ಸೋಮವಾರಪೇಟೆ, ನ. ೮: ಇಲ್ಲಿನ ಚೌಡ್ಲು ಗ್ರಾಮ ನಿವಾಸಿ, ಸೋಮವಾರಪೇಟೆ ವ್ಯಾಪ್ತಿಯ ವಿವಿಧ ಶಾಲಾ ಕಾಲೇಜು, ಸಮುದಾಯ ಭವನ, ಸಾರ್ವಜನಿಕ ಉದ್ದೇಶಕ್ಕೆ ಹತ್ತಾರು ಎಕರೆ ಜಾಗವನ್ನು ದಾನ ನೀಡಿರುವ ದಿ. ಸಿ.ಕೆ. ಕಾಳಪ್ಪ ಅವರ ಪುತ್ರ ಸಿ.ಕೆ. ರಾಘವ (೭೮) ಅವರು ತಾ. ೮ರಂದು ನಿಧನರಾದರು.

ಪಟ್ಟಣದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಜಾಗವನ್ನು ದಾನ ನೀಡಿದ್ದ ಕಾಳಪ್ಪ ಹಾಗೂ ತದ ನಂತರದ ದಿನಗಳಲ್ಲಿ ಶಾಲಾ ಕಾಲೇಜಿಗೆ ಹೆಚ್ಚಿನ ನೆರವು ಒದಗಿಸುತ್ತಾ ಬಂದಿದ್ದ ಸಿ.ಕೆ. ರಾಘವ ಅವರು ನಿಧನರಾದ ಹಿನ್ನೆಲೆ, ಪಟ್ಟಣದ ಸರ್ಕಾರಿ ಶಾಲೆ, ಕಾಲೇಜಿಗೆ ಮಧ್ಯಾಹ್ನ ನಂತರ ರಜೆ ಘೋಷಣೆ ಮಾಡಿ ಸಂತಾಪ ಸೂಚಿಸಲಾಯಿತು. ಮೃತರು ಈರ್ವರು ಪುತ್ರರನ್ನು ಅಗಲಿದ್ದು, ಸಂಜೆ ಮೃತರ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.