ಮಡಿಕೇರಿ, ನ. ೯: ಕಂಡAಗಾಲ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾ ಸಮಿತಿ ವತಿಯಿಂದ ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಯತ್‌ನಾಡುವಿನಲ್ಲಿ ಐನ್‌ಮನೆಗಳಿರುವ ಕೊಡವ ಕುಟುಂಬಗಳ ನಡುವೆ ಡಿಸೆಂಬರ್ ೧೯ರಿಂದ ೨೫ರವರೆಗೆ ಹಾಕಿ ಪಂದ್ಯಾಟ ಏರ್ಪಡಿಸಲಾಗಿದೆ ಎಂದು ಸಮಿತಿಯ ಕಾರ್ಯದರ್ಶಿ ಮುಲ್ಲೇಂಗಡ ಸುರೇಶ್ ಭೀಮಯ್ಯ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಂಡAಗಾಲ ಶಾಲಾ ಮೈದಾನದಲ್ಲಿ ೭ ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ. ಬೇರಳಿನಾಡು, ಕುತ್ತುನಾಡು ಮತ್ತು ಬೊಟ್ಯತ್‌ನಾಡು ವ್ಯಾಪ್ತಿಗೆ ಒಳಪಡುವ ಬಿಟ್ಟಂಗಾಲ, ಬಿ.ಶೆಟ್ಟಿಗೇರಿ ಮತ್ತು ಹಾತೂರು ಗ್ರಾಮ ಪಂಚಾಯಿತಿಯ ಪಾರ್ಶ್ವ ಭಾಗ ಹಾಗೂ ಪೊನ್ನಂಪೇಟೆ ಪಂಚಾಯಿತಿ ವ್ಯಾಪ್ತಿಯಲ್ಲಿ ಐನ್‌ಮನೆಗಳಿರುವ ಕೊಡವ ಕುಟುಂಬಗಳು ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಬಹುದು. ಕೊಡವ ಸೇರಿದಂತೆ ಇತರೆ ಜನಾಂಗದ ೫ ಮಂದಿ ಅತಿಥಿ ಆಟಗಾರರಿಗೆ ತಂಡದಲ್ಲಿ ಸ್ಪರ್ಧಿಸಲು ಅವಕಾಶವಿದೆ. ಮಂದಮಾಡ ಕೊಡವ ಮುಸ್ಲಿಂ ಕುಟುಂಬವೂ ಪಾಲ್ಗೊಳ್ಳುತ್ತಿರುವುದು ಪಂದ್ಯಾವಳಿಯ ವಿಶೇಷತೆಯಾಗಿದೆ. ಡಿಸೆಂಬರ್ ೧೦ರೊಳಗೆ ತಂಡದ ಹೆಸರು ನೋಂದಾಯಿಸಿಕೊಳ್ಳುವAತೆ ಮಾಹಿತಿ ನೀಡಿದರು.
ಒಟ್ಟು ೭೦ ಕುಟುಂಬಗಳಲ್ಲಿ ಕಳೆದ ಬಾರಿ ೨೧ ತಂಡಗಳು ಭಾಗವಹಿಸಿದ್ದವು. ಈ ಬಾರಿ ೩೦ ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಹಾಕಿ ಪಂದ್ಯಾಟದ ವಿಜೇತ ತಂಡಕ್ಕೆ ಪ್ರಥಮ ಬಹುಮಾನ ರೂ.೫೦ ಸಾವಿರ, ದ್ವಿತೀಯ ರೂ.೩೦ ಸಾವಿರ, ತೃತೀಯ ರೂ.೨೦ ಸಾವಿರ, ಚತುರ್ಥ ರೂ.೧೦ ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವುದು ಎಂದರು.
ಸಮಿತಿಯ ಅಧ್ಯಕ್ಷ ಬಲ್ಲಡಿಚಂಡ ರವಿ ಸೋಮಯ್ಯ ಮಾತನಾಡಿ, ಹಾಕಿ ಪಂದ್ಯಾವಳಿಯ ನಡುವೆ ಒಂದು ದಿನ ಮಹಿಳೆಯರಿಗಾಗಿ ಹಗ್ಗಜಗ್ಗಾಟ ಏರ್ಪಡಿಸಿದ್ದು, ವಿವಾಹವಾದವರು ತಮ್ಮ ತವರು ಮನೆಯ ತಂಡವನ್ನು ಪ್ರತಿನಿಧಿಸಬಹುದು. ಹಗ್ಗಜಗ್ಗಾಟದ ವಿಜೇತ ತಂಡಕ್ಕೆ ೧೦ ಸಾವಿರ, ದ್ವಿತೀಯ ೭ ಸಾವಿರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ೯೪೮೨೨೪೬೮೬೦, ೯೪೮೧೯೫೧೭೩೨ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿ ಸದಸ್ಯ ಮೂಕಚಂಡ ಚುಮ್ಮಿ ದೇವಯ್ಯ ಹಾಜರಿದ್ದರು.