ಮಡಿಕೇರಿ, ನ. ೯: ಬಂದಿರ ಬೆಂದ್ಕಳೇ... ನಿಂಗಡ ಮನೆಲ್ ಸೌಖ್ಯತುಂಡಾ.., ಕಾವೇರಮ್ಮೆ ದೇವಿ ತಾಯಿ.., ಕಾಪಡೆಂಗಳಾ.. ಬಾಳೋ ಬಾಳೋ.., ಹಾಡುಗಳು ದುಡಿಕೊಟ್ಟ್ಪಾಟ್, ವಾಲಗ, ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿದ್ದ ಪುರುಷರು, ಮಹಿಳೆಯರು, ಮಕ್ಕಳು ಕೊಡವ ಸಾಂಸ್ಕೃತಿಕ- ಜನಪದ ವೈಭವವನ್ನು ಸಾರುವದರೊಂದಿಗೆ ಮಡಿಕೇರಿ ನಗರದಲ್ಲಿ ಆಯೋಜಿತಗೊಂಡಿದ್ದ ಅಂತರ ಕೊಡವಕೇರಿ ಮೇಳ ಗಮನಸೆಳೆಯಿತು.
ನಗರ ವ್ಯಾಪ್ತಿಯ ೧೨ ಕೊಡವಕೇರಿಗಳು ಒಂದೆಡೆ ಸಮಾಗಮಗೊಂಡು ಜಾನಪದ ಕಲೆಗಳಾದ ಬೊಳಕಾಟ್, ಕೋಲಾಟ್, ಪರೆಯಕಳಿ, ಕಪ್ಪೆಯಾಟ್, ಉಮ್ಮತಾಟ್, ಸಮ್ಮಂಧ ಅಡ್ಕುವೊ, ವಾಲಗತಾಟ್ ಮತ್ತಿತರ ಜನಪದ ನೃತ್ಯಗಳ ಅಂತರ ಕೇರಿಗಳ ನಡುವಿನ ಪೈಪೋಟಿ, ಸಭಾ ಕಾರ್ಯಕ್ರಮ, ಸನ್ಮಾನ, ಸಾಂಸ್ಕೃತಿಕ ಜಲಕ್, ಕೊಡವ ಹಾಡುಗಳು ರಸಮಂಜರಿಯAತಹ ಕಾರ್ಯಕ್ರಮಗಳು ಮಡಿಕೇರಿ ನಗರ ವ್ಯಾಪ್ತಿಯಲ್ಲೇ ಇದ್ದರೂ ಪರಸ್ಪರ ಪರಿಚಯ-ಬಾಂಧವ್ಯ ಇಲ್ಲದವರ ನಡುವೆ ಸಾಮರಸ್ಯ ಮೂಡಿಸುವ ಚಿಂತನೆಯ ಈ ಅಂತರಕೇರಿ ಮೇಳ ಯಶಸ್ಸು ಕಂಡಿತು.
ಕಳೆದ ಹಲವು ವರ್ಷಗಳ ಹಿಂದೆ ಪ್ರತಿ ಮೂರು ವರ್ಷಕ್ಕೆ ಅಂತರಕೇರಿ ಜನಪದ ಸಾಂಸ್ಕೃತಿಕ ಮೇಳ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಬಾರಿ ಒಂದೊAದು ಕೊಡವಕೇರಿಯ ಮುಂದಾಳತ್ವದಲ್ಲಿ ಮಡಿಕೇರಿ ಕೊಡವ ಸಮಾಜದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದು ೭ನೇಯ ಮೇಳವಾಗಿತ್ತು.
ಈ ಬಾರಿ ಸುಬ್ರಮಣ್ಯಕೇರಿ ಮುಂದಾಳತ್ವ ವಹಿಸಿದ್ದು, ಮಡಿಕೇರಿ ಕೊಡವ ಸಮಾಜದ ಆವರಣ ಇಂದು ಸಾಂಸ್ಕೃತಿಕ ಕಲರವದಿಂದ ಕೂಡಿತ್ತು.
