ನವೆAಬರ್ ೯ ಉತ್ತರಾಖಂಡ ಎಂಬ ಸುಂದರ ರಾಜ್ಯಕ್ಕೆ ವಿಶೇಷವಾದ ದಿನವಾಗಿದೆ. ಅದರ ಸಂಸ್ಥಾಪನಾ ದಿನ. ೨೦೦೦ ದಲ್ಲಿ ಉತ್ತರಪ್ರದೇಶ ರಾಜ್ಯದಿಂದ ಉತ್ತರಾಖಂಡವನ್ನು ಪ್ರತ್ಯೇಕಿಸಲಾಯಿತು. ಉತ್ತರಾಖಂಡವನ್ನು ವಿಶೇಷವಾಗಿ "ದೇವಭೂಮಿ" ಎಂದು ಕರೆಯಲಾಗುತ್ತದೆ. ಇದು ಭವ್ಯವಾದ ಹಿಮಾಲಯದಿಂದ ಕೂಡಿರುವ ರಾಜ್ಯವಾಗಿದ್ದು, ಉಸಿರು ಹಿಡಿದುಕೊಳ್ಳುವಂತಹ ದೃಶ್ಯಗಳು ನಮಗೆ ನೋಡಲು ಎರಡು ಕಣ್ಣುಗಳು ಸಾಲದೇನೋ ಎಂಬAತಹ ಸೌಂದರ್ಯ. ಅಧ್ಯಾತ್ಮಿಕ ಮಹತ್ವ ಮತ್ತು ಸಾಂಸ್ಕೃತಿಕ ಪರಂಪರೆಯೊAದಿಗೆ ಪ್ರಕೃತಿ ಪ್ರಿಯರಿಗೆ ಆಕರ್ಷಕ ತಾಣವಾಗಿದ್ದು, ರಾಜ್ಯವು ಹಿಮದಿಂದ ಆವೃತವಾಗಿ ಶಿಖರಗಳು, ಕಣಿವೆಗಳು ಮತ್ತು ಪ್ರಾಚೀನ ನದಿಗಳಿಂದ ಕೂಡಿ ನಯನ ಮನೋಹರವಾಗಿದೆ. ಟ್ರೆಕ್ಕಿಂಗ್ನಲ್ಲಿ ಆಸಕ್ತಿ ಇರುವವರಿಗೆ ಸವಾಲಿನ ಹಾದಿಗಳಿದ್ದು, ದೇಹವನ್ನು ದಂಡಿಸಿ, ಪ್ರಕೃತಿ ಸೌಂದರ್ಯ ಸವಿಯಬಹುದು.
ಉತ್ತರಾಖಂಡದ ಹಿಮನದಿಗಳಿಂದ ಹುಟ್ಟುವ ಗಂಗಾ ಮತ್ತು ಯಮುನಾ ಪವಿತ್ರ ನದಿಗಳು ಧಾರ್ಮಿಕ ಮಹತ್ವದ ಕಥೆಗಳನ್ನು ಹೊಂದಿವೆ. ಇದು ಬದರಿನಾಥ್, ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿಯAತಹ ಪೂಜನೀಯ ಯಾತ್ರಾ ಸ್ಥಳಗಳ ನೆಲೆಯಾಗಿದ್ದು, ಭಕ್ತರಲ್ಲಿ ಅಧ್ಯಾತ್ಮಿಕ ಜ್ಞಾನಕ್ಕೆ ಕಾರಣವಾಗಿದೆ. ವರ್ಷಕ್ಕೆ ಲಕ್ಷಾಂತರ ಯಾತ್ರಾರ್ಥಿಗಳು ಆಗಮಿಸುವಂತಹ ಪುಣ್ಯ ಭೂಮಿಯಾಗಿದೆ. ಗಂಗಾ ನದಿಯ ದಡದಲ್ಲಿರುವ ರಿಷಿಕೇಶವು ಯೋಗ ಮತ್ತು ಧ್ಯಾನಕ್ಕೆ ವಿಶ್ವ ಪ್ರಸಿದ್ಧಿ ಹೊಂದಿದೆ. ಇಲ್ಲಿರುವ ಪ್ರಾಚೀನ ಆಶ್ರಮಗಳು ಮತ್ತು ಧ್ಯಾನ ಕೇಂದ್ರಗಳು ಪ್ರಪಂಚದಾದ್ಯAತ ಜನರನ್ನು ಆಕರ್ಷಿಸುತ್ತದೆ. ಮತ್ತೊಂದು ಪವಿತ್ರ ನಗರವಾದ ಹರಿದ್ವಾರವು ಕುಂಭಮೇಳಕ್ಕೆ ಹೆಸರುವಾಸಿಯಾಗಿದ್ದು, ಪ್ರತಿ ೧೨ ವರ್ಷಗಳಿಗೊಮ್ಮೆ ಬೃಹತ್ ಕುಂಭಮೇಳದ ಸಂಗಮ ಸ್ನಾನವು ಸಾಧು ಸಂತರು, ಜನರನ್ನು ತನ್ನತ್ತ ಸೆಳೆಯುತ್ತದೆ.
