ವೀರಾಜಪೇಟೆ, ನ. ೯: ಮೂರನೇ ವರ್ಷದ ಕೊಡಗು ವಿಮೆನ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಕಟ್ಟೆಮಾಡಿನ ಬ್ಲಾö್ಯಕ್ ಪ್ಯಾಂಥರ್ಸ್ ವಿಮೆನ್ ತಂಡವು ಜಯಗಳಿಸಿತು. ಮಾಲ್ದಾರೆಯ ಟೀಮ್ ಇಲೆವೆನ್ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು.

ವೀರಾಜಪೇಟೆ ಜೂನಿಯರ್ ಕಾಲೇಜು ಮೈದಾನದಲ್ಲಿ ಪಂದ್ಯಾಟ ನಡೆಯಿತು. ಕಳೆದ ಮೂರು ವರ್ಷಗಳಿಂದ ನಡೆಯುತ್ತಿರುವ ವಿವಾಹಿತ ಮಹಿಳೆಯರ ಕ್ರಿಕೆಟ್ ಪಂದ್ಯಾಟದಲ್ಲಿ ಜಿಲ್ಲೆಯ ಒಟ್ಟು ಹನ್ನೊಂದು ತಂಡಗಳು ಭಾಗವಹಿಸಿದ್ದವು.

ಈ ಬಾರಿ ವೀರಾಜಪೇಟೆ ಸ್ಕೆöÊ ವಾರಿಯರ್ ತಂಡದವರು ಕ್ರಿಕೆಟ್ ಪಂದ್ಯಾಟ ನಡೆಸಿಕೊಟ್ಟರು. ಫೈನಲ್ ಪಂದ್ಯದಲ್ಲಿ ಕಟ್ಟೆಮಾಡಿನ ಬ್ಲಾö್ಯಕ್ ಪ್ಯಾಂಥರ್ಸ್ ವಿಮೆನ್ ತಂಡವು ಪ್ರಥಮ, ಮಾಲ್ದಾರೆಯ ಟೀಮ್ ಇಲೆವೆನ್ ತಂಡವು ದ್ವಿತೀಯ ಸ್ಥಾನ ಪಡೆಯಿತು. ಫೈನಲ್ ಪಂದ್ಯವನ್ನು ಸ್ಕೆöÊ ವಾರಿಯರ್ಸ್ ತಂಡದ ನಾಯಕಿ ಮುಕ್ಕಾಟೀರ ಸವಿತಾ ಪೊನ್ನಪ್ಪ ಬ್ಯಾಟ್ ಮಾಡಿ, ಮಾದಂಡ ಸುಶ್ಮ ತಿಮ್ಮಯ್ಯ ಬೌಲ್ ಮಾಡುವ ಮೂಲಕ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮುಲ್ಲೆರ ಪೊನ್ನಮ್ಮ ಮಾತನಾಡಿ ಕ್ರೀಡೆಯಿಂದ ಮನಸ್ಸು ಮತ್ತು ದೇಹ ಸದೃಢಗೊಳ್ಳುತ್ತದೆ ಎಂದರು.

ಡಾ. ಸೋನಿಯಾ ಮಂದಪ್ಪ, ಡಾ. ಚೇಂದೀರ ಬೋಪಣ್ಣ, ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಪಂದ್ಯಾಟಕ್ಕೆ ಶುಭ ಕೋರಿದರು. ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪ್ಯಾಂಥರ್ಸ್ ತಂಡದ ವರ್ಣ ಪಡೆದರು, ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ಜ್ಯೋತಿ ಪಡೆದು ಕೊಂಡರು, ಬೆಸ್ಟ್ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಟೀಂ ಇಲೆವೆನ್ ತಂಡದ ಪ್ರಮಿ ಪಡೆದರು.