ಬೆಳಿಗ್ಗೆ ತಳಿಯತಕ್ಕಿ ಬೊಳಕ್, ದುಡಿಕೊಟ್ಟ್ಪಾಟ್, ವಾಲಗದೊಂದಿಗೆ ದೇವನೆಲೆ (ನೆಲ್ಲಕ್ಕಿ ನಡುಬಾಡೆ)ಗೆ ಬಂದು ದೀಪ ಬೆಳಗಿ ತಪ್ಪಡ್ಕ ಕಟ್ಟುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹಿರಿಯರಾದ ನಂದೇಟಿರ ಗೌರಮ್ಮ ಅವರು ದೀಪ ಬೆಳಗಿದರೆ, ಸುಬ್ರಮಣ್ಯಕೇರಿಯ ಹಿರಿಯರಾದ ತೇಲಪಂಡ ಸಿ. ಮಾದಪ್ಪ ಅವರು ತಪ್ಪಡ್ಕ ಕಟ್ಟಿ ಪ್ರಾರ್ಥಿಸಿ ಧ್ವಜಾರೋಹಣ ಮಾಡಿದರು. ಈ ಸಂದರ್ಭ ಕೊಡವ ಸಮಾಜದ ಅಧ್ಯಕ್ಷರು ಸೇರಿದಂತೆ ಈತನಕ ಅಂತರಕೇರಿ ಮೇಳ ಆಯೋಜಿಸಿರುವ ವಿವಿಧ ಕೇರಿಗಳ ಅಧ್ಯಕ್ಷರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮ ಆರಂಭಗೊAಡಿತು.
ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ಆರಂಭಗೊAಡವು. ಕೊಡವ ಸಮಾಜದ ಅಧ್ಯಕ್ಷ ಮಂಡುವAಡ ಪಿ. ಮುತ್ತಪ್ಪ ಹಾಗೂ ಆಡಳಿತ ಮಂಡಳಿಯವರು, ಸುಬ್ರಮಣ್ಯ ಕೊಡವಕೇರಿಯ ಅಧ್ಯಕ್ಷ ಅರೆಯಡ ರಮೇಶ್ ಹಾಗೂ ಪದಾಧಿಕಾರಿಗಳು, ವಿವಿಧ ಕೊಡವಕೇರಿಗಳ ಅಧ್ಯಕ್ಷರುಗಳಾದ ಮುಂಡAಡ ಬಿ. ಪೂವಪ್ಪ, ಮೂವೆರ ಕೆ. ಜಯರಾಮ್, ಪಟ್ಟಡ
ಎಂ. ಕರುಂಬಯ್ಯ, ಕುಡುವಂಡ ಉತ್ತಪ್ಪ,
(ಮೊದಲ ಪುಟದಿಂದ) ಮಂಡಿರ ಎ. ಪೂಣಚ್ಚ, ಕಿರಿಯಮಾಡ ರತನ್ ತಮ್ಮಯ್ಯ, ಮೊಣ್ಣಂಡ ಶೋಭಾ ಸುಬ್ಬಯ್ಯ, ಚೋಳಪಂಡ ಎಂ. ವಿಜಯ, ಮುರುವಂಡ ಬಿ. ಈರಪ್ಪ, ಕೊಡವ ಸಮಾಜ ಕಲ್ಚರಲ್ ಅಂಡ್ ಸೋಷಿಯಲ್ ವೆಲ್ಫೇರ್ ಸೆಂಟರ್ನ ಅಧ್ಯಕ್ಷ ಮೂವೆರ ಶಂಭು ಸುಬ್ಬಯ್ಯ ಇನ್ನಿತರ ಪ್ರಮುಖರು ಹಾಜರಿದ್ದರು. ಅಪರಾಹ್ನ ಸಾಮೂಹಿಕ ಭೋಜನದ ಬಳಿಕ ಸಭಾ ಕಾರ್ಯಕ್ರಮ, ಸನ್ಮಾನ, ಸಂಜೆ ಕೊಡವ ಸಮಾಜ ಪೊಮ್ಮಕ್ಕಡ ಕೂಟ ಸೇರಿದಂತೆ ಇತರರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಮಾಳೇಟಿರ ಅಜಿತ್ ತಂಡ ಹಾಗೂ ಚೆಕ್ಕೇರ ಪಂಚಮ್ ಬೋಪಣ್ಣ ತಂಡದಿAದ ಕೊಡವ ಸಂಗೀತ ರಸಮಂಜರಿ ಜರುಗಿತು. ಮಾದೇಟಿರ ಬೆಳ್ಯಪ್ಪ ಹಾಗೂ ಚೋಕಿರ ಅನಿತಾ ದೇವಯ್ಯ ಕಾರ್ಯಕ್ರಮ ನಿರೂಪಿಸಿದರು.
ಕಾಯಪಂಡ ಶಶಿ ಸೋಮಯ್ಯ
ಚಿತ್ರಗಳು: ಪುತ್ತರಿರ ಕರುಣ್ ಕಾಳಯ್ಯ, ಲಕ್ಷಿö್ಮÃಶ್