ವೀರಾಜಪೇಟೆ, ನ. ೮ : ಕೇರಳದಿಂದ ಅಸುರಕ್ಷಿತ ಆಹಾರ ಪದಾರ್ಥ ಸಾಗಾಟ ಮಾಡುತ್ತಿರುವ ಆರೋಪದ ಹಿನ್ನೆಲೆ ವೀರಾಜಪೇಟೆ, ಮಾಕುಟ್ಟ ಚೆಕ್ ಪೋಸ್ಟ್ ನಲ್ಲಿ ಸಮಗ್ರ ಪರಿಶೀಲ ನೆಯನ್ನು ಅಧಿಕಾರಿ ಗಳು ನಡೆಸಿದರು.

ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿ ಕಾರದ ಅಧಿಕಾರಿ ಡಾ. ಅನಿಲ್ ಧವನ್ ನೇತೃತ್ವ ದಲ್ಲಿ ಪರಿಶೀಲನೆ ನಡೆಸಲಾಯಿತು.

ಕೇರಳದಿಂದ ಅಸುರಕ್ಷಿತ ಆಹಾರ ಪದಾರ್ಥ ಸರಬರಾಜಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ವೀರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅವರು ಇತ್ತಿಚೆಗೆ ಆಹಾರ ಸುರಕ್ಷತೆ ಗುಣಮಟ್ಟ ಪ್ರಾಧಿಕಾರದ ಅಧಿಕಾರಿ ಡಾ. ಅನಿಲ್ ಧವನ್ ನೇತೃತ್ವದಲ್ಲಿ ಸಭೆ ನಡೆಸಿ ಸೂಚನೆ ನೀಡಿದರು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ವೀರಾಜಪೇಟೆಯ ಕೆಲವು ಅಂಗಡಿಗಳಲ್ಲಿ ಇಲಾಖೆಯ ಅಧಿಕಾರಿಗಳು ೯೦ ಸ್ಯಾಂಪಲ್ ತಿಂಡಿಗಳನ್ನು ಎಫ್‌ಎಸ್‌ಲ್‌ಗೆ ಕಳುಹಿಸಿದ್ದರು. ಅದರಲ್ಲಿ ೩೧ ತಿಂಡಿಗಳು ಅಸುರಕ್ಷಿತ ಎಂದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಡಾ. ಅನಿಲ್ ಧವನ್ ಕಾರ್ಯಾಚರಣೆಯ ಬಗ್ಗೆ ಮಾಹಿತಿ ನೀಡಿದರು.