ಸೋಮವಾರಪೇಟೆ, ನ. ೮: ಪಟ್ಟಣದ ರೇಂಜರ್ ಬ್ಲಾಕ್ನಲ್ಲಿ ಶ್ರೀ ವನದುರ್ಗಿ ದೇವಾಲಯ ಇರುವ ಜಾಗವನ್ನೂ ಒಳಗೊಂಡAತೆ ದಾಖಲೆಗಳಲ್ಲಿ ವಕ್ಫ್ ಬೋರ್ಡ್ ಎಂದು ನಮೂದಿಸಿದ್ದು, ರಾಜ್ಯ ಕಾಂಗ್ರೆಸ್ ಸರ್ಕಾರ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮೂಲಕ ಆಧುನಿಕ ಟಿಪ್ಪುವನ್ನು ಪರಿಚಯಿಸುತ್ತಿದೆ ಎಂದು ಆರೋಪಿಸಿರುವ ಬಿಜೆಪಿ, ದೇವಾಲಯದ ಜಾಗಕ್ಕೆ ಧಕ್ಕೆಯಾದರೆ ಜಿಲ್ಲಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದೆ.
ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬಿಜೆಪಿ ಮಂಡಲ ವಕ್ತಾರ ಕಂಠಿ ಕಾರ್ಯಪ್ಪ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಬಂದ ನಂತರ ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವ ಕೆಲಸವನ್ನು ನಿರಂತರವಾಗಿಸಿಕೊAಡಿದೆ. ಇದೀಗ ವಕ್ಫ್ ಹೆಸರಿನಲ್ಲಿ ಜಮೀರ್ ಅಹಮ್ಮದ್ ಅವರು ಆಧುನಿಕ ಟಿಪ್ಪು ಆಗಲು ಹೊರಟಿದ್ದಾರೆ. ಆರಂಭದಲ್ಲಿ ಉತ್ತರ ಕರ್ನಾಟಕದಲ್ಲಿ ಕಂಡುಬAದ ಈ ಪ್ರಕ್ರಿಯೆ ಇದೀಗ ಕೊಡಗಿಗೂ ಕಾಲಿಟ್ಟಿದ್ದು, ಹಿಂದೂ ಸಮಾಜ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಒಂದು ಕೋಮುವಿನ ಪರವಾಗಿ ಕೆಲಸ ಮಾಡುತ್ತಿದೆ. ಮುಸ್ಲಿಂ ಸಮುದಾಯದ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಹಿಂದೂ ದೇವಾಲಯ, ಮಠ, ಹಿಂದೂಗಳ ಜಾಗವನ್ನು ಗುರಿ ಮಾಡುತ್ತಿದೆ. ಸಾವಿರಾರು ವರ್ಷಗಳ ಪುರಾತನ ಇತಿಹಾಸ ಇರುವ ದೇವಾಲಯಗಳೂ ಸಹ ವಕ್ಫ್ ವ್ಯಾಪ್ತಿಗೆ ಬರುತ್ತಿರುವುದು ಹಿಂದೂ ಸಮಾಜಕ್ಕೆ ಕಳವಳಕಾರಿ ಮತ್ತು ಕಾಂಗ್ರೆಸ್ ಸರ್ಕಾರ ನೀಡುತ್ತಿರುವ
(ಮೊದಲ ಪುಟದಿಂದ) ಎಚ್ಚರಿಕೆಯ ಗಂಟೆಯಾಗಿದೆ ಎಂದು ಅಭಿಪ್ರಾಯಿಸಿದರು.
