ಮಡಿಕೇರಿ, ನ. ೯: ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಗೆ ಒಳಪಡಿವ ಹೊಸಪಟ್ಟಣ ಗ್ರಾಮದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ೧೭೦ನೇ ಜಯಂತಿ ಹಾಗೂ ೫ನೇ ವರ್ಷದ ಓಣಂ ಆಚರಣೆ ನಡೆಯಿತು.
ಸಂಘದ ಅಧ್ಯಕ್ಷರಾದ ನವೀನ್ ಟಿ.ಜಿ. ಇವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸಪಟ್ಟಣ ಗ್ರಾಮದಲ್ಲಿ ಸ್ಥಾಪಿಸಲ್ಪಟ್ಟಿರುವ ಶ್ರೀ ಮುತ್ತಪ್ಪ ದೇವಾಲಯದಲ್ಲಿ ನಾರಾಯಣಗುರು ಪೂಜೆ ಮತ್ತು ಪಯಂಗುತ್ತಿ ಪೂಜೆ ನಡೆಯಿತು. ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು, ಭಕ್ತಾದಿಗಳಿಂದ ಮೆರವಣಿಗೆ ಮೂಲಕ ಹೊಸಪಟ್ಟಣ ಗ್ರಾಮದ ಮೈದಾನಕ್ಕೆ ತೆರಳಿ, ಅಲ್ಲಿ ಸಭಾ ಕಾರ್ಯಕ್ರಮಗಳು ನಡೆಯಿತು.
ಎಸ್.ಎನ್.ಡಿ.ಪಿ. ಸಂಘಟನೆಯ ಸದಸ್ಯರುಗಳು ಭಾಗಿಯಾಗಿದ್ದು, ಹೊಸಪಟ್ಟಣ ನಿವಾಸಿ ನಾರಾಯಣ ಟಿ.ಪಿ. ಅವರು ಬ್ರಹ್ಮಶ್ರೀ ನಾರಾಯಣ ಗುರು ಸಂಸ್ಥೆಗೆ ೦.೧೫ ಸೆಂಟ್ ಸ್ಥಳವನ್ನು ದಾನವಾಗಿ ನೀಡಿದ್ದು, ಸಂಘದ ವಿವಿಧ ಕಾರ್ಯಕ್ರಮಗಳಿಗೆ ಇದನ್ನು ಬಳಸಿಕೊಂಡು ಊರಿನ ಏಳಿಗೆಗೆ ಶ್ರಮಿಸುವಂತೆ ಆಶಿಸಿದರು.
ವಿವಿಧ ಕ್ರೀಡಾಕೂಟಗಳಿಗೆ ಉದ್ಯಮಿ ತ್ಯಾಗತ್ತೂರು ಗ್ರಾಮದ ವಿಜಯನ್ ಚಾಲನೆ ನೀಡಿದರು. ಮಲೆಯಾಳಿ ಸಂಪ್ರದಾಯದ ಓಣಂ ಹಬ್ಬದ ಸಸ್ಯಾಹಾರಿ ಊಟೋಪ ಚಾರವನ್ನು ಏರ್ಪಡಿಸಲಾಗಿತ್ತು.
ಸಂಜೆ ತನಕ ನಡೆದ ಈ ಕಾರ್ಯಕ್ರಮದಲ್ಲಿ ವಿವಿಧ ಗಣ್ಯರು ಪಾಲ್ಗೊಂಡಿದ್ದರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮನರಂಜಿಸಿತು.