ವೀರಾಜಪೇಟೆ, ನ. ೧೧ : ಟಾಟಾ ಸಂಸ್ಥೆ ವತಿಯಿಂದ ಕಣ್ಣಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ರಸ್ತೆ ಬದಿ ಗಿಡಗಂಟಿಗಳನ್ನು ಕಡಿದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಸಂಸ್ಥೆಯ ವ್ಯವಸ್ಥಾಪಕ ವಿನಯ್, ವರ್ಷದಲ್ಲಿ ೨ ಬಾರಿ ಟಾಟಾ ಸಂಸ್ಥೆಯು ಗ್ರಾಮದ ಚರಂಡಿ ಮತ್ತು ರಸ್ತೆ ಬದಿ ಗಿಡಗಂಟಿಗಳನ್ನು ಕಡಿದು ಸ್ವಚ್ಛಗೊಳಿಸುವ ಕಾರ್ಯಕ್ರಮವನ್ನು ನಡೆಸುತ್ತಿದೆ. ರಸ್ತೆ ಬದಿ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ವಿಲೇವಾರಿ ಮಾಡಿ ಇಲ್ಲಿನ ಪರಿಸರವನ್ನು ಸ್ವಚ್ಛವಾಗಿಡಲು ಸಹಕರಿಸುತ್ತೇವೆ. ಕಳೆದ ಬಾರಿ ಅಮತ್ತಿಯಲ್ಲಿ ಇದೇ ರೀತಿಯ ಕಾರ್ಯಕ್ರಮವನ್ನು ಮಾಡಿದ್ದೇವು ಎಂದು ಹೇಳಿದರು.
ಕಣ್ಣಂಗಾಲ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್. ಗೋಪಾಲಕೃಷ್ಣ ಮಾತನಾಡಿದರು. ಕಣ್ಣಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗ್ರೀಷ್ಮಾ ಮಾತನಾಡಿ, ಕಣ್ಣಂಗಾಲ ಗ್ರಾಮ ಪಂಚಾಯಿತಿಗೆ ಸ್ವಚ್ಛತಾ ಕಾರ್ಯಕ್ರಮ ನಡೆಸುವ ಮೂಲಕ ನಮಗೆ ಎಲ್ಲಾ ರೀತಿಯ ಸಹಕಾರವನ್ನು ಟಾಟಾ ಸಂಸ್ಥೆ ನೀಡಿದೆ. ಇದೇ ರೀತಿ ಅವರ ಸಹಕಾರ ಇನ್ನು ಮುಂದೆ ಸಿಗುವಂತಾಗಲಿ ಎಂದು ಹೇಳಿದರು.
ಟಾಟಾ ಸಂಸ್ಥೆಯ ವ್ಯವಸ್ಥಾಪಕ ವಿನಯ್, ಗ್ರಾ.ಪಂ. ಉಪಾಧ್ಯಕ್ಷ ರಜನಿ ಕುಟ್ಟಪ್ಪ, ಸದಸ್ಯರುಗಳಾದ ಜೀವನ್, ಕುಮಾರ್, ಕಲ್ಪೇಸ್, ಶಾಂತಿ, ವಿ.ಟಿ. ಕಿರಣ್, ಅಜಿತ್ ಮತ್ತು ಪಂಚಾಯಿತಿ ಹಾಗೂ ಟಾಟಾ ಕಾಫಿ ಸಿಬ್ಬಂದಿ ವರ್ಗದವರು ಹಾಜರಿದ್ದರು.