ಮಡಿಕೇರಿ, ನ. ೮: ಪತ್ರಕರ್ತ ಎಂಬ ವ್ಯಕ್ತಿ ಸಾಮಾಜಿಕ ಜವಾಬ್ದಾರಿ ಯ ಕೆಲಸ ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಸಪ್ನಾ ಎಂ.ಎಸ್. ಅಭಿಪ್ರಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಆಯೋಜಿತ ‘ಕೊಡಗು ಪತ್ರಿಕಾ ಭವನದ ೨೩ನೇ ವಾರ್ಷಿಕೋತ್ಸವ’ ವನ್ನು ಜ್ಯೋತಿ ಬೆಳಗಿ ಉದ್ಘಾಟಿಸಿ, ಮುಖ್ಯ ಭಾಷಣ ಮಾಡಿದ ಅವರು, ವಕೀಲ, ವೈದ್ಯ ಸಮೂಹದ ಸೇವೆಯಂತೆಯೆ ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವವರು ಸಾಮಾಜಿಕ ಬದ್ಧತೆ ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತಾರೆ.
ಬದಲಾಗುತ್ತಿರುವ ಸಾಮಾಜಿಕ ಪರಿಸ್ಥಿತಿಗಳೊಂದಿಗೆ ತಾಂತ್ರಿಕ ವಾಗಿಯೂ ಸಾಕಷ್ಟು ಬದಲಾವಣೆ ಗಳನ್ನು ನಾವಿಂದು ಕಾಣುತ್ತಿದ್ದೇವೆ. ಈ ಬದಲಾವಣೆಗಳಿಗೆ ಪತ್ರಿಕಾ ಕ್ಷೇತ್ರದಲ್ಲಿರುವವರು ಹೊಂದಿಕೊಳ್ಳುವ ಪ್ರಯತ್ನಗಳಿಗೆ ಮುಂದಾಗುವುದು ಅತ್ಯವಶ್ಯವೆಂದು ತಿಳಿಸಿದ ಅವರು, ತಾಂತ್ರಿಕ ಬದಲಾವಣೆಯ ಸೂಕ್ಷö್ಮ ಹಂತದಲ್ಲಿರುವ ಪತ್ರಿಕಾ ಕ್ಷೇತ್ರವಿಂದು ಕವಲು ದಾರಿಯಲ್ಲಿದೆಯೆಂದು ಅಭಿಪ್ರಾಯಿಸಿದರು.
ಪತ್ರಿಕಾ ಕ್ಷೇತ್ರದಲ್ಲಿರುವ ಪತ್ರಕರ್ತನಾದವನು ವಿವಿಧ ವಿಚಾರ ವಿಷಯಗಳತ್ತ ತಮ್ಮ ಅರಿವಿನ ಪರಿಧಿ ಯನ್ನು ಯಾವತ್ತೂ ವಿಸ್ತರಿಸಿಕೊಂಡಿರ ಬೇಕು ಮತ್ತು ತಮ್ಮ ಕ್ಷೇತ್ರಕ್ಕೆ ಪೂರಕವಾದ ವಿವಿಧ ತಾಂತ್ರಿಕ ಕೌಶಲ್ಯತೆಗಳನ್ನು ಮೈಗೂಡಿಸಿ ಕೊಳ್ಳಬೇಕು ಮತ್ತು ಅತ್ಯಂತ ಪ್ರಮುಖವಾಗಿ ನಾವು ಸಮಾಜವನ್ನು ನೋಡುವಂತೆಯೇ ಸಮಾಜವು ನಮ್ಮನ್ನು ಸೂಕ್ಷö್ಮವಾಗಿ ಗಮನಿಸುತ್ತಿರುತ್ತದೆ ಎನ್ನುವ ಅರಿವನ್ನು ಹೊಂದಿರಬೇಕೆAದು ತಿಳಿಸಿದರು.
ಬದಲಾಗುತ್ತಿರುವ ಪರಿಸ್ಥಿತಿಗಳ ನಡುವೆ ಹೊಸ ವಿಚಾರÀಗಳನ್ನು ಅಳವಡಿಸಿಕೊಂಡು ಮುನ್ನಡೆಯ ಬೇಕೆಂದು ಕಿವಿ ಮಾತುಗಳನ್ನಾಡಿದ ಅವರು, ಪತ್ರಿಕೋದ್ಯಮ ಶಿಕ್ಷಣ ವೆನ್ನುವುದು ಕೇವಲ ಪದವಿ ಗಳಿಕೆಗೆ ಸೀಮಿತವಾಗಕೂಡದು. ಅದನ್ನು ಮೀರಿ ಹೊಸ ವಿಚಾರಗಳತ್ತ ನಮ್ಮ ಚಿಂತನೆ ಹರಿಸಬೇಕೆಂದು ತಿಳಿಸಿದರು.
