ಮಡಿಕೇರಿ, ನ. ೮ : ೨೫ನೇ ವರ್ಷದ ಕೊಡವ ಕೌಟುಂಬಿಕ ಹಾಕಿ ಉತ್ಸವದ ಉಸ್ತುವಾರಿ ವಹಿಸಿಕೊಂಡಿರುವ ಮುದ್ದಂಡ ಕಪ್ ಹಾಕಿ ಉತ್ಸವದ ವೆಬ್‌ಸೈಟ್ ಬಿಡುಗಡೆಗೊಳಿಸಲಾಯಿತು. ತಾಳತ್ತ್ಮನೆಯ ಆಕ್ಸಿರಿಚ್ ಹೊಟೇಲ್ ಸಭಾಂಗಣದಲ್ಲಿ ನಡೆದ ಕಾರ್ಯ ಕ್ರಮದಲ್ಲಿ ಗಣ್ಯರು ವೆಬ್‌ಸೈಟ್‌ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೊಡಗು ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಬೋಪಣ್ಣ; ಕಳೆದ ಬಾರಿ ಹಾಕಿ ಉತ್ಸವ ಆಯೋಜನೆ ಮಾಡಿ ಕುಂಡ್ಯೋಳAಡ ತಂಡ ೩೬೦ ತಂಡಗಳನ್ನು ಆಡಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದೆ
ಮುದ್ದಂಡ ದೊಡ್ಡ ಕುಟುಂಬವಾಗಿದೆ. ಇನ್ನೂ ಚೆನ್ನಾಗಿ ಆಯೋಜನೆ ಮಾಡಲಿದ್ದಾರೆ. ಹೆಚ್ಚಿನ ತಂಡಗಳನ್ನು ಸೇರಿಸಲಿದ್ದಾರೆ. ಮುಂದಕ್ಕೆ ಹಾಕಿ ಉತ್ಸವದ ಉಸ್ತುವಾರಿ ವಹಿಸಿಕೊಳ್ಳಲು ೮ ಕುಟುಂಬಗಳು ಮುಂದೆ ಬಂದಿವೆ. ಹಾಕಿ ಜನಕ ಪಾಂಡAಡ ಕುಟ್ಟಪ್ಪ ಅವರ ಕನಸು ನನಸಾಗಿದೆ ಎಂದ ಹೇಳಿದರು.
ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಮಾತನಾಡಿ ೨೫ನೇ ವರ್ಷದ ಉತ್ಸವ ಯಶಸ್ವಿಯಾಗುವ ಭರವಸೆಯಿದೆ. ವಿಶ್ವವ್ಯಾಪಿ ಪ್ರಸಿದ್ಧಿ ಪಡೆದಿರುವ ಗಿನ್ನಿಸ್ ದಾಖಲೆ ನಿರ್ಮಿಸಿದ್ದರೂ ಅಂರ‍್ರಾಷ್ಟಿçÃಯ ಹಾಕಿ ತಂಡದಲ್ಲಿ ಕೊಡಗಿನ ಆಟಗಾರರಿಗೆ ಅವಕಾಶ ಸಿಗದೇ ಇರುವುದು ಬೇಸರ ತರಿಸಿದೆ. ರಾಷ್ಟಿçÃಯ ಕ್ರೀಡೆÀ ಅದರಲ್ಲೂ ಕೊಡವರ ಕ್ರೀಡೆÀಯಾಗಿದ್ದರೂ ಸ್ಥಾನ ದೊರಕದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಹಾಕಿ ಅಕಾಡೆಮಿ, ಹಾಕಿ ಇಂಡಿಯಾ ಸಂಸ್ಥೆಗಳು ಪ್ರಯತ್ನಿಸಬೇಕೆಂದು ಹೇಳಿದರು. ತಮ್ಮಲ್ಲಿ ಲಾಬಿ ಮಾಡುವ ಅಭ್ಯಾಸವಿಲ್ಲ. ಹಾಗಾಗಿ ಈ ರೀತಿಯಾಗುತ್ತಿದೆ. ಕೊಡವ ಅಕಾಡೆಮಿಗೆ ಹಾಕಿ ಇಂಡಿಯಾದಲ್ಲಿ ಸ್ಥಾನ ಕೊಟ್ಟರೆ ಯಶಸ್ವಿಯಾಗಬಹುದು ಎಂದರು.
(ಮೊದಲ ಪುಟದಿಂದ) ಬ್ರಹ್ಮಗಿರಿ ಪತ್ರಿಕೆ ಸಂಪಾದಕ ಉಳ್ಳಿಯಡ ಪೂವಯ್ಯ ಮಾತನಾಡಿ, ಕುಂಡ್ಯೋಳAಡ ಕುಟುಂಬಸ್ಥರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹಾಕಿ ಉತ್ಸವವನ್ನು ಯಶಸ್ವಿಯಾಗಿ ಮಾಡಿದ್ದಾರೆ. ಹಾಗೆಯೇ ಮುದ್ದಂಡ ಕುಟುಂಬಸ್ಥರು ಕೂಡ ೨೫ನೇ ವರ್ಷದ ನೆನಪಿನಲ್ಲಿ ೨೫ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ವಿಗೊಳಿಸಬೇಕು. ೪೦೦ಕ್ಕೂ ಅಧಿಕ ತಂಡಗಳು ಪಾಲ್ಗೊಳ್ಳುವಂತಾಗಬೇಕೆAದು ಆಶಿಸಿದರು.
ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ ಬೆಳ್ಳಿಯ ಹೆಜ್ಜೆ ಹೆಮ್ಮರವಾಗಿ, ಹೆಜ್ಜೆ ಗುರುತು ಸ್ಥಾಪಿಸಿ ಹೋಗುವಂತಾಗಲಿ. ಪಾಂಡAಡ ಕುಟ್ಟಪ್ಪ ಅವರ ಕನಸು ನನಸಾಗಿದೆ. ಹಾಕಿ ಉತ್ಸವ ಒಂದು ಉತ್ತಮ ಯೋಚನೆ. ಕುಟುಂಬ ಸೇರಬೇಕು, ಆಚಾರ, ವಿಚಾರ ವಿನಿಮಯ ಆಗಬೇಕೆಂಬ ಚಿಂತನೆ ಉತ್ತಮವಾದುದಾಗಿದೆ ಎಂದು ಹೇಳಿದರು.
ಮುದ್ದಂಡ ಸ್ಪೋರ್ಟ್ಸ್ ಅ್ಯಂಡ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುದ್ದಂಡ ರಶಿತ್ ಸುಬ್ಬಯ್ಯ ಮಾತನಾಡಿ, ಗಿನ್ನಿಸ್ ದಾಖಲೆಗೆ ಸೇರಿದ ಕೊಡವ ಹಾಕಿ ಉತ್ಸವ ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ರಾಜ್ಯಸಭೆಯಲ್ಲಿ ಕೂಡ ಈ ಬಗ್ಗೆ ಪ್ರಸ್ತಾಪವಾಗಿದ್ದು, ಸರ್ಕಾರದಿಂದ ನೆರವು ನೀಡುವ ಬಗ್ಗೆ ಚರ್ಚೆಯಾಗಿದೆ. ಪಂದ್ಯಾವಳಿಯ ಪ್ರತಿ ಮಾಹಿತಿಗಾಗಿ ವೈಬ್‌ಸೈಟ್ ರಚನೆ ಮಾಡಲಾಗಿದೆ. ಇದರಲ್ಲಿ ಎಲ್ಲವೂ ಸಿಗಲಿದೆ ಎಂದು ಹೇಳಿದರು.
ತಂಡ ನೋಂದಣಿ ವ್ಯವಸ್ಥೆ ಕೂಡ ವೆಬ್‌ಸೈಟ್ ಮೂಲಕವೇ ಮಾಡಬಹುದಾಗಿದೆ ಎಂದು ತಿಳಿಸಿದರು. ತಿತಿತಿ.muಜಜಚಿಟಿಜಚಿhoಛಿಞeಥಿಜಿesಣivಚಿಟನಲ್ಲಿ ಮಾಹಿತಿ ದೊರಕಲಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಗೌರವ ಅಧ್ಯಕ್ಷ ಮುದ್ದಂಡ ದೇವಯ್ಯ ಅವರು, ಈ ಬಾರಿ ವಿಶೇಷವಾಗಿ ಮಹಿಳಾ ಹಾಕಿ ಪಂದ್ಯಾವಳಿ ಹಾಗೂ ಬಂದೂಕು ಉತ್ಸವ ಏರ್ಪಡಿಸಲು ಚಿಂತನೆ ನಡೆಸಲಾಗಿದೆ. ಎಲ್ಲರೂ ಸಹಕಾರ ನೀಡುವಂತೆ ಕೋರಿದರು. ಅತಿಥಿಗಳಾಗಿ ಕುಟುಂಬದ ಪಟ್ಟೆದಾರ ಡಾಲಿ ತಿಮ್ಮಯ್ಯ, ಡೀನ್ ಬೋಪಣ್ಣ, ಉಪಾಧ್ಯಕ್ಷ ಅಶೋಕ್, ಕೊಡಗು ಪ್ರೆಸ್‌ಕ್ಲಬ್ ಅಧ್ಯಕ್ಷ ಬೊಳ್ಳಜಿರ ಅಯ್ಯಪ್ಪ ಇತರರಿದ್ದರು.
ಮಿನ್ನಂಡ ಚಿಣ್ಣಪ್ಪ, ಚೋಂದಮ್ಮ ಪ್ರಾರ್ಥಿಸಿದರೆ, ಚೋಕೀರ ಅನಿತಾ ದೇವಯ್ಯ, ಚೆಯ್ಯಂಡ ಭಜನ್ ನಿರೂಪಿಸಿದರು. ಆದ್ಯ ತಿಮ್ಮಯ್ಯ ಸ್ವಾಗತಿಸಿದರು. ರಾಯ್ ತಮ್ಮಯ್ಯ ಉತ್ಸವ ಸಮಿತಿಯ ಪದಾಧಿಕಾರಿಗಳ ಪರಿಚಯ ಮಾಡಿಕೊಟ್ಟರು.