ಗೋಷ್ಠಿಯಲ್ಲಿದ್ದ ಶ್ರೀವನದುರ್ಗಿ ದೇವಾಲಯ ಸಮಿತಿ ಸದಸ್ಯ ಕೆ.ಎಸ್. ಪ್ರಕಾಶ್ ಮಾತನಾಡಿ, ಪಟ್ಟಣದ ರೇಂಜರ್ ಬ್ಲಾಕ್ನಲ್ಲಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಶ್ರೀ ವನದುರ್ಗಿ ದೇವಾಲಯದ ಜಾಗವೂ ಸಹ ಇದೀಗ ವಕ್ಫ್ ಹೆಸರಿಗೆ ಬಂದಿರುವುದು ಅತ್ಯಂತ ಕಳವಳಕಾರಿ. ಇಲ್ಲಿ ನೂರಾರು ವರ್ಷಗಳಿಂದ ಪೂಜೆಗಳು ನಡೆದುಕೊಂಡು ಬಂದಿದೆ. ಹಳೆಗನ್ನಡದ ಶಿಲಾಶಾಸನವೂ ಇದೆ. ಇದೀಗ ಇಡೀ ಜಾಗವನ್ನು ವಕ್ಫ್ ಹೆಸರಿಗೆ ಸೇರ್ಪಡೆಗೊಳಿಸಿರುವುದು ಹೇಗೆ? ಎಂದು ಪ್ರಶ್ನೆ ಮೂಡಿದೆ ಎಂದರು.
ಈ ಹಿಂದೆ ಟ್ರಸ್ಟ್ಗೆ ಒಳಪಟ್ಟಿದ್ದ ಸುಮಾರು ೧೧ ಎಕರೆ ಜಾಗವನ್ನು ವಕ್ಫ್ ಹೆಸರಿಗೆ ಸೇರಿಸುವ ಹುನ್ನಾರ ನಡೆದಿದೆ. ಇದರಲ್ಲಿ ೫.೨೩ ಎಕರೆ ಜಾಗಕ್ಕೆ ದಾಖಲೆಗಳಿದ್ದು, ಉಳಿದ ಜಾಗ ಪೈಸಾರಿಯಾಗಿದೆ. ಈ ಜಾಗವನ್ನೂ ಒಳಗೊಂಡAತೆ ಒಟ್ಟು ೧೧ ಏಕರೆ ಜಾಗವನ್ನು ವಕ್ಫ್ ಹೆಸರಿಗೆ ಆರ್ಟಿಸಿ ಮಾಡಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ದೇವಾಲಯಕ್ಕೆ ಧಕ್ಕೆಯಾದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದರು.
ಇದರೊAದಿಗೆ ಜಿಲ್ಲೆಯ ವಿವಿಧೆಡೆಗಳಲ್ಲಿ ಹಿಂದೂ ದೇವಾಲಯ, ಹಿಂದೂಗಳು ನೆಲೆಸಿರುವ ಜಾಗವನ್ನು ವಕ್ಫ್ ಹೆಸರಿಗೆ ಆರ್ಟಿಸಿ ಮಾಡುತ್ತಿರುವುದು ಕಂಡುಬರುತ್ತಿದ್ದು, ಇವರುಗಳ ಪರವಾಗಿ ಭಾರತೀಯ ಜನತಾ ಪಾರ್ಟಿ ನಿಲ್ಲಲಿದೆ. ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ನೀಡುತ್ತಿರುವ ನೋಟಿಸ್ಗಳನ್ನು ತಕ್ಷಣ ಸ್ಥಗಿತಗೊಳಿಸಬೇಕು. ಆರ್ಟಿಸಿ ತಿದ್ದುಪಡಿ ನಿಲ್ಲಿಸಬೇಕು. ವಕ್ಫ್ ಮೂಲಕ ಮತ್ತೆ ದಬ್ಬಾಳಿಕೆಗೆ ಮುಂದಾದರೆ ಭಾರೀ ಪ್ರತಿಭಟನೆಗೆ ಎದುರಿಸಬೇಕಾಗುತ್ತದೆ ಎಂದು ಬಿಜೆಪಿ ಕೃಷಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್ಚಂದ್ರ ಹೇಳಿದರು.
ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಪ್ರಧಾನ ಕಾರ್ಯದರ್ಶಿ ಪಿ.ಕೆ. ಚಂದ್ರು, ಬಿಜೆಪಿ ಮುಖಂಡರಾದ ಕಿಬ್ಬೆಟ್ಟ ಮಧು ಅವರುಗಳು ಉಪಸ್ಥಿತರಿದ್ದರು.