ಕೂಡಿಗೆ, ನ. ೧೧ : ಕೂಡಿಗೆ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷ ಕೆ.ಟಿ. ಗಿರೀಶ್ ಅವರ ಅಧ್ಯಕ್ಷತೆಯಲ್ಲಿ ಜರುಗಿತ್ತು. ಸಭೆಯ ನಡವಳಿಕೆ ಮತ್ತು ಹಿಂದಿನ ಸಭೆಯ ವರದಿಯನ್ನು ಸಮರ್ಪಕವಾಗಿ ಮಾಡಿದ ಬಗ್ಗೆ ಮತ್ತು ಕೂಡಿಗೆಯಲ್ಲಿ ಮದ್ಯದ ಅಂಗಡಿಗೆ ಪರವಾನಿಗೆ ನೀಡುವ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಅಭಿವೃದ್ಧಿ ಅಧಿಕಾರಿ ಮನಬಂದAತೆ ಪರವಾನಿಗೆ ನೀಡಿರುವ ಬಗ್ಗೆ ಸದಸ್ಯರಾದ ರವಿ, ಹಮೀದ್, ಜಯಶ್ರೀ ಆಕ್ಷೇಪಿಸಿದರು. ನಂತರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಸರಕಾರಿ ಜಾಗವನ್ನು ಇತರರು ಒತ್ತುವರಿ ಮಾಡಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿಯಮದ ಅಡಿಯಲ್ಲಿ ಸರ್ವೆ. ನಡೆಸಿ ಜಾಗವನ್ನು ಸಂರಕ್ಷಣೆ ಮಾಡುವ ಮೂಲಕ ನಿವೇಶನ ರಹಿತರಿಗೆ ಹಂಚುವ ವ್ಯವಸ್ಥೆಗೆ ಮುಂದಾಗಬೇಕೆAದು ತೀರ್ಮಾನಿಸ ಲಾಯಿತು.
ಗ್ರಾಮದ ಅಭಿವೃದ್ಧಿಗೆ ಪೂರಕವಾದ ಮತ್ತು ೧೫ನೇ ಹಣಕಾಸಿನ ಕಾಮಗಾರಿಯನ್ನು ಆದ್ಯತೆಯ ಅನುಗುಣವಾಗಿ ಕಾಮಗಾರಿಗಳನ್ನು ಸಂಪೂರ್ಣವಾಗಿ ಪೂರ್ಣಗೊಳಿಸುವ ಬಗ್ಗೆ ಚರ್ಚೆಗಳು ನಡೆದವು. ಅಲ್ಲದೇ ಮುಂದಿನ ದಿನಗಳಲ್ಲಿ ವಾರ್ಡ್ ಮತ್ತು ಗ್ರಾಮ ಸಭೆಯನ್ನು ನಡೆಸುವ ದಿನಾಂಕವನ್ನು ನಿಗದಿ ಮಾಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಕೆ.ಟಿ. ಗಿರೀಶ್ ಕುಮಾರ್ ಮಾತನಾಡಿ, ಮಾಸಿಕ ಸಭೆಯ ತಿರ್ಮಾನದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್ಗಳಲ್ಲಿ ಶುಚಿತ್ವಕ್ಕೆ ಹೆಚ್ಚಿನ ಅಧ್ಯತೆ, ಬೀದಿ ದೀಪಗಳ ದುರಸ್ತಿಗೆ ಕ್ರಮವನ್ನು ಕೈಗೊಳ್ಳಲಾಗಿದೆ. ಗ್ರಾಮದ ಅಭಿವೃದ್ಧಿಗೆ ಪೂರಕವಾದ ಯೋಜನೆಯನ್ನು ಕೈಗೊಳ್ಳಲು ಸದಸ್ಯರ ಸಹಕಾರ ಮುಖ್ಯ ಎಂದರು. ಅಭಿವೃದ್ಧಿ ಅಧಿಕಾರಿ ಮಂಜುಳಾ ಸಹಕಾರದ ಯೋಜನೆಗಳ ಬಗ್ಗೆ ಮತ್ತು ಸಾರ್ವ ಜನಿಕರ ಅರ್ಜಿಗಳ ಮಾಹಿತಿಯನ್ನು ಸಭೆಯ ಗಮನಕ್ಕೆ ತಂದರು. ಉಪಾಧ್ಯಕ್ಷೆ ಜಯಶ್ರೀ, ಸದಸ್ಯರಾದ ಟಿ.ಪಿ. ಹಮೀದ್, ಅರುಣ್ ರಾವ್, ಮಂಗಳ, ಮೋಹಿನಿ, ಅನಂತ, ಕೆ.ಎಸ್. ವಿವಕುಮಾರ್, ಚಂದ್ರು, ಹೆಚ್.ಎಸ್. ರವಿ, ಲಕ್ಷಿ, ಕಾರ್ಯದರ್ಶಿ ಪುನೀತ್ ಹಾಜರಿದ್ದರು.