ಕರಿಕೆ, ನ. ೮ : ಮಡಿಕೇರಿ ಉಪವಿಭಾಗದ ಭಾಗಮಂಡಲ ವಲಯದ ಪಟ್ಟಿಘಾಟ್ ಮೀಸಲು ಅರಣ್ಯದಲ್ಲಿ ಕಾಡುಪ್ರಾಣಿ ಬೇಟೆಗೆ ತೆರಳಿದ ಆರೋಪಿಗಳನ್ನು ಬಂಧಿಸುವಲ್ಲಿ ಭಾಗಮಂಡಲ ಅರಣ್ಯ ವಲಯದ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.

ಕುಂದಚೇರಿ ಗ್ರಾಮದ ಜಗನ್ ಸಿ.ಆರ್., ಶಿವಕಾಂತ ಪಿ.ಆರ್. (ಮನು), ಪವೀನ ಕುಮಾರ, ಕನಕ ಕುಮಾರ ಬಂಧಿತ ಆರೋಪಿಗಳು ಪಟ್ಟಿಘಾಟ್ ಮೀಸಲು ಅರಣ್ಯದೊಳಗೆ ಕಾಡುಪ್ರಾಣಿ ಬೇಟೆಗೆ ತೆರಳಿದ ಖಚಿತ ಸುಳಿವಿನ ಮೇರೆಗೆ ದಾಳಿ ಮಾಡಿದ ಅರಣ್ಯ ಅಧಿಕಾರಿಗಳು ಈ ನಾಲ್ವರನ್ನು ವಶಕ್ಕೆ ಪಡೆದು ಒಂದು ಒಂಟಿ ನಳಿಕೆ ಕೋವಿ, ಆರು ಜೀವಂತ ಗುಂಡುಗಳು,

(ಮೊದಲ ಪುಟದಿಂದ) ಒಂದು ಕತ್ತಿ, ಮೂರು ಟಾರ್ಚ್ ಗಳು, ಒಂದು ಕಪ್ಪು ಬಣ್ಣದ ಬಟ್ಟೆ ಚೀಲ ಹಾಗೂ ನಾಲ್ಕು ಮೊಬೈಲ್‌ಗಳನ್ನು ಸರ್ಕಾರದ ಪರ ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಮಡಿಕೇರಿ ಉಪವಿಭಾಗದ ಉಪ ಅರಣ್ಯ ಸಂರಕ್ಷಣಾ ಭಾಸ್ಕರ್ ಬಿ. ಹಾಗೂ ಸಹಾಯಕ ಅರಣ್ಯ ಸಂರಕ್ಷಣಾ ಅಧಿಕಾರಿ ಮೊಹಿಸಿನ್ ಪಾಷಾ ಮಾರ್ಗದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ರವೀಂದ್ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.