಗಿನಕಾಯಿ ಈಡುಗಾಯಿ ಹಾಕಿದರು. ಮೆರವಣಿಗೆ ದೇವಸ್ಥಾನದ ಬಳಿಗೆ ಬಂದ ನಂತರ ಗರ್ಭಗುಡಿಯಲ್ಲಿ ಹುತ್ತದ ರೂಪದಲ್ಲಿರುವ ಕೆಂಚಾAಬ ದೇವಿಗೆ ಮುಖವಾಡವಿಟ್ಟು ಒಡವೆಗಳಿಂದ ಅಲಂಕರಿಸಿ ಪೂಜಿಸಲಾಯಿತು. ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿಸಿ, ದೇವಸ್ಥಾನದ ಸುತ್ತ ಬಲಿ ಅನ್ನ ಹಾಕಲಾಯಿತು.
ನಂತರ ಶ್ರೀವೀರಭದ್ರಸ್ವಾಮಿ ಉತ್ಸವ ಮೂರ್ತಿಯನ್ನು ಕೆಂಚಾAಬ ದೇವಿಯ ಬೆಳ್ಳಿ ಪಾದದೊಂದಿಗೆ ಮಂಗಳವಾದ್ಯದೊAದಿಗೆ ತಂದು ಮಧ್ಯಾಹ್ನ ೨.೩೦ ಕ್ಕೆ ದೇವಸ್ಥಾನ ಮುಂಭಾಗ ಕೆಂಡೋತ್ಸವ ನಡೆಸಲಾಯಿತು. ಆನಂತರ ಭಕ್ತರಿಗೆ ದೇವಿ ಪಾದ ಮುಟ್ಟಿ ನಮಸ್ಕರಿಸಲು ರಾತ್ರಿ ೧ ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿತ್ತು. ಪೂಜಾ ಕೈಂಕರ್ಯಗಳು ಪ್ರಧಾನ ಅರ್ಚಕ ರವಿ ಮತ್ತು ತಂಡದವರಿAದ ನಡೆದವು. ಜಾತ್ರಾ ಮಹೋತ್ಸವ ಹಾಗೂ ಪೂಜಾ ಕಾರ್ಯಕ್ರಮದಲ್ಲಿ ಅಧಿಕಾರಿಗಳು, ರಾಜಕೀಯ ಮುಖಂಡರು, ದೇವಸ್ಥಾನ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಜರಿದ್ದರು.