ಮಾಧ್ಯಮಗಳಲ್ಲಿ ಪತ್ರಕರ್ತರಾಗಿ ಕಾರ್ಯನಿರ್ವಹಿಸುವ ಬಹುತೇಕರು ಕಾನೂನಿನ ಅರಿವನ್ನು ಹೊಂದಿಲ್ಲ ವೆಂದು ಅಭಿಪ್ರಾಯಿಸಿ, ತಾನು ಏನನ್ನು ವರದಿ ಮಾಡಬಹುದು, ಬರೆಯ ಬಹುದು ಎನ್ನುವ ಸ್ಪಷ್ಟ ಚಿಂತನೆಯ ಅರಿವನ್ನು ಕಾನೂನಿನ ಜ್ಞಾನದೊಂದಿಗೆ ಪಡೆದುಕೊಳ್ಳುವುದು ಅವಶ್ಯ. ಮಾಹಿತಿಗಳನ್ನು ಪಡೆಯಲು ಲಭ್ಯವಿರುವ ಮಾಹಿತಿ ಹಕ್ಕು ಕಾಯ್ದೆಯನ್ನು ಪತ್ರಕರ್ತರು ಸ್ಪಷ್ಟವಾದ ಮಾಹಿತಿ, ಅಂಕಿಅAಶಗಳನ್ನು ತಮ್ಮ ಬರವಣಿಗೆಯಲ್ಲಿ ತರುವುದಕ್ಕೆ ಪೂರಕವಾದ ಅಸ್ತçವನ್ನಾಗಿ ಬಳಸಿಕೊಳ್ಳಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಸುಳ್ಯದ ಸಮಾಜ ಸೇವಕರು ಹಾಗೂ ಹಿರಿಯ ಪತ್ರಕರ್ತರಾದ ಎಂ.ಬಿ. ಸದಾಶಿವ ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯ ಮೌಲ್ಯಗಳನ್ನು ಉಳಿಸುವ ನಿಟ್ಟಿನ ಕಾರ್ಯಕ್ಕಾಗಿಯೇ ಪತ್ರಿಕಾ ಕ್ಷೇತ್ರವನ್ನು ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಪರಿಗಣಿಸಲಾಗಿದೆ. ಹೀಗಿದ್ದೂ ವಿಶ್ವ ಮಟ್ಟದ ಪತ್ರಿಕಾ ಸ್ವಾತಂತ್ರö್ಯದ ಸೂಚ್ಯಂಕದಲ್ಲಿ ಭಾರತ ಅತೀ ಕೆಳಗಿನ ಸ್ಥಾನದಲ್ಲಿದೆಯೆಂದು ವಿಷಾದಿಸಿದರು.
ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಸಂಸ್ಥಾಪಕ ಮ್ಯಾನೇಜಿಂಗ್ ಟ್ರಸ್ಟಿ ಟಿ.ಪಿ. ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ದುಡಿಯುವ ಜಿಲ್ಲೆಯ ಎಲ್ಲರಿಗು ಅನುಕೂಲಕರವಾಗಲಿ ಎನ್ನುವ ಚಿಂತನೆಗಳಡಿ ವಿವಿಧೋದ್ದೇಶಗಳ ಪತ್ರಿಕಾ ಭವನವನ್ನು ನಿರ್ಮಿಸಲಾಗಿದೆ. ಭವನವನ್ನು ನಿರ್ವಹಿಸುವ ಪತ್ರಿಕಾ ಭವನ ಟ್ರಸ್ಟ್ ವಿದ್ಯಾನಿಧಿಯನ್ನು ಸ್ಥಾಪಿಸಿ ಮಕ್ಕಳ ಶಿಕ್ಷಣಕ್ಕೆ ನೆರವನ್ನು ನೀಡುತ್ತಾ ಬರುತ್ತಿದೆಯಲ್ಲದೆ, ಸಮಾಜದ ಹಿತಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಎ. ಮುರಳೀಧರ್ ಅವರು, ಕೊಡಗು ಪತ್ರಿಕಾ ಭವನ ಟ್ರಸ್ಟ್ನ ಕಾರ್ಯವೈಖರಿಗಳ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ಅಧ್ಯಕ್ಷತೆ ವಹಿಸಿದ್ದ ಮ್ಯಾನೇಜಿಂಗ್ ಟ್ರಸ್ಟಿ ಎಂ.ಪಿ. ಕೇಶವ ಕಾಮತ್, ಪತ್ರಿಕಾ ಭವನವನ್ನು ಸ್ಥಾಪಿಸಿ ೨೩ ವರ್ಷಗಳು ಕಳೆೆದಿದ್ದು, ಬೆಳ್ಳಿ ಮಹೋತ್ಸವದ ಹೊಸ್ತಿಲಲ್ಲಿ ಇರುವುದಾಗಿ ತಿಳಿಸಿ, ಟ್ರಸ್ಟ್ ಮೂಲಕ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿರುವುದಾಗಿ ತಿಳಿಸಿದರು. ಇದೇ ಸಂದರ್ಭ ಕೊಡಗು ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಪ್ರೊ.ಸಪ್ನಾ ಎಂ.ಎಸ್. ಮತ್ತು ಎಂ.ಬಿ. ಸದಾಶಿವ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಹುಮಾನ ವಿತರಣೆ: ಪತ್ರಿಕಾ ಭವನ ಟ್ರಸ್ಟ್ ವಾರ್ಷಿಕೋತ್ಸವ ಹಿನ್ನೆಲೆ ಆಯೋಜಿತ ಒಳಾಂಗಣ ಕ್ರೀಡಾ ಕೂಟದ ವಿಜೇತರಿಗೆ ಬಹುಮಾನ ಗಳನ್ನು ವಿತರಿಸಲಾಯಿತು.
ಲಿಯಾಕತ್ ಅಲಿ ಪ್ರಾರ್ಥಿಸಿದರು. ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಎಸ್.ಜಿ. ಉಮೇಶ್ ಸ್ವಾಗತಿಸಿದರೆ, ಟ್ರಸ್ಟಿ ಅನಿಲ್ ಎಚ್.ಟಿ. ಮತ್ತು ವಿನೋದ್ ಮೂಡಗದ್ದೆ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ನ ಖಜಾಂಚಿ ಕೆ. ತಿಮ್ಮಪ್ಪ ಮತ್ತು ಟ್ರಸ್ಟಿ ಮಧೋಷ್ ಪೂವಯ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು. ಟ್ರಸ್ಟಿ ಶ್ರೀಧರ್ ಹೂವಲ್ಲಿ ವಂದಿಸಿದರು.