ವಿರಾಜಪೇಟೆ, ನ.೧೧: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಸಂಜೀವಿನಿ-ಕರ್ನಾಟಕ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಹಾಗೂ ಕೊಡಗು ಜಿಲ್ಲಾ ಪಂಚಾಯಿತಿ ಮಡಿಕೇರಿ ಮತ್ತು ವೀರಾಜಪೇಟೆ ತಾಲೂಕು ಪಂಚಾಯಿತಿ ಪೊನ್ನಂಪೇಟೆ ಇವರ ಆಶ್ರಯದಲ್ಲಿ ಬೇಟೋಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ನಡೆದ ಸಂಜೀವಿನಿ ಮಾಸಿಕ ಸಂತೆ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿತ್ತು.

ವಸ್ತು ಪ್ರದರ್ಶನ ಮಾರಾಟ ಮೇಳವನ್ನು ಬೇಟೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎಂ. ಬೋಪಣ್ಣ ಅವರು ಉದ್ಘಾಟಿಸಿ, ಬಳಿಕ ಮಾತನಾಡಿ ಸಂಜೀವಿನಿ ಸಂಘಟನೆಯ ಮಹಿಳೆಯರು ಮನೆ ಮನೆಯಲ್ಲಿ ತರಕಾರಿ ಮತ್ತು ಇತರ ಉತ್ಪನ್ನಗಳ ಬೆಳೆದು ಮಾರಾಟ ಮೇಳವನ್ನು ನಡೆಸುತ್ತಿರುವುದು ಉತ್ತಮ ಕಾರ್ಯ ಮುಂದೆಯು ಯಶಸ್ವಿಯಾಗಿ ನಡೆಯಲಿ ಎಂದರು.

ಈ ಸಂದರ್ಭ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ಮಣಿ, ಕಾರ್ಯದರ್ಶಿ ಶಿವಕುಮಾರ್ ಮತ್ತು ಸದಸ್ಯರುಗಳು ಹಾಗೂ ಸಂಜೀವಿನಿ ಒಕ್ಕೂಟದ ಸಮುದಾಯ ಸಂಪನ್ಮುಲ ವ್ಯಕ್ತಿ ಕವಿತ, ಒಕ್ಕೂಟದ ಬರಹಗಾರ್ತಿ ವಿದ್ಯಾ ಸತೀಶ್, ಪಶು ಸಖಿಯ ಶೋಭ ಹಾಗೂ ಮುತ್ತಮ್ಮ, ತುಳಸಿ ಭಾಸ್ಕರ್, ಆಲಿಡಿಸೋಜ ಮತ್ತಿತರರು ಹಾಜರಿದ್ದರು.