ಕೂಡಿಗೆ, ನ. ೮: ಪ್ರಸಕ್ತ ವರ್ಷ ಕೊಡಗು ಜಿಲ್ಲೆಯ ಹಲವಾರು ಭಾಗದಲ್ಲಿ ರೈತರು ಶುಂಠಿಕೃಷಿಯತ್ತ ಆಸಕ್ತಿ ತೋರಿ ಬೆಳೆ ಬೆಳೆದಿದ್ದಾರೆ. ಸಾವಿರಾರು ರೂ. ವ್ಯಯಮಾಡಿ ಶುಂಠಿ ಕೃಷಿ ಮಾಡಲಾಗಿದ್ದು, ಇದೀಗ ಈ ಬೆಳೆಗೆ ಹೊಸ ಮಾದರಿಯ ರೋಗಬಾಧೆಯೊಂದು ಕಂಡು ಬಂದಿದ್ದು, ಬೆಳೆಗಾರರು ಆತಂಕ ಗೊಳ್ಳುವಂತಾಗಿದೆ. ಬೆಳೆಯಲಾಗಿರುವ ಶುಂಠಿ ಫಸಲು ಬೆಂದು ಹೋದ ರೀತಿಯಲ್ಲಿ ಕಾಣುತ್ತಿರುವುದು ಈ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಯಲ್ಲಿ ಈ ಬಾರಿ ಕೊಳವೆ ಬಾವಿ ನೀರನ್ನು ಅವಲಂಬಿಸಿ ಮತ್ತು ಸ್ವಲ್ಪ ರೈತರು ಮಳೆಯನ್ನೇ ಅವಲಂಬಿಸಿ ಶುಂಠಿ ಬೇಸಾಯ ಮಾಡಿರುತ್ತಾರೆ. ಶುಂಠಿ ಬೆಳೆಯು ಕಳೆದ ಸಾಲಿಗಿಂತ ಉತ್ತಮವಾಗಿ ಬಂದಿದೆ, ಆದರೂ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಸಮಸ್ಯೆ ಎದುರಾಗಿದೆ. ಕಳೆದ ಮೂರು ತಿಂಗಳ ಹಿಂದೆಯೇ ಅತಿಯಾದ ಮಳೆಯಿಂದಾಗಿ ಶುಂಠಿ ಬೆಳೆಗೆ ಹೆಚ್ಚಿನ ಶೀತವಾದ ಕಾರಣದಿಂದಾಗಿ ಮಹಾ ಕಾಳಿ , ಕರಿಕಡ್ಡಿ ರೋಗವು ಬೆಂಕಿ ರೋಗ ಗಳು ಬಿತ್ತನೆ ಮಾಡಿದ ಮೂರು ತಿಂಗಳುಗಳಲ್ಲಿ ಶುಂಠಿ ಗದ್ದೆಗಳಲ್ಲಿ ಕಂಡುಬರುತ್ತಿತು. ಅದಕ್ಕೆ ಸಂಬAಧಿಸಿದ ಔಷಧಿಗಳನ್ನು ರೈತರು ಸಿಂಪಡಣೆ ಮಾಡುವ ಮೂಲಕ ಹತೋಟಿಗೆ ತರುತ್ತಿದರು. ಆದರೆ ಇದೀಗ ಈ ವರ್ಷದಲ್ಲಿ ಪ್ರಥಮವಾಗಿ ವಿಚಿತ್ರ ಮಾದರಿ ರೋಗವೊಂದು ಶುಂಠಿ ಬೆಳೆದ ರೈತರ ಜಮೀನಿನಲ್ಲಿ ಕಂಡುಬರುತ್ತದೆ. ಹೊರ ಜಿಲ್ಲೆ ಯಿಂದ ಬಿತ್ತನೆ ಬೀಜದ ಶುಂಠಿಯನ್ನು ತಂದು ಬಿತ್ತನೆ ಮಾಡುವ ಮೂಲಕ ಜಿಲ್ಲಾದ್ಯಂತ ರೈತರು ಈ ಬಾರಿ ವಾಣಿಜ್ಯ ಬೆಳೆಯಾದ ಶುಂಠಿ ಬೇಸಾಯದತ್ತ ಆಸಕ್ತರಾಗಿದ್ದರು.