ಉತ್ತರಾಖಂಡದ ಗಿರಿಧಾಮಗಳಾದ ನೈನಿತಾಲ್ ಮತ್ತು ಮಸ್ಸೂರಿ ಬಯಲು ಪ್ರದೇಶಗಳು ದೇವ ಲೋಕದಂತೆ ಕಾಣುತ್ತವೆ. ರಮಣೀಯ ಸೌಂದರ್ಯ ಹೊಂದಿರುವ ಇಲ್ಲಿಯ ಪಟ್ಟಣಗಳು ವಿಶ್ರಾಂತಿಯ ವಿಹಾರಕ್ಕೆ ಸೂಕ್ತವಾಗಿ ಹೇಳಿ ಮಾಡಿಸಿದಂತಿವೆ.
ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ವ್ಯಾಲಿ ಆಫ್ ಫ್ಲವರ್ಸ್ ಒಂದು ಅದ್ಭುತವಾದ, ನೈಸರ್ಗಿಕವಾದ ಭೂಪ್ರದೇಶ. ಇದು ರೋಮಾಂಚನವನ್ನು ಉಂಟು ಮಾಡುವ ವೈಲ್ಡ್ ಫ್ಲವರ್ಸ್ಗಳಿಗೆ ಹೆಸರುವಾಸಿಯಾಗಿದೆ. ಜಿಮ್ ಕಾರ್ಬೆಟ್ ನ್ಯಾಷನಲ್ ಪಾರ್ಕ್ ಸೇರಿದಂತೆ ರಾಜ್ಯದ ವನ್ಯಜೀವಿ ಅಭಯಾರಣ್ಯಗಳು ವೈವಿಧ್ಯಮಯ ಸಸ್ಯ ಸಂಪತ್ತು ಮತ್ತು ವಿವಿಧ ಪ್ರಾಣಿಗಳಿಗೆ ನೆಲೆಬೀಡಾಗಿದೆ. ಪ್ರವಾಸಿಗರು ನಿಂತಲ್ಲೇ ಹುಲಿಗಳು, ಚಿರತೆಗಳು, ಆನೆಗಳು ಮತ್ತು ವಿವಿಧ ಬಗೆಯ ಪಕ್ಷಿ ಪ್ರಬೇಧಗಳನ್ನು ವೀಕ್ಷಿಸಬಹುದು. ಉತ್ತರಾಖಂಡದ ಸಾಂಸ್ಕೃತಿಕ ಪರಂಪರೆಯು ಅದರ ನೈಸರ್ಗಿಕ ಸೌಂದರ್ಯದAತೆಯೇ ಶ್ರೀಮಂತವಾಗಿದೆ. ರಾಜ್ಯದ ಜಾನಪದ ನೃತ್ಯಗಳು, ಸಂಗೀತ ಮತ್ತು ಕರಕುಶಲ ಕಲೆಗಳು ಅದರ ವಿಶಿಷ್ಟ ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತವೆ. ಕುಮಾವೊನಿ ಮತ್ತು ಗರ್ವಾಲಿ ಸಂಸ್ಕೃತಿಗಳು, ತಮ್ಮ ವಿಭಿನ್ನ ಭಾಷೆಗಳು ಮತ್ತು ಪದ್ಧತಿಗಳೊಂದಿಗೆ, ರಾಜ್ಯದ ಸಾಂಸ್ಕೃತಿಕ ವೈವಿಧ್ಯತೆಯನ್ನು ಹೆಚ್ಚಿಸುತ್ತವೆ.
ಪಹಾರಿ ಭಾಷೆಗಳು ಕುಮಾವೋನಿ, ಗರ್ವಾಲಿ, ಜಾನ್ಸಾರಿ, ಗುರ್ಜರಿ ಮತ್ತು ಇತರ ಭಾಷೆಗಳನ್ನು ಉತ್ತರಾಖಂಡದಲ್ಲಿ ವ್ಯಾಪಕವಾಗಿ ಮಾತನಾಡುತ್ತಾರೆ. ಆಲೂ ಗುಟ್ ಕೆ, ಚೈನ್ ಸೋ, ಕಫುಲಿ ಜನ್ ಗೋರಾ ಕೆ, ಚಾಸ್ ಮೊದಲಾದವು ಇಲ್ಲಿಯ ಪ್ರಮುಖ ಖಾದ್ಯಗಳಾಗಿವೆ.
