ಮಡಿಕೇರಿ, ನ. ೮: ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಘಟಕದಿಂದ ತಾ.೨೪ ರಂದು ಮಾಜಿ ಸೈನಿಕರು, ಅರೆ ಸೇನಾಪಡೆ ಮಾಜಿ ಯೋಧರು ಹಾಗೂ ಅವರ ಕುಟುಂಬದವರಿಗೆ ಆಟೋಟ ಸ್ಪರ್ಧೆ ಹಾಗೂ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವೀರಾಜಪೇಟೆಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬೆಳಿಗ್ಗೆ ೯ ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ೫ ವರ್ಷದೊಳಗಿನ ಮಕ್ಕಳಿಗೆ ಮಿಠಾಯಿ ಹೆಕ್ಕುವುದು, ೧, ೨ನೇ ತರಗತಿ ಮಕ್ಕಳಿಗೆ ೫೦ ಮೀಟರ್ ಓಟ, ೩ ರಿಂದ ೪, ೫ ರಿಂದ ೭ನೇ ತರಗತಿ ಮಕ್ಕಳಿಗೆ ೧೦೦ ಮೀ ಓಟ, ೮ ರಿಂದ ೧೦ನೇ ತರಗತಿ ಮಕ್ಕಳಿಗೆ ೧೦೦ ಹಾಗೂ ೨೦೦ ಮೀ ಓಟ, ಪ್ರಥಮ, ದ್ವಿತೀಯ ಪಿಯುಸಿ ಮಕ್ಕಳಿಗೆ ೧೦೦, ೪೦೦ ಮೀ ಓಟ, ಪ್ರಥಮ ದರ್ಜೆಯಿಂದ ೨೫ ವರ್ಷದೊಳಗಿನವರಿಗೆ ೪೦೦, ೮೦೦ ಮೀ ಓಟ, ೩೦ ವರ್ಷದೊಳಗಿನವರಿಗೆ ಭಾರದ ಗುಂಡು ಎಸೆತ ಹಾಗೂ ವಾಲಗಕ್ಕೆ ನೃತ್ಯ ಸ್ಪರ್ಧೆ ನಡೆಯಲಿದೆ.

೩೫ ರಿಂದ ೪೫, ೪೬ ರಿಂದ ೫೫, ೫೬ ರಿಂದ ೬೫ ವರ್ಷದೊಳಗಿನವರಿಗೆ ೧೦೦ ಮೀ ಓಟ, ೪೬ ರಿಂದ ೫೫, ೫೬ ರಿಂದ ೬೫ ವರ್ಷದೊಳಗಿನವರಿಗೆ ೨೦೦ ಮೀ ಓಟ, ೬೬ ವರ್ಷ ಮೇಲ್ಪಟ್ಟವರಿಗೆ ೨೦೦ ಮೀಟರ್ ವೇಗದ ನಡಿಗೆ, ೨೬ ರಿಂದ ೩೬ ವರ್ಷದೊಳಗಿನವರಿಗೆ ೧೦೦ ಹಾಗೂ ೨೦೦ ಮೀ ಓಟ, ೫೯, ೫೧ ರಿಂದ ೬೫, ೬೬ ವರ್ಷ ಮೇಲ್ಪಟ್ಟ ವಿಭಾಗಗಳಲ್ಲಿ ಭಾರದ ಗುಂಡು ಎಸೆತ, ತಾಲೂಕುವಾರು ಹಗ್ಗಜಗ್ಗಾಟ, ಪುರುಷರಿಗೆ ೪೦೦ ಮೀಟರ್ ರಿಲೇ, ಮಹಿಳೆಯರಿಗಾಗಿ ಬರ್ನಿಂಗ್ ದ ಟ್ರೆöÊನ್, ಮುಕ್ತ ವಾಲಗಕ್ಕೆ ನೃತ್ಯ ಸ್ಪರ್ಧೆ ಆಯೋಜಿತಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.