ಆದರೆ ವರ್ಷಂಪ್ರತಿಯAತೆ ಬೆಂಕಿರೋಗ, ಕರಿಕಡ್ಡಿರೋಗ, ಮಹಾಕಾಳಿ ರೋಗ ,ಇದರ ಜೊತೆಯಲ್ಲಿ ಈ ಸಾಲಿನಲ್ಲಿ ಅನೇಕ ರೈತರ ಜಮೀನಿನಲ್ಲಿ ಶುಂಠಿ ಬೆಳೆಯು ಬೆಂಕಿಯಲ್ಲಿ ಬೆಂದ ಮಾದರಿಯಲ್ಲಿ ಒಣಗುತ್ತಾ ಬರುತ್ತಿದೆ. ಈ ರೋಗವು ಈ ಸಾಲಿನಲ್ಲಿ ವಿಚಿತ್ರವಾದ ರೋಗವಾಗಿದೆ. ಇದಕ್ಕೆ ಯಾವುದೆ ಔಷಧಿಯನ್ನು ಇದುವರೆಗೂ ಕಂಡು ಹಿಡಿದಿಲ್ಲ. ಹೆಚ್ಚು ಹಣವನ್ನು ವ್ಯಯ ಮಾಡಿ ಬೇರೆ ಔಷಧಿಯನ್ನು ಸಿಂಪಡಣೆ ಮಾಡಿದರೂ ರೋಗ ಮಾತ್ರ ಹತೋಟಿಗೆ ಬಾರದೆ ಶುಂಠಿ ಬೆ¼ಯನ್ನು ಕೀಳುವಂತಾಹ ಪ್ರಸಂಗ ಎದುರಾಗುತ್ತಿದೆ ಎಂದು ರೈತರರಾದ ಪ್ರಕಾಶ್, ಯೋಗೇಶ್, ಮಂಜುನಾಥ ಜಗದೀಶ್, ಚಂದ್ರ, ಕುಮಾರ್ ರವಿ. ಸೇರಿದಂತೆ ಹಲವಾರು ರೈತರು ಅಳಲು ತೋಡಿಕೊಂಡಿದ್ದಾರೆ.
ಶುಂಠಿಗೆ ವೈರಸ್ ಮಾದರಿಯ ಕೀಟಗಳಿಂದ ರೋಗ ಬಂದಿರುವ ಹಿನ್ನೆಲೆಯಲ್ಲಿ ರೋಗ ಕಾಣಿಸಿಕೊಂಡ ಒಂದು ವಾರದ ಒಳಗೆ ಕಿತ್ತು ಮಾರಾಟ ಮಾಡಿದರೇ ಮಾತ್ರ ಶುಂಠಿಯ ಗುಣಮಟ್ಟ ಇರುತ್ತದೆ. ಇಲ್ಲದೆ ಹೋದರೆ ಅದು ಯಾವುದೇ ಉಪಯೋಗಕ್ಕೆ ಬರುವುದಿಲ್ಲ ಎಂಬದು ಶುಂಠಿಯನ್ನು ಖರೀದಿಸುವವರ ಅಭಿಪ್ರಾಯವಾಗಿದೆ.
ಶುಂಠಿ ಬೆಳೆಗೆ ಈಗಾಗಲೇ ಬೆಂಕಿಯಲ್ಲಿ ಬೆಂದ ಮಾದರಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಈ ರೋಗ ಜಿಲ್ಲೆಯಲ್ಲಿ ಪ್ರಥಮವಾಗಿ ಕಂಡುಬರುತ್ತಿದೆ. ಚಿಕ್ಕ, ಚಿಕ್ಕ ಕ್ರಿಮಿಗಳ ಮಾದರಿಯಲ್ಲಿ ಶುಂಠಿ ಎಲೆಗಳನ್ನು ತಿನ್ನಲು ಆರಂಭ ಮಾಡುತ್ತವೆ ,ಇದರಿಂದಾಗಿ ಶುಂಠಿ ಬೆಳವಣಿಗೆಗೂ ತೊಂದರೆಗಳು ಅಗುತ್ತಿದೆ. ಹೊಸ ಔಷಧಿಗಳನ್ನು ಬಳಸಿ ರೋಗ ತಡೆಗಟ್ಟಲು ರೈತರು ಪ್ರಯತ್ನ ಮಾಡಬೇಕಾಗಿದೆ ಎಂದು ಸಿದ್ದಲಿಂಗಪುರ ಶುಂಠಿ ಬೆಳೆಗಾರರಾದ ಬೇಬಿಯಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ವ್ಯಾಪ್ತಿ, ಕೂಡಿಗೆ ಭಾಗ ಸೇರಿದಂತೆ ಹಲವೆಡೆ ಗಳಲ್ಲಿ ಹೆಚ್ಚಾಗಿ ಶುಂಠಿ ಬೆಳೆಯಲಾಗಿದೆ.
- ಕೆ.ಕೆ. ನಾಗರಾಜಶೆಟ್ಟಿ