ಗಾಗ್ರ ಚೋಲಿ, ಪಿಚೋರ, ಆರ್ನೀ, ಕಮೀಜ್ ಮೊದಲಾದ ವಿಶೇಷ ವಿನ್ಯಾಸದ ವಸ್ತçಗಳನ್ನು ಧರಿಸುತ್ತಾರೆ. ಹೀಗೆ ಉತ್ತರಾಖಂಡವು ಎಲ್ಲರಿಗೂ ಏನನ್ನಾದರೂ ನೀಡುವ ಬಹುಮುಖಿ ಮನಮೋಹಕ ತಾಣವಾಗಿದೆ. ಹಿಮಾಲಯವೆಂಬ ಸ್ವರ್ಗವು ಪ್ರವಾಸಿಗರ ಮನಸಿನಲ್ಲಿ ಶಾಶ್ವತವಾದ ಮುದ್ರೆಯನ್ನು ಒತ್ತುತ್ತದೆ.
ಇಂತಹ ರಮಣೀಯ ತಾಣದ ರಾಣಿಭಾಗ್ನ ೮೧ ಯು ಕೆ ಬೆಟಾಲಿಯನ್ ಎನ್ಸಿಸಿ ಬಾಗೆಶ್ವರ್ನವರು ಆಯೋಜಿಸಿದ್ದ ಸೆಪ್ಟೆಂಬರ್ ೨೮ ರಿಂದ ಅಕ್ಟೋಬರ್ ೯ ರವರೆಗೆ ನಡೆದ ರಾಷ್ಟçಮಟ್ಟದ "ಏಕ್ ಭಾರತ್, ಶ್ರೇಷ್ಠ್ ಭಾರತ್" ಶಿಬಿರದಲ್ಲಿ ೧೯ ಕಾರ್ ಬೆಟಾಲಿಯನ್ ಎನ್ಸಿಸಿ ಮಡಿಕೇರಿ ಇದರ ಕಮಾಂಡಿAಗ್ ಆಫೀಸರ್ ಕರ್ನಲ್ ರೆಜಿತ್ ಮುಕುಂದನ್, ಆಡಂ ಆಫೀಸರ್ (ಎಓ) ಲೆಫ್ಟಿನೆಂಟ್ ಕರ್ನಲ್ ಶ್ರೀನಿವಾಸನ್ ಕೆ., ಸುಬೇದಾರ್ ಮೇಜರ್ ಶಿಜು ಇವರ ಮಾರ್ಗದರ್ಶನದಲ್ಲಿ ಕೊಡಗಿನ ೧೫ ಮಹಿಳಾ ಕೆಡೆಟ್ ತಂಡ, ೩೫ ಪುರುಷ ಕೆಡೆಟ್ ತಂಡ ಭಾಗವಹಿಸಿ ಸಾಧನೆ ಮಾಡಲು ಪ್ರೋತ್ಸಾಹ ನೀಡಿತು.
ಡೆಹ್ರಾಡೂನ್ ಗ್ರೂಪ್ ಕಮಾಂಡರ್ ಬ್ರಿಗೇಡಿಯರ್ ನಿತೀಶ್ ಬಿಸ್ಟ್, ೮೧ ಯುಕೆ ಬೆಟಾಲಿಯನ್ನ ಕಮಾಂಡಿAಗ್ ಆಫೀಸರ್ ಕರ್ನಲ್ ಸತ್ಯೇಂದ್ರ ತ್ರಿಪಾಠಿ, ಸುಬೇದಾರ್ ಮೇಜರ್ ವಿಕ್ರಮ್ ಕುಮಾರ್ ಶ್ರೇಷ್ಠ, ಸಾಂಸ್ಕೃತಿಕ ಜೆಸಿಓ ನೈಬ್ ಸುಬೇದಾರ್ ಕೈಲಾಶ್ ರಾವತ್ ಹಾಗೂ ವಿವಿಧ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಶಿಬಿರ ಆಯೋಜನೆಗೊಂಡಿತ್ತು. ಕೊಡಗಿನಂತಹ ಬೆಟ್ಟ ಗುಡ್ಡ ಪ್ರದೇಶದ ವಿದ್ಯಾರ್ಥಿಗಳಿಗೆ ಇಂತಹ ರಮಣೀಯ ಸ್ಥಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಟ್ಟ ಕೊಡಗು ೧೯ ಕಾರ್ ಬೆಟಾಲಿಯನ್ ಎನ್ಸಿಸಿ ಮಡಿಕೇರಿ ರವರಿಗೆ ಭಾಗವಹಿಸಿದ್ದ ಕೊಡಗು ಎನ್ಸಿಸಿ ಕೆಡೆಟ್ಗಳ ಪರವಾಗಿ ಕೃತಜ್ಞತೆಗಳು.
- ಮನ ಕೆ.ಆರ್., ದ್ವಿತೀಯ ಬಿಸಿಎ, ಕಾವೇರಿ ಕಾಲೇಜು ಗೋಣಿಕೊಪ್ಪ.