ಕೂಡಿಗೆ, ನ. ೯ : ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳಿದೇವನ ಹೊಸೂರು ವ್ಯಾಪ್ತಿಯಲ್ಲಿ ಕಳೆದ ೧ ತಿಂಗಳಿನಿAದ ಆನೆಕಾಡು ಮೀಸಲು ಅರಣ್ಯ ಪ್ರದೇಶದ ಕಡೆಯಿಂದ ಬಂದಿರುವ ಕಾಡಾನೆಗಳು ಹಾರಂಗಿ ನದಿಯ ಸಮೀಪದ ಬೆಂಡೆಬೆಟ್ಟ ಅರಣ್ಯದ ಮೂಲಕ ಬಂದು ಹಾರಂಗಿ ನದಿಯನ್ನು ದಾಟಿ ಸಮೀಪದ ಜಮೀನಿಗೆ ದಾಳಿ ಮಾಡಿ ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶದಲ್ಲಿ ಬೆಳೆಸಲಾಗಿರುವ ಭತ್ತವನ್ನು ನಾಶಗೊಳಿಸಿವೆ. ಅಲ್ಲದೆ ೧೦೦ಕ್ಕೂ ಹೆಚ್ಚು ಅಡಿಕೆ ಮರಗಳಿಗೆ ಹಾನಿ ಮಾಡಿವೆ.
ಕಾಳಿದೇವನ ಹೊಸೂರು, ಹುದುಗೂರು, ಗ್ರಾಮದ, ದಾದ ಉತ್ತಯ್ಯ, ರಮೇಶ್, ಭರತ್, ಮಂಜುನಾಥ, ಚೆಂಗಪ್ಪ, ಎಂಬ ರೈತರ ಜಮೀನಿಗೆ ಕಾಡಾನೆಗಳು ದಾಳಿ ಮಾಡಿ ಭತ್ತ ಬೆಳೆಯನ್ನು ನಾಶಗೊಳಿಸಿವೆ.
ದಾದ ಉತ್ತಯ್ಯ ಅವರ ಅಡಿಕೆ ತೋಟದಲ್ಲಿ ೧೦೦ಕ್ಕೂ ಹೆಚ್ಚು ಅಡಿಕೆ ಮರಗಳು ನಾಶವಾಗಿವೆ. ಸ್ಥಳಕ್ಕೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿ ಚಂದ್ರೇಶ್, ಸೇರಿದಂತೆ ಸಿಬ್ಬಂದಿ ವರ್ಗದವರು ತೆರಳಿÀ ಪರಿಶೀಲನೆ ನಡೆಸಿದರು.