ಮಡಿಕೇರಿ, ನ. ೮ : ಕಾಫಿ ಮಂಡಳಿಯ ಕಾರ್ಮಿಕ ಕಲ್ಯಾಣ ಯೋಜನೆಯ ಅಡಿಯಲ್ಲಿ, ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ವರ್ಗದ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಹ ನೀಡುವ ನಿಟ್ಟಿನಲ್ಲಿ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಅಹ್ವಾನ ಮಾಡಲಾಗಿದೆ.
ಅರ್ಹತೆಗಳು : ೨೦೨೩-೨೪ನೇ ಸಾಲಿನಲ್ಲಿ ೧೦ನೇ ತರಗತಿ ಉತ್ತೀರ್ಣ ಹೊಂದಿ ಪ್ರಸಕ್ತ ಸಾಲಿನಲ್ಲಿ ಪ್ರಥಮ ಪಿಯುಸಿ (ತಾಂತ್ರಿಕ ಶಿಕ್ಷಣಗಳಾದ ಐ ಟಿ ಐ, ಡಿಪ್ಲೋಮ ಇನ್ ನರ್ಸಿಂಗ್ ಹಾಗೂ ಇತರ ವೃತ್ತಿಪರ ಶಿಕ್ಷಣ) ಓದುತ್ತಿರುವ ವಿದ್ಯಾರ್ಥಿಗಳು. ೨೦೨೩-೨೪ನೇ ಸಾಲಿನಲ್ಲಿ ಪಿಯುಸಿ ಉತ್ತೀರ್ಣ ಹೊಂದಿ ೨೦೨೪-೨೫ರಲ್ಲಿ ಯಾವುದೇ ಪದವಿ ಪ್ರವೇಶ ಹೊಂದಿರುವ ವಿದ್ಯಾರ್ಥಿಗಳು. ಸ್ನಾತಕೋತ್ತರ ಪದವಿ, (ವೃತ್ತಿಪರ ಶಿಕ್ಷಣಗಳಾದ ವೈದ್ಯಕೀಯ ವಿಜ್ಞಾನ, ಬೇಸಾಯ ಮತ್ತು ಅದಕ್ಕೆ ಸಂಬAಧಪಟ್ಟ ವಿಜ್ಞಾನ, ಪಶು ಪಾಲನೆ, ಇಂಜಿನಿಯರಿAಗ್, ಫಾರ್ಮಸಿ, ನರ್ಸಿಂಗ್ ಹಾಗೂ ಇತರ ವೃತ್ತಿಪರ ಪದವಿ). ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಶೇಕಡಾ ೫೦ ಹಾಗೂ ಇತರ ವರ್ಗದ ವಿದ್ಯಾರ್ಥಿಗಳು ಶೇಕಡಾ ೬೦ ಅಂಕದೊAದಿಗೆ ಉತ್ತೀರ್ಣರಾಗಿರಬೇಕು. ಪ್ರೋತ್ಸಾಹ ಧನ ವಿತರಣೆಯು, ಅನುದಾನದ ಲಭ್ಯತೆ ಹಾಗೂ ಮೆರಿಟ್ ಆಧಾರದ ಆದ್ಯತೆಯಲ್ಲಿ ಮಾಡಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ೨೯.೧೧.೨೦೨೪.
ಬೇಕಾಗಿರುವ ದಾಖಲಾತಿಗಳು: ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಭಾವಚಿತ್ರ, ಹಿಂದಿನ ವರ್ಷದ ಅಂಕಪಟ್ಟಿ, ಆಧಾರ್ ಹಾಗೂ ಬ್ಯಾಂಕ್ ಖಾತೆಯ ಪಾಸ್ ಪುಸ್ತಕದ ಪ್ರತಿಗಳು
ಹೆಚ್ಚಿನ ಮಾಹಿತಿ ಹಾಗೂ ಅರ್ಜಿ ಪ್